ನಲಿದಿಹಳು ನೃತ್ಯದಲಿ ಪಾರಿಜಾತೆ
ಸೆಳೆದಿಹಳು ಚಿತ್ತವ ಪರಿಮಳದಿ ಸುತೆ
ಅಪ್ಪಿಹಳು ತ್ರಿವಳಿ ಎಲೆಗಳ ಈ ಮಾತೆ
ಧರಿಸಿಹಳು ಶ್ವೇತ ಮೊಗ್ಗುಗಳ ಪುನೀತೆ
ನಡುವಲೊಂದು ಬೋರಲಾದ ಗುಲಾಬಿ
ನಾಲ್ಕು ಡಿಕ್ಕಿಗೂ ಪುಟ್ಟ ಹೂಗಳ ಲಾಬಿ
ತುದಿಯಲಿ ಹಣ್ಣಿನ ಬೀಜಗಳ ಅಬಾಬಿ
ಇದುವೇ ಕಾವ್ಯಚಿತ್ತಾರ ಔತಣದ ಸುರಭಿ
- ಲಲಿತಾ ಕೆ ಆಚಾರ್ ಬೆಂಗಳೂರು




















