ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿ.14 ರಂದು ಮುಗಳಖೋಡದಲ್ಲಿ ಜನಪದ ಸಂಸ್ಕೃತಿ ಸಂಭ್ರಮ.ಪುರುಷೋತ್ತಮ ಅಧಿಕ ಮಾಸದ ಮಂಗಲೋತ್ಸವ.

ಬಾಗಲಕೋಟೆ-ಮುಧೋಳ : ಕಳೆದ ಮೇ 17 ರಿಂದ ಅಧಿಕಮಾಸದ ಪ್ರಯುಕ್ತ ಪ್ರಾರಂಭಗೊಂಡ ಭಕ್ತರ ಕಾಮಧೇನು ಶ್ರೀಸಿದ್ಧಾರೂಢರ ಪಾರಾಯಣ. 152 ನೇ ರವಿವಾರದ ಸತ್ಸಂಗ. ಹಾಗೂ ಜಗನ್ಮಾತೆ ಶ್ರೀ ದೇವಿ ಮಹಾತ್ಮೆ ಪುರಾಣ‌ ಮಂಗಲೋತ್ಸವ ಸಮಾರಂಭವು ಇದೇ ಜೂನ್ ರವಿವಾರದ ದಿ.14 ರಂದು ಮುಂಜಾನೆ 10 -30 ಕ್ಕೆ ಜರುಗಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಪುಣ್ಯ ಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಸ್ಥಿತಪ್ರಜ್ಞ ಮಹಾಪುರುಷ ಶ್ರೀಗುರುನಾಥಾರೂಢರ ಮಠದ ಪ‌.ಪೂ.ಶ್ರೀಶಂಕರಾನಂದ ಶ್ರೀಗಳ ಸಾನಿಧ್ಯದಲ್ಲಿ ಶ್ರೀಸಿದ್ಧಾರೂಢಭಾರತಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುವವು.
ವಿಶೇಷವಾಗಿ ಜಿಲ್ಲೆಯ ಕಲಾವಿದರಿಂದ ಶಿವಭಜನೆ.ತತ್ವಪದ.ಡೊಳ್ಳಿನಪದ. ಸೋಬಾನೆಪದ. ಹಂತಿಹಾಡು.ರಿವಾಯಿತ. ಮುಂತಾದ ಕಲಾವಿದರಿಂದ ಜನಪದ ಸೇವೆ ಜರುಗಲಿದೆ. ಹಾಗೂ ವಿಶೇಷವಾಗಿ ತಾಯಂದಿಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗುವುದು. ಮತ್ತು ಬಾದಾಮಿಯ ಜಲಗೇರಿಯ ಚಿನ್ನಪ್ಪಗೌಡ ಗಿಡ್ಡಪ್ಪಗೋಳ ದಂಪತಿಗಳಿಗೆ ಗೌರವ ಸಮರ್ಪಣೆ ನಡೆಯುವದು. ಉತ್ತೂರಿನ ಪೂಜ್ಯರಾದ ವಿಠಲ ಮಹಾರಾಜರಿಂದ ಪ್ರವಚನ ನಡೆಯುವದು.
ಅಲ್ಲದೆ ಭಾಗವಹಿಸಿದ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ.ಮಹಾಳಿಂಗೇಶ್ವರ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಅವರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ 9972682938 ಈ ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!