ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿಯಂತ್ರಣ ತಪ್ಪಿ ಹಳೆಯ ಬಾವಿಯಲ್ಲಿ ಬಿದ್ದು ಬಾಲಕಿ ಸಾವು

ಬಳ್ಳಾರಿ / ಕಂಪ್ಲಿ : ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆಯ ಹಿಂದೆ ಇರುವ ಹಳೆಯ ಬಾವಿಯ ಹತ್ತಿರ ಕಟ್ಟಿಗೆಯನ್ನು ಹಾರಿಸಲೆಂದು ಹೋಗಿರುವಾಗ, ಆಯಿಷಾಳು ಬಾವಿಯಲ್ಲಿ ಕಲ್ಲು ಹಾಕುತ್ತಾ ಆಟವಾಡುತ್ತಿದ್ದಾಗ, ನಿಯಂತ್ರಣ ತಪ್ಪಿ ಹಳೆಯ ಬಾವಿಯಲ್ಲಿ ಬಿದ್ದಿರುವ ಮೃತ ಪಟ್ಟಿರುವ ಘಟನೆ ಶನಿವಾರ ಜರುಗಿದೆ. ಮೃತ ಬಾಲಕೆ ಹೆಸರು ಆಯಿಷಾ, ತಂದೆ ಬಡೇಸಾಬ್, ವಯಸ್ಸು 12 ವರ್ಷ, ಮುಸ್ಲಿಂ ಜನಾಂಗ, ವಿಧ್ಯಾರ್ಥಿನಿ, ವಾಸ: 23 ನೇ ವಾರ್ಡ್ ಎಮ್.ಡಿ ಕ್ಯಾಂಪ್ ಕಂಪ್ಲಿ. ಮೃತ ಬಾಲಕಿಯ ತಾಯಿಯು ಈಗ್ಗೆ 10 ವರ್ಷಗಳ ಹಿಂದೆ ಮರಣ ಹೊಂದಿದ್ದು, ಪಿರ್ಯಾದಿ ಪೀರಾ ರವರು ತಾವೇ ಸಾಕಿಕೊಂಡು ಅವಳ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದು, ಶನಿವಾರ ಆಯಿಷಾಳು ತನ್ನ ಸ್ನೇಹಿತರಾದ ರಾಜ, ಅಂಬಿಕಾ ರವರೊಂದಿಗೆ ಸರ್ಕಾರಿ ಪಶು ಆಸ್ಪತ್ರೆಯ ಹಿಂದೆ ಇರುವ ಹಳೆಯ ಬಾವಿಯ ಹತ್ತಿರ ಕಟ್ಟಿಗೆಯನ್ನು ಹಾರಿಸಲೆಂದು ಹೋಗಿರುವಾಗ, ಆಯಿಷಾಳು ಬಾವಿಯಲ್ಲಿ ಕಲ್ಲು ಹಾಕುತ್ತಾ ಆಟವಾಡುತ್ತಿದ್ದಾಗ, ನಿಯಂತ್ರಣ ತಪ್ಪಿ ಹಳೆಯ ಬಾವಿಯಲ್ಲಿ ಬಿದ್ದಿರುವ ಬಗ್ಗೆ ಅಂಬಿಕಾ, ರಾಜ ರವರಿಂದ ವಿಷಯ ತಿಳಿದುಕೊಂಡು ಪಿರ್ಯಾದಿಯು ಬಾವಿಯಲ್ಲಿ ಇಳಿದು ಇಜಾಡಿ ಹುಡುಕಾಡಿ ನೋಡಲಾಗಿ, ಆಯಿಷಾಳು ಪತ್ತೆಯಾಗದೇ ಇರುವಾಗ ಗಂಗಾವತಿಯ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಸ್ಥಳಕ್ಕೆ ಬಂದು, ಕೊಂಡಿಯನ್ನು ಹೊಂದಿರುವ ಹಗ್ಗವನ್ನು ಬಾವಿಯಲ್ಲಿ ಬಿಟ್ಟಿರುವಾಗ ಆಯಿಷಾಳ ಮೃತ ದೇಹವು ದೊರೆತಿದ್ದು, ಬಾವಿಯಿಂದ ಹೊರಗಡೆ ತೆಗೆದು ಪಿರ್ಯಾದಿಯು ಚಿಕಿತ್ಸೆಗೆಂದು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ಕಡೆದುಕೊಂಡು ಹೋಗಿ ದಾಖಲಿಸಿರುವಾಗ, ಪರೀಕ್ಷಿಸಿದ ವೈದ್ಯರು ಆಯಿಷಾಳು ಮೃತ ಪಟ್ಟಿರುವುದಾಗಿ ಮೃತಳ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ತರಹದ ಅನುಮಾನ ಇರುವುದಿಲ್ಲ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ದೂರು ಮೇರೆಗೆ ಕಂಪ್ಲಿ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ: 10/2026 ಕಲಂ: 194 BNSS ಪ್ರಕರಣ ದಾಖಲಿಸಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!