ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗೋಣಿಕೊಪ್ಪಲುವಿನ ನೂತನ ಟರ್ಫ್ ಮೈದಾನ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ

ವಿರಾಜಪೇಟೆ :ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಟರ್ಫ್ ಮೈದಾನವನ್ನು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಎ. ಎಸ್. ಪೊನ್ನಣ್ಣ ರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮನೆ ಶಾಸಕರು, ಕ್ರೀಡೆಯನ್ನು ಪ್ರೋತ್ಸಾಹಿಸುವುದು ಸರಕಾರದ ಹಾಗೂ ತನ್ನ ಕರ್ತವ್ಯವಾಗಿದ್ದು, ಕ್ರೀಡೆಗೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಕೊಡಗಿನ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ಸರಕಾರದ ಹಾಗೂ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಉತ್ತಮ ಸೌಲಭ್ಯ ನೀಡಿದಲ್ಲಿ ನಾಡಿನ ಮತ್ತಷ್ಟು ಯುವ ಕ್ರೀಡಾಪಟುಗಳು ಮುನ್ನೆಲೆಗೆ ಬರಲು ಸಹಕಾರಿಯಾಗುತ್ತದೆ ಎಂದು ಹೇಳಿದ ಮಾನ್ಯ ಶಾಸಕರು, ತನ್ನ ಅವಧಿಯಲ್ಲಿ ಕ್ರೀಡೆಗಾಗಿ ನೀಡಿದ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಸದ್ರಿ ಟರ್ಫ್ ಮೈದಾನದ ಸದ್ಬಳಕೆ ಮಾಡಿ ಕ್ರೀಡಾ ಜಗತ್ತಿನಲ್ಲಿ ಹೆಸರು ಪಡೆಯುವಂತೆ ಯುವಜನತೆಗೆ ಕರೆ ನೀಡಿದ ಮಾನ್ಯ ಶಾಸಕರು, ಮೈದಾನದ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷರು ಮಂಜುಳಾ, ಕುಶಾಲನಗರ ಬ್ಲಾಕ್ ಅಧ್ಯಕ್ಷರು ವಿ ಪಿ ಶಶಿಧರ್, ಅಜಿತ್ ಅಯ್ಯಪ್ಪ, ಕಲಿದ್, ಸಮದ್, ರಾಜಶೇಖರ್, ತೆರೇಸಾ ವಿಕ್ಟರ್, ಅಜ್ಜಿಕುಟ್ಟಿರ ಪೊನ್ನು, ವಿ ಟಿ ವಾಸು, ನಾಯಂದಿರ ಶಿವಾಜಿ, ಬಶೀರ್, ಅಬ್ದುಲ್ ರೆಹಮಾನ್, ಶರತ್, ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಅಂಕಿತ್ ಪೊನ್ನಪ್ಪ, ಸರ್ಫು, ಮಹಾದೇವ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ ಅಯ್ಯನೆರವಂಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!