ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭತ್ತದ ಕಣಜ ಸಿರುಗುಪ್ಪದ ಐತಿಹಾಸಿಕ ಸ್ಮಾರಕಗಳ ಕಡಗಣನೆ

ವಿಶೇಷ ಲೇಖನ : ಮಸೀದಿ ಅಬ್ದುಲ್ ಗೌಸ್ ಸಿರುಗುಪ್ಪ

ಪ್ರದೇಶದ ಇತಿಹಾಸವು ಮೌರ್ಯರ ಕಾಲದಿಂದಲೂ ಇದೆ. ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಅಶೋಕ ರಾಜನ ಶಾಸನಗಳು ಕಂಡು ಬರುತ್ತವೆ . ತಾಲ್ಲೂಕು ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ತೆಕ್ಕಲಕೋಟೆಯು ಇತಿಹಾಸ ಪೂರ್ವ ನವಶಿಲಾಯುಗದ ಶಿಲಾ ವರ್ಣಚಿತ್ರಗಳ ಪುರಾವೆಗಳನ್ನು ತೋರಿಸಿದೆ. ಈ ಪ್ರದೇಶವನ್ನು ನಂತರ ಚಾಲುಕ್ಯರು , ವಿಜಯನಗರ ಸಾಮ್ರಾಜ್ಯದಂತಹ ಅನೇಕ ಪ್ರಸಿದ್ಧ ರಾಜವಂಶಗಳು ಆಳಿದವು .

ತಾಲ್ಲೂಕು ಕೇಂದ್ರವಾಗಿ
ಸಂಪಾದಿಸಿ ಬ್ರಿಟಿಷ್ ಆಳ್ವಿಕೆಯಲ್ಲಿ, ಸಿರುಗುಪ್ಪ ಸುತ್ತಮುತ್ತಲಿನ ಪ್ರದೇಶವನ್ನು ಅಕ್ಟೋಬರ್ 1, 1910 ರಂದು ಬಳ್ಳಾರಿ ತಾಲ್ಲೂಕಿನಿಂದ 46 ಗ್ರಾಮಗಳು, ಅದೋನಿ ತಾಲ್ಲೂಕಿನಿಂದ 29 ಮತ್ತು ಆಲೂರು ತಾಲ್ಲೂಕಿನಿಂದ 23 ಗ್ರಾಮಗಳನ್ನು ವಿಲೀನಗೊಳಿಸಿ ತಾಲ್ಲೂಕಾಗಿ ಮಾಡಲಾಯಿತು. ಆದಾಗ್ಯೂ, ಏಪ್ರಿಲ್ 1, 1923 ರಂದು ಸಿರುಗುಪ್ಪ ತಾಲ್ಲೂಕನ್ನು ರದ್ದುಗೊಳಿಸಲಾಯಿತು. ಮತ್ತೊಮ್ಮೆ, ಏಪ್ರಿಲ್ 15, 1929 ರಂದು, ಅದೋನಿ ತಾಲ್ಲೂಕಿನಿಂದ 33 ಗ್ರಾಮಗಳು, ಆಲೂರು ತಾಲ್ಲೂಕಿನಿಂದ 7 ಗ್ರಾಮಗಳು ಮತ್ತು ಬಳ್ಳಾರಿ ತಾಲ್ಲೂಕಿನ ಸಿರುಗುಪ್ಪ ಉಪ ತಹಶೀಲ್ದಾರ್ ವಿಭಾಗದಲ್ಲಿ ಸೇರಿಸಲಾದ ಹಳ್ಳಿಗಳನ್ನು ಸಿರುಗುಪ್ಪವನ್ನು ಅದರ ಕೇಂದ್ರ ಕಚೇರಿಯಾಗಿ ಹೊಂದಿರುವ ಹೊಸ ತಾಲ್ಲೂಕಾಗಿ ರಚಿಸಲಾಯಿತು.
ತಾಲ್ಲೂಕು ದಕ್ಷಿಣದಲ್ಲಿ ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕು, ಪಶ್ಚಿಮದಲ್ಲಿ ಕಾರಟಗಿ ತಾಲ್ಲೂಕು, ಉತ್ತರದಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕು ಮತ್ತು ಪೂರ್ವದಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ತಾಲ್ಲೂಕುಗಳಿಂದ ಸುತ್ತುವರೆದಿದೆ.

ಇತಿಹಾಸ :
ಒಂದು ಕಾಲದಲ್ಲಿ ಸಿರಗುಪ್ಪ ಸಿರಿಕುಪ್ಪೆಯಾಗಿರಬೇಕು. ವಿಜಯನಗರದ ಅರಸರು ಕಟ್ಟಿಸಿದ ಕುತೂಹಲಕಾರಿ ಶಿಲ್ಪವುಳ್ಳ ಅಣೆಕಟ್ಟುಗಳು ಸಿರಗುಪ್ಪದ ಹತ್ತಿರವಿರುವ ಕೆಂಚನಗುಡ್ಡದ ಬಳಿ ಇವೆ. ಸಮೀಪದಲ್ಲೆ ಮಂತ್ರಾಲಯ ಮಠದ ಶ್ರೀವಸುಧೇಂದ್ರ ಸ್ವಾಮಿಗಳ ಬೃಂದಾವನವಿದೆ. ಇಲ್ಲಿಯ ಕೋಟೆ ಕೊತ್ತಲದ ಮೇಲೆ ಪ್ರಾಚೀನ ಶಂಭುಲಿಂಗ ದೇವಾಲಯವಿದೆ. ಸ್ಥಳೀಯ ಶ್ರೀಮಂತ ವ್ಯಾಪಾರಿಯೊಬ್ಬ 1887ರಲ್ಲಿ ಕಟ್ಟಿಸಿದ ಇಲ್ಲಿನ ಕೊಟ್ಟೂರು ಬಸವಣ್ಣ ದೇವಾಲಯ ಆಧುನಿಕ ನಿರ್ಮಾಣ.

ಕರ್ನಾಟಕದ ಪ್ರಬಲ ಭಾಷೆಯಾದ ಕನ್ನಡದಲ್ಲಿ ಸಿರುಗುಪ್ಪ ಎಂದರೆ “ಸಣ್ಣ ಬೆಟ್ಟಗಳ ಸಮೂಹ” ಎಂದರ್ಥ. ಈ ಹೆಸರು “ಸಿರುಗುಡ್ಡೆ” ಯಿಂದ ಬಂದಿದೆ, ಅಲ್ಲಿ “ಸಿರು” ಎಂದರೆ ಸಣ್ಣದು ಮತ್ತು “ಗುಡ್ಡೆ” ಎಂದರೆ ಬೆಟ್ಟ ಅಥವಾ ದಿಬ್ಬವನ್ನು ಸೂಚಿಸುತ್ತದೆ. ನಗರದ ಸುತ್ತಮುತ್ತಲಿನ ಪ್ರದೇಶದ ಭೌಗೋಳಿಕ ಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.

ವಿಜಯನಗರ ಅರಸರ ಕಾಲದಲ್ಲಿ ತಾಲ್ಲೂಕು ಸಮೃದ್ಧ ನೀರಾವರಿ ವ್ಯವಸ್ಥೆ ಹೊಂದಿದ ಹೆಗ್ಗಳಿಕೆ ಪಡೆದಿದ್ದು, ಇಲ್ಲಿಯ ಬೆಲ್ಲ ಹಾಗೂ ವೀಳ್ಯದೆಲೆ ಪ್ರಸಿದ್ಧಿ ಪಡೆದಿದ್ದವು.ಯುವಕರು ಐತಿಹಾಸಿಕ ಪ್ರದೇಶಗಳ ಬಗ್ಗೆ ಆಸಕ್ತಿ ವಹಿಸಬೇಕು. ಇತಿಹಾಸವೆಂದರೆ ರಾಜ ರಾಣಿ, ಮಂತ್ರಿಗಳ ಕಥೆಯಲ್ಲ, ಯಾವ ಮನುಷ್ಯ ಸಮಾಜದ ಬದಲಾವಣೆಗಾಗಿ ಕಾರಣನಾದನೋ ಆ ವ್ಯಕ್ತಿಯ ಬಗ್ಗೆ ಜನಸಾಮಾನ್ಯರ ನೋವು ನಲಿವುಗಳ ಬಗ್ಗೆ ತಿಳಿಯುವುದೇ ಇತಿಹಾಸ.

ತಾಲ್ಲೂಕಿನ ಇತಿಹಾಸವನ್ನು ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆಯಲ್ಲಿ ಕ್ರಿ.ಶ.300ರಿಂದ ಬ್ರಿಟಿಷರ ಆಳ್ವಿಕೆವರೆಗೂ ಸಂಶೋಧನೆ ನಡೆಸಲಾಗಿದ್ದು, ಜನ ಸಾಮಾನ್ಯರಿಗೂ ತಿಳಿಯಲು ಪುಸ್ತಕ ರೂಪದಲ್ಲಿ ಹೊರತರಲಾಗಿದ್ದು, ಇತಿಹಾಸದ ಸಂಶೋಧನೆ ನಿರಂತರವಾಗಿ ನಡೆಯಬೇಕು.
ಇತಿಹಾಸ ಪ್ರಸಿದ್ಧ ಸಾಮ್ರಾಟ ಅಶೋಕನ ಮೂರು ಶಾಸನಗಳು ಅನಾಥವಾಗಿದ್ದರೂ ಕ್ರಮಕ್ಕೆ ಮುಂದಾಗಬೇಕಾಗಿದ್ದ ಪುರಾತತ್ವ ಇಲಾಖೆ ಹಾಗೂ ಜಿಲ್ಲಾ ಆಡಳಿತ ಮೌನ ವಹಿಸಿವೆ.

ಈ ತಾಲ್ಲೂಕು ‘ವಿಜಯನಗರ ಸಾಮ್ರಾಜ್ಯ’ದ ಆಳ್ವಿಕೆಗೆ ತಾಲ್ಲೂಕು ಒಳಪಟ್ಟಿತ್ತು. ಚಾಲುಕ್ಯ ಅರಸರು ಹಾಗೂ ಸಾಮ್ರಾಟ ಅಶೋಕ ಸಮಾಜದಲ್ಲಿ ಶಾಂತಿ ಸಂದೇಶ ಸಾರುವ ಮೂರು ಶಾಸನಗಳ ವಿಷಯ ಬಗ್ಗೆ ಮಾಹಿತಿ ಇದ್ದು, ಈಗ ಅವು ರಕ್ಷಣೆ ಇಲ್ಲದೆ ಅನಾಥವಾಗಿವೆ.

ಪ್ರಚಾರದ ಕೊರತೆ :
ಪುರಾತತ್ವ ಇಲಾಖೆ ಹಾಗೂ ಜಿಲ್ಲಾ
ಆಡಳಿತ ಇವುಗಳ ರಕ್ಷಣೆಗೆ ಮುಂದಾಗಬೇಕಾಗಿದೆ. ಅಕ್ಕಪಕ್ಕದಲ್ಲಿ ನಡೆಯುವ ಕಲ್ಲುಗಣಿಗಾರಿಕೆಯಿದಾಗಿ ಶಾಸನಗಳು ಹಾಳಾಗುತ್ತಿವೆ. ವಿದ್ಯಾರ್ಥಿಗಳಿಗೆ ಶಾಸನವನ್ನು ವೀಕ್ಷಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ‘ಸಾಮ್ರಾಟ ಅಶೋಕ ಬೌದ್ಧ ಧರ್ಮದ ಪ್ರಚಾರ ಮಾಡಿರುವ ಮಾಹಿತಿಗಳ ಶಾಸನವು ತಾಲ್ಲೂಕಿನ ‘ನಿಟ್ಟೂರು’ಗ್ರಾಮದ ಹೊರವಲಯದಲ್ಲಿ ಒಂದು ಹಾಗೂ ‘ಉಡೆಗೋಳ’ದಲ್ಲಿ ಗ್ರಾಮದಲ್ಲಿ ಎರಡು ದೊರೆತಿರುವುದು ಸಾಕ್ಷಿಯಾಗಿವೆ. ‘ಬಂಡೆಗಲ್ಲಿನ ಮೇಲೆ 18 ಸಾಲುಗಳಿರುವ ಅಶೋಕನ ಸಂದೇಶವನ್ನು ಕೆತ್ತಲಾಗಿದ್ದು ಎರಡು ಶಾಸನಗಳು ಕಾಣಬಹುದು’

ಪುರಾತತ್ವ ಇಲಾಖೆ :
ರಾಜ್ಯದಲ್ಲಿ 11 ಅಶೋಕನ ಶಾಸನಗಳು ದೊರೆತಿವೆ. ಅವುಗಳಲ್ಲಿ ಮೂರು ಶಾಸನಗಳು ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಹಾಗೂ ಉಡೆಗೋಳ ಗ್ರಾಮದಲ್ಲಿ ದೊರೆತಿರುವುದು ಹೆಮ್ಮೆಯ ಸಂಗತಿ. ಆದರೆ ಮಸ್ಕಿ ತಾಲ್ಲೂಕಿನಲ್ಲಿ ದೊರೆತ ಅಶೋಕನ ಶಿಲಾ ಶಾಸನವು ಜಾಗತಿಕ ಭೂಪಟದಲ್ಲಿ ಪ್ರಸಿದ್ದವಾಗಿ ರಾಷ್ಟ್ರದ ಗಮನ ಸಳೆದಿದೆ. ಅದರಂತೆ ಸಿರುಗುಪ್ಪ ತಾಲ್ಲೂಕಿನಲ್ಲಿರುವ ಮೂರು ಶಾಸನಗಳು ಅನಾಥವಾಗಿದ್ದು, ಪುರಾತತ್ಯ ಇಲಾಖೆ ಗಮನ ಹರಿಸಿದಲ್ಲಿ ರಾಷ್ಟ್ರ ಮಟ್ಟದಲ್ಲಿ ಮಹತ್ವ ಪಡೆಯಬಹುದು.

ಸರಕಾರ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುತ್ತದೆಯಾ? ಕಾದು ನೋಡೋಣ…

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!