ಕಲ್ಪನೆಯ ಕಣ್ಣುಗಳಲಿ ಹೊಳೆಯಿತು
ಭಾವನಾತ್ಮಕ ಲಹರಿಯಲಿ ಗರಿಗೆದರಿತು
ಕೈ ಬೆರಳುಗಳು ಕ್ರಿಯಾಶೀಲತೆಯಲಿ ತೊಡಗಿತು
ಹಸಿರು ಬಟಾಣಿ ಸಿಪ್ಪೆಯ ಜೊತೆಯಲಿ
ಬೀಜಗಳ ಜೋಡಿಸಿಹ ರೆಕ್ಕೆಗಳ ನಡುವಿನಲಿ
ಕ್ಯಾರೆಟ್ ಸಿಪ್ಪೆಯ ಸೇರಿಸಿ ನೋಡುತಲಿ
ಮೂಡಿರುವ ನವ್ಯ ಸುಲಲಿತ ಚಿತ್ತಾರವೊಂದು
ಕಾವ್ಯೋದಯದೊಂದಿಗೆ ಹೇಳುತಿದೆ ಸುಪ್ರಭಾತವನಿಂದು
- ಲಲಿತಾ ಕೆ ಆಚಾರ್, ಬೆಂಗಳೂರು




















