ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 22 .

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ನಮ್ಮ ತಂದೆಯವರು ನಲವತ್ತು ವರ್ಷಗಳ ಸುದೀರ್ಘ, ಸೇವಾ ತತ್ಪರತೆಯಿಂದ ಕೂಡಿದ ಕೆಲಸ ಮಾಡಿ ಅಂಚೆ ಇಲಾಖೆಯಿಂದ 1977 ರಲ್ಲಿ ನಿವೃತ್ತರಾದರು. ಅವರಿಗೆ Leave fare concession/ Leave Travel concession ಸೌಲಭ್ಯ ಇದ್ದರೂ ಕೂಡ ಅದನ್ನು ಅವರು ಸೇವಾ ತತ್ಪರತೆ ಹಾಗೂ ಇತರ ಕಾರಣಗಳಿಗಾಗಿ ತೆಗೆದುಕೊಂಡಿರಲಿಲ್ಲ. ಅವರಿಗೆ ಅವರ ಸೇವಾ ನಿವೃತ್ತಿಯ ನಂತರವೇ ವಿವಿಧ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವ ಅವಕಾಶ ಒದಗಿ ಬಂತು. ನನ್ನ ಹಿರಿಯಣ್ಣ ( ಆಗಲೇ ಕೆಲಸದಲ್ಲಿ ಇದ್ದವ) ನಮ್ಮ ತಂದೆ ತಾಯಿಗಳ ಪ್ರವಾಸಕ್ಕೆ ಎಲ್ಲಾ ಆರ್ಥಿಕ ಸೌಲಭ್ಯವನ್ನು ಕಲ್ಪಿಸಿದ. 

ನಮ್ಮ ತಂದೆ-ತಾಯಿಗಳು ಐದು ಹಂತಗಳಲ್ಲಿ 1979 ರಿಂದ ಆರಂಭಿಸಿ 1985  ರ ವರೆಗೆ ಭಾರತದ ಎಲ್ಲಾ ಕ್ಷೇತ್ರಗಳನ್ನು ಸಂದರ್ಶಿಸಿದರು. ಇಲ್ಲಿ ಗಮನಾರ್ಹ ಅಂಶವೆಂದರೆ ಅವರು ತಾವು ಸಂದರ್ಶಿಸಿದ ಎಲ್ಲ ಸ್ಥಳಗಳ  ಮುಖ್ಯ ಅಂಶಗಳನ್ನು ಬರೆದಿಟ್ಟು , ಅದನ್ನು ಒಳಗೊಂಡ “ಭಾರತ್ ದರ್ಶನ್” ಎಂಬ ಪುಸ್ತಕವನ್ನು ಪ್ರಕಟಿಸಿದ್ದು . ಅವರು ನಮಗೆ ಈ ಅಮೂಲ್ಯವಾದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ( ಯಾತ್ರೆಯ ವಿವರ 5 ಹೊತ್ತಿಗೆಗಳಲ್ಲಿದೆ).

ನಾನು ಇಲ್ಲಿ ಅವರ ಕೈಬರಹದ, ಪುಟ ಒಂದರ, ಹಸ್ತಪ್ರತಿಯ ಮಾದರಿಯನ್ನು ಲಗತ್ತಿಸಿದ್ದೇನೆ.

asset 22
 ನಾವ್ಯಾರೂ ಮಾಡದ ಕೆಲಸ ಅವರು ಮಾಡಿದ್ದಾರೆ great.

  • ರಂಗೋಪಂತ್ ನರಸಿಂಗ ರಾವ್

Asset 22
ನಿಮ್ಮ ತಂದೆಯವರು ಗಳಿಸಿದ, ನಿಮಗೆಲ್ಲ ಉಳಿಸಿದ ಆಸ್ತಿ ಯಾರೂ ಕಳವುಮಾಡಲು ಸಾಧ್ಯವಾಗದ ಜೀವನವನ್ನು ರೂಪಿಸುವ ಆಸ್ತಿಗಳು. ಅವುಗಳನ್ನು ಎಲ್ಲರಿಗೆ ಧಾರಾಳವಾಗಿ ಹಂಚಿದ್ದೀರಿ. ನಿಮಗೆ ಅಭಿನಂದನೆಗಳು. ಈ ಕೃತಿಯಲ್ಲಿ ನೀವು ನಿಮ್ಮ ಬಾಲ್ಯದ ಕಾಲದ ಸಾಮಾಜಿಕ ಚರಿತ್ರೆಯನ್ನೇ ತೆರೆದಿರಿಸಿದ್ದೀರಿ. ಭಾರತ ಭಿನ್ನ ಸಂಪ್ರದಾಯಗಳ ನಡುವೆಯೂ ಏಕತೆಯನ್ನು ಸಾಧಿಸಿರುವ ಅನನ್ಯತೆಯನ್ನು ತೋರಿಸಿದ್ದೀರಿ. ನಿಮ್ಮ ತಂದೆ ತಾಯಿಯವರು ಆ ಕಾಲದ ಆದರ್ಶ ಭಾರತೀಯ ದಂಪತಿಗಳಾಗಿದ್ದಾರೆ.
ಅವರ ಕಷ್ಟಸಹಿಷ್ಣುತೆ, ಜೀವನಪ್ರೀತಿ, ಓದಿನ , ಭಾಷಾ ಕಲಿಕೆಯ ಹಸಿವು, ಸಮಾಜಸೇವೆಯ ತವಕಗಳು ನಿಮ್ಮ ಕುಟುಂಬದ ಎಲ್ಲರನ್ನೂ ಆದರ್ಶ ಪ್ರಜೆಗಳಾಗಿ ರೂಪಿಸಿದ್ದರಲ್ಲಿ ಆಶ್ಚರ್ಯವಿಲ್ಲ.
ಆ ನಿಟ್ಟಿನಲ್ಲಿ ನೀವು ಬಹಳ ಅದೃಷ್ಟವಂತರು. ನಿಮ್ಮ ಕೃತಿ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿರುವುದು ನಮಗೂ ಅಭಿಮಾನದ ಸಂಗತಿಯಾಗಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ನಿಮ್ಮ ತಂದೆ ತಾಯಿಯವರ ಚಿತ್ರ ವಿಶ್ವಾದ್ಯಂತ ಪಸರಿಸಲಿ.
ಅನೇಕರ ಜೀವನ ಇದರಿಂದ ಪ್ರೇರಣೆ ಪಡೆದು ಒಳ್ಳೆಯ ರೀತಿಯಲ್ಲಿ ನಡೆಯುವ ಹಾಗಾಗಲಿ.
ತಂದೆ ತಾಯಿಯವರ ಕುರಿತ ನಿಮ್ಮ ಪ್ರೀತಿ ಅನುಕರಣೀಯ. ಅದನ್ನು ಎಲ್ಲರೂ ಅನುಸರಿಸುವ ಹಾಗಾಗಲಿ.
ವಂದನೆಗಳು.
ಜಿ.ಎನ್. ನರಸಿಂಹಮೂರ್ತಿ.

Asset 22 ನಮ್ಮ ಅಪ್ಪ ಅಮ್ಮನ photos ನೋಡಿದ್ರ, ನಮ್ಮ ತಾಯಿ ನೋಡಿ ಹೇಗೆ ಅನಿಸುತ್ತೆ ಹೇಳಿ
ಯಾವ graduation ಇವರ ಮುಂದೆ ಏನೂ ಇಲ್ಲ ಕಣ್ರಿ, ಮಾನವೀಯತೆ ಇವರ ಧರ್ಮ ಆಗಿತ್ತು
I am really proud of my parents G.

  • Manjunath, Yoga Teacher, Bangalore.
  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!