
ಬೆಂಗಳೂರು: ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ, ತಾವೇ ಬರೆದು ಅಭಿನಯಿಸಿದ ಕೊಳಲು.ಕಾಂ ಮೆಡಿ ನಾಟಕದ ಯಶಸ್ವೀ ಪ್ರದರ್ಶನ ಬೆಂಗಳೂರಿನ ಡಾ ಸಿ ಅಶ್ವಥ್ ಕಲಾಭವನದಲ್ಲಿ ಇತ್ತೀಚಿಗೆ ನಡೆಯಿತು.
ಕಳೆದ ಅಕ್ಟೋಬರ್ ನಲ್ಲಿ ಯಶವಂತ ಸರದೇಶ ಪಾಂಡೆ – ಗೋಡ್ಖಿಂಡಿ ಜೋಡಿಯಲ್ಲಿ ಪ್ರದರ್ಶಿತವಾಗಬೇಕಿದ್ದ ಈ ನಾಟಕ, ಯಶವಂತರ ಹಠಾತ್ ನಿಧನದಿಂದಾಗಿ ರದ್ದಾಗಿತ್ತು. ಇದೀಗ ರವಿ ಕುಲಕರ್ಣಿಯವರೊಂದಿಗೆ ಪ್ರವೀಣ್ ಅವರ ನಾಟಕದ ಈ ಜುಗಲ್ಬಂಧಿ ಕಿಕ್ಕಿರಿದ ಜನಸಂದಣಿಯೊಂದಿಗೆ ಪ್ರದರ್ಶನ ಕಂಡಿತು ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















