ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ ಗುರು ಪೌರ್ಣಮೆ ಸಂಭ್ರಮ 29 ರಂದು

ಬಾಗಲಕೋಟೆ/ ಮುಧೋಳ : ಗುರು ಎಂದರೆ ಅಜ್ಞಾನವೆಂಬ ಕತ್ತಲೆ ಕಳೆದು ಜ್ಞಾನವೆಂಬ ಬೆಳಕನ್ನು ಹರಿಸುವ ಒಂದು ಮಹಾ ಶಕ್ತಿ .ಗುರುವೆಂದರೆ ಜ್ಞಾನ . ಅಂತಹ ಗುರುತತ್ವದ ಆರಾಧನೆಗೆ ಮೀಸಲಿರಿಸಿದ ದಿನವೇ ಗುರುಪೌರ್ಣಮೆ. ಅಂತಹ ಗುರು ಪೌರ್ಣಿಮೆಯ ಸಂಭ್ರಮವನ್ನು ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಬುಧವಾರ ದಿ‌. 29 ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಆಚರಿಸಲಾಗುತ್ತದೆ ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಪ್ರತಿನಿಧಿ ಎಲ್ ಶ್ರೀನಿವಾಸ ಪ್ರಸಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡುತ್ತಾ ಗುರುಪೂರ್ಣಿಮೆ ತನ್ನಮಿತ್ಯ ನಡೆಯುವ ಸತ್ಸಂಗ ಸಮಾರಂಭದ ಪರಮ ಪಾವನ ಸನ್ನಿಧಾನವನ್ನು ಓಂಕಾರ ಸ್ವರೂಪಿ ಕುಳಲಿಯ ಗುರುನಾಥಾರೂಢರ ಮಠದ ಸಂಸ್ಥಾಪಕ ಪೂಜ್ಯರಾದ ಶಂಕರಾನಂದ ಶ್ರೀಗಳು ವಹಿಸುವರು. ನಾವಲಗಿಯ ಶರಣರಾದ ಶ್ರೀಶೈಲ ಪಟ್ಟಣಶೆಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಸಿದ್ದಪುರುಷ ಮಹಾಳಿಂಗೇಶ್ವರ ದೇವರ ಅಚ೯ಕರಾದ ಕುಮಾರ ಗುರು ಪ್ರಸಾದ್ ಸ್ವಾಮೀಜಿ ಅವರು ಸಮ್ಮುಖತ್ವ ವಹಿಸುವರು.
ಈ ಸಂದರ್ಭದಲ್ಲಿ ಶ್ರೀಸಿದ್ಧಾರೂಢರ ಗುರುಪಾದುಕಾ ಪಂಚಾಮೃತ ಅಭಿಷೇಕ.ಸಹಸ್ರ ಬಿಲ್ವಾರ್ಚನೆ.ಸದ್ಗುರುಗಳ ಪಾರಾಯಣ.ಭಜನೆ.ಸತ್ಕಾರ.ಮಹಾಮಂಗಲ. ಮಹಾಪ್ರಸಾದ ವಿತರಣೆ ನಡೆಯುವದು ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳು ವಹಿಸುವರು ಎಂದು ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!