ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 21 .

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ನಮ್ಮ ತಂದೆಯವರು ಸಾವಳಗಿಯಲ್ಲಿ ( ತಾಲೂಕ ಜಮಖಂಡಿ- ಜಿಲ್ಲಾ  ಬಾಗಲಕೋಟೆ)(1962-66) 4 ವರ್ಷಗಳವರೆಗೆ ಕೆಲಸ ಮಾಡಿದರು. ಸಾವಳಗಿ ಹಿಂದಿನ ರಾಷ್ಟ್ರಪತಿಗಳಾದ ಶ್ರೀ ಬಿಡಿ ಜತ್ತಿ ಅವರ ತವರೂರು. ಅಂಚೆ ಇಲಾಖೆಯ ಸೂಪರಿಂಟೆಂಡೆಂಟ್ ಹಾಗೂ ಇನ್ಸ್ಪೆಕ್ಟರ್ ರವರು ಸಾವಳಗಿ ಪೋಸ್ಟ್ ಆಫೀಸ್ ಅನ್ನು ಸಂದರ್ಶಿಸಿದರು. ಶ್ರೀ ಎಸ್.ಎಸ್. ಪಾಟೀಲ, ಇನ್ಸ್ಪೆಕ್ಟರ್ ರವರು ತಮ್ಮ ಇನ್ಸ್ಪೆಕ್ಷನ್ ರಿಪೋರ್ಟದ ಕೊನೆಯ ಪ್ಯಾರಾದಲ್ಲಿ ಹೀಗೆ ಹೇಳುತ್ತಾರೆ”  ಶ್ರೀ ಕುಲಕರ್ಣಿ, ಸಬ್ ಪೋಸ್ಟ್ ಮಾಸ್ಟರ್ ರವರು ಪೋಸ್ಟ್ ಆಫೀಸಿನ ದಾಖಲೆಗಳನ್ನು ನಿಯಮಕ್ಕೆ ತಕ್ಕಂತೆ ,ಅತ್ಯಂತ ಸಮರ್ಪಕವಾಗಿ ಇಟ್ಟಿರುತ್ತಾರೆ. ಪೋಸ್ಟ್ ಆಫೀಸ್ ನ್ನು ಸ್ವಚ್ಚವಾಗಿ, ಚೊಕ್ಕಟವಾಗಿ ಇಟ್ಟಿರುತ್ತಾರೆ. ಸಬ್ ಪೋಸ್ಟ್ ಮಾಸ್ಟರ್ ಶ್ರೀ ಕುಲಕರ್ಣಿಯವರ ಕೆಲಸ ಶ್ಲಾಘನೀಯ ವಾಗಿದೆ ಎಂದು  ದಾಖಲಿಸಲು ಇಷ್ಟ ಪಡುತ್ತೇನೆ.” ಹೀಗಾಗಿ ಅವರಿಗೆ “WIN” ಪ್ರಶಸ್ತಿಯು ಸಂದಾಯವಾಯಿತು. ಅದು ಒಬ್ಬ ಸಬ್ ಪೋಸ್ಟ ಮಾಸ್ಟರ್ ರಿಗೆ ಕೊಡಲ್ಪಡುವ ಅತ್ಯಂತ ಹಿರಿದಾದ ಗೌರವದ ಪ್ರಶಸ್ತಿ ಯಾಗಿತ್ತು. ಈ ಗೌರವದ ಪ್ರಶಸ್ತಿ ಪಡೆದವರಿಗೆ ರೂಪಾಯಿ 20/-  ಮೌಲ್ಯದ ಉಡುಗೊರೆ ಕೊಡಲ್ಪಡುತ್ತಿತ್ತು. ಈಗ 60 ವರ್ಷಗಳ ನಂತರವೂ ಉಡುಗೊರಯು (  ಫೋಟೋ ಲಗತ್ತಿಸಲಾಗಿದೆ) ಅದೇ ಹೊಳಪಿನಿಂದ ಹೊಸದರಂತೆ ಕಂಗೊಳಿಸುತ್ತಿದೆ. ಈ ಉಡುಗೊರೆಯನ್ನು ಅವರ ಸಾಧನೆಯ ಪ್ರತೀಕವಾದ  ನೆನಪಿನ ಆಸ್ತಿ  ಎಂದು ನಾವು  ಕಾಪಿಟ್ಟು ಕೊಂಡಿದ್ದೇವೆ.

Asset 21
ಸರ್…ತಮ್ಮ ಮನೆಯಲ್ಲಿ ಹಳೆಯದಾದ ವಸ್ತುಗಳ ಸ೦ಗ್ರಹವೇ ಇರಬೇಕು..

  • Mr. Nagraj Nadagouda

Asset 21 : 1963 ರಲ್ಲೇ 20 ರೂ! ದೊಡ್ಡ ಮೊತ್ತವೇ.

  • shri H V SriPrakash, Kodichikkanhalli, Bangalore

asset 21 ಎಲ್ಲವನ್ನೂ ನೆನಪಿಟ್ಟು ದಾಖಲಿಸುವ ತಮಗೆ ಅಭಿನಂದನೆಗಳು.

  • Bavalatti,AIR Raichur

asset 21
ಸರ್,ತಾವು ಹಿರಿಯರು, ತಮ್ಮ ಅನುಭವಗಳು ಸಾಗರದಂತೆ, ತಮ್ಮ ಬರೆಹ ಖುಷಿ ನೀಡುತ್ತದೆ, ಬರೆಯುತ್ತಲಿರಿ.

  • A L Nagur, Vijayapura.
  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!