ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 19 .

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ನಮ್ಮ ತಂದೆಯವರ 73 ನೇ ವಯಸ್ಸಿನಲ್ಲಿ ಅವರನ್ನು ಬಿಜಾಪುರದ ( ವಿಜಯಪುರ) ಬಿಎಲ್ ಡಿ ಇ ಆಸ್ಪತ್ರೆಗೆ
ಸೇರಿಸಬೇಕಾಯಿತು. 1994 ರಲ್ಲಿ ಅವರನ್ನು ಮೇಲಿಂದ ಮೇಲೆ ಆಸ್ಪತ್ರೆಗೆ ಸೇರಿಸಬೇಕಾಯಿತು ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಮೇಲೆ ಹಾಗೂ ಅವರಿಗೆ ಆರೋಗ್ಯ ಮರಳಿದ ಮೇಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಿದ್ದರು.

ನನ್ನ ಆಗಿನ ಶಾಖಾ ವ್ಯವಸ್ಥಾಪಕರಾಗಿದ್ದ ಶ್ರೀ ಎಂ. ರಾಮನ್ ಅವರು ನನ್ನ ತಂದೆಯವರನ್ನು ನೋಡಿಕೊಳ್ಳಲು ನನಗೆ ರಜೆ ಕೊಡುವ ಕೃಪೆ ಮಾಡುತ್ತಿದ್ದರು. ನನಗೆ ಅವರು ಹೇಳುತ್ತಿದ್ದ ಮಾತುಗಳು ಈಗಲೂ ನೆನಪಿದೆ.” ಕುಲಕರ್ಣಿ ಯವರೇ ನೀವು ನಿಮ್ಮ ತಂದೆಯ ಯೋಗಕ್ಷೇಮ ನೋಡಿಕೊಳ್ಳಿರಿ, ನಾವು ಬ್ಯಾಂಕಿನ ಯೋಗಕ್ಷೇಮ ನೋಡಿಕೊಳ್ಳುತ್ತೇವೆ.” ಎಂದು. ನಾನು ಅವರ ಈ ಮಾನವೀಯ ಸಹಕಾರಕ್ಕಾಗಿ ಯಾವಾಗಲೂ ಋಣಿ. 1994 ಮಾರ್ಚ್ ದಲ್ಲಿ ನಾನು ಮಧ್ಯೆ ರಜೆ ಹಾಕಬೇಕಾಯಿತು. ಮತ್ತೆ, ನಾನು 15 ದಿನಗಳ ರಜೆಯನ್ನು ಏಪ್ರಿಲ್ 1994 ರಲ್ಲಿ ಹಾಕಿದೆ ಹಾಗೂ ಮೇ 6 ರಿಂದ ರಜೆ ಮುಂದುವರೆಸಿದೆ.( ಎಲ್ಲವೂ ಗಳಿಸಿಟ್ಟ ರಜೆ ಆಗಿತ್ತು, Privilege Leave.).

ಬಿಎಲ್ ಡಿಇ ಆಸ್ಪತ್ರೆಯ ವೈದ್ಯರು ನಮ್ಮ ತಂದೆಯವರ ಆರೋಗ್ಯವನ್ನು ಕಂಡು ಸೋಜಿಗ ಪಟ್ಟರು ಹಾಗೂ ಅವರು ಹೀಗೆ ಹೇಳುತ್ತಿದ್ದರು” ನಿಮ್ಮ ತಂದೆಯವರಿಗೆ ಡಯಾಬಿಟಿಸ್ ಇಲ್ಲ, ಇದೊಂದು ಆಶ್ಚರ್ಯದ ಸಂಗತಿ.”. ಸಾಮಾನ್ಯವಾಗಿ ನಮ್ಮಲ್ಲಿ ಬರುವ ಈ ವಯಸ್ಸಿನ ರೋಗಿಗಳಿಗೆ ಡಯಾಬಿಟಿಸ್ ಇರುತ್ತದೆ ಮತ್ತು ಅದು ನಿಮ್ಮ ತಂದೆಯವರಿಗೆ ಇಲ್ಲದಿರುವುದು ಸೋಜಿಗದ ಸಂಗತಿ ಎಂದು ನನಗೆ ಹೇಳುತ್ತಿದ್ದರು.

ಹೀಗೆ ಆರೋಗ್ಯದ ವಿಚಾರದಲ್ಲಿ ನಮ್ಮ ತಂದೆಯವರು ನಮ್ಮೆಲ್ಲ ಮಕ್ಕಳಿಗೂ, ಹೆಚ್ಚಾಗಿ ಡಯಾಬಿಟಿಸ್ ವಿಷಯದಲ್ಲಿ ದೊಡ್ಡ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ.

Asset 19
ಸದೃಢವಾದ ಶರೀರವು ತಂದೆಯ ಆಸ್ತಿ ಯಾಗಿರುವಂತೆ, ವಂಶಪಾರಂಪರ್ಯವಾಗಿ ಬರುವ ವ್ಯಾಧಿಯೂ ಆಸ್ತಿನೇ.

ರೋಗದ ಆಸ್ತಿ ಕೊಟ್ಟು ಹೋಗದ ತಂದೆ ತಾಯಂದಿರು great

  • Smt. Shanta Nagamangala

Asset 19 : ನಿಮ್ಮ ತಂದೆಯವರ ತೀವ್ರ ಅನಾರೋಗ್ಯದಲ್ಲಿ ರಜೆ ಹಾಕಿ ಅವರಬಳಿ ಇದ್ದು ಸೇವೆ ಮಾಡಿದ ಪರಿ ಶ್ಲಾಘನೀಯ.

  •  Shri. SriPrakash, Kodichikkanhalli, bangalore

Asset 19 : ನಮಗೆ ಅಂತಹ ಅವಕಾಶ ಬರಲಿಲ್ಲ ಐದು ಮಕ್ಕಳು ನಾವು.ಸ್ವಲ್ಪ ವರ್ಷ ಸೋದರಮಾವನ ಆಶ್ರಯದಲ್ಲಿ ಬೆಳೆದೆವು. ನಂತರ ಅಲ್ಲಲ್ಲಿ ಅಲೆಮಾರಿ ಜೀವನ. ನನ್ನ s s l c ನಂತರ ನನಗೆ ಮಂದಿಯಲ್ಲಿ ಕೆಲಸ ಸಿಕ್ಕಿತು ನಂತರ ನಾನು ನನ್ನ ತಮ್ಮಂದಿರು ತಂಗಿಯನ್ನು ವಿದ್ಯಾಭ್ಯಾಸ ಮಾಡಿಸಿದೆ. ಎಲ್ಲಾ ಆ ದಯಾಮಯನ ಕೃಪೆ. ಈಗ ನನ್ನ ತಮ್ಮ ವಿಧಾನಸೌಧದಲ್ಲಿ ಜಂಟಿ ಕಾರ್ಯದರ್ಶಿಯಾಗಿ ನಿವೃತ್ತ ತಂಗಿ ದೂರವಾಣಿ ಸಂಸ್ಥೆಯಲ್ಲಿ ಕೆಲಸಮಾಡಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಕೊನೆಯ ತಮ್ಮ ಇನ್ನೇನು ನಿವೃತ್ತಿ ಅಂಚಿನಲ್ಲಿ ಇದ್ದಾರೆ ಅವನು ಆದಾಯ ತೆರಿಗೆ ಇಲಾಖೆಯಲ್ಲಿ ಕಮಿಷನರ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದಾನೆ.

  • V S Ramamurthy, KalyanNagar Bangalore.

ನಿಜಕ್ಕೂ ನಿಮ್ಮ ವಿಚಾರ, ಲೇಖನಗಳು ಸಂಸ್ಕಾರ, ಉತ್ತಮ ನಡವಳಿಕೆಯನ್ನು ಪ್ರಚೋದಿಸಿ ಮಾರ್ಗ ತೋರುವ ನುಡಿಗಳಾಗಿವೆ. ಸಂಸ್ಕಾರಯುತ ಬದಲಾವಣೆಯನ್ನು ಬಯಸುವವರಿಗೆ ದಾರಿದೀಪವಾಗಿವೆ. ಧನ್ಯವಾದಗಳು

  • Hebsur Krishnamurthy, Raichur.
  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!