ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜ್ಞಾನದ ಬೆಳಕನ್ನು ತೋರುವ, ಸನ್ಮಾರ್ಗವನ್ನು ತೋರಿಸುವ ನಮ್ಮ ಪರಮ ಪೂಜ್ಯ ಸ್ವಾಮೀಜಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ ಕೋರಲು ಹರಿದು ಬಂದ ಭಕ್ತ ವೃಂದ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಶ್ರೀ ಕ್ಷೇತ್ರ ನರಸಿಂಹಗಿರಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ 44ನೇ ಜನುಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಹಾಗೂ ನೇತ್ರತಪಾಷಣೆ ಶಿಬಿರವನ್ನು ಮಾಡಲಾಯಿತು.
ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಅವರ 44ನೇ ಹುಟ್ಟು ಹಬ್ಬವನ್ನು ಅವರ ಭಕ್ತರು ಬಹಳ ವೈಭವದಿಂದ ನೆರೆವೇರಿಸಿದರು.
ಸಿದ್ದರಬೆಟ್ಟ ಬಾಳೆ ಹೊನ್ನೂರು ಶಾಖಾ ಖಾಸ ಮಠದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಚಾರ್ಯ ಸ್ವಾಮಿಜಿ ಮಾತನಾಡಿ ನಾವಿಬ್ಬರು ಎರಡು ಕಣ್ಣುಗಳು ಇದ್ದಹಾಗೆ ಯಾವುದೇ ಕಾರ್ಯಕ್ರಮಗಳಿಗೆ ಹೋದರು ಜೊತೆಯಲ್ಲಿ ಹೋಗುತ್ತೇವೆ ನಮ್ಮಿಬ್ಬರಲ್ಲಿ ಯಾವುದೇ ಭೇದಭಾವವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ಜೊತೆಯಲ್ಲಿ ಹೋಗುತ್ತೇವೆ ಎಂದರು.
ಈ ವಿಶೇಷ ದಿನವು ಹೇರಳವಾದ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ತರಲಿ. ಅವರ ದೈವಿಕ ಆಶೀರ್ವಾದಗಳು ಅವರ ಸುತ್ತಲಿನ ಎಲ್ಲರಿಗೂ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಲೇ ಇರಲಿ.
ಶ್ರೀ ಕ್ಷೇತ್ರದ ಅನ್ನ ದಾಸೋಹದ ಕಾರ್ಯಕರ್ತರು ಸಹ ಹೃದಯಿ ಶ್ರೀ ಶ್ರೀಪರಮ ಪೂಜ್ಯರಿಗೆ ಆಯುರಾರೋಗ್ಯ ಭಾಗ್ಯ ಕೊಟ್ಟು ನಮ್ಮ ಸಂಸ್ಕೃತಿ ಧರ್ಮವನ್ನು ರಕ್ಷಿಸಲು ಮತ್ತಷ್ಟು ಶಕ್ತಿಯನ್ನು ಕೊಡಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಶುಭಾಶಯ ಕೋರಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿಎನ್ ಕೃಷ್ಣಮೂರ್ತಿಯವರು ಶ್ರೀ ಶ್ರೀ ಪರಮ ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದರು. ನಮ್ಮ ಕ್ಷೇತ್ರದಲ್ಲಿ ಎರಡು ಧಾರ್ಮಿಕ ಕ್ಷೇತ್ರಗಳಾಗಿ ಎರಡು ಮಠಗಳಿದ್ದು ಇಂದಿಗೂ ಜಾತಿ ಧರ್ಮ ಮೇಲು-ಕೀಳು ಯಾವುದನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳಿಗೂ ಸದ್ಮಾರ್ಗ ಶಿಕ್ಷಣ ದಾಸಗಳನ್ನು ನೀಡುತ್ತಾ ನಮ್ಮ ಕ್ಷೇತ್ರಕ್ಕೆ ಹೆಸರನ್ನು ಮಾಡಿರುವುದು ಶ್ರೀಗಳ ಶಕ್ತಿ ಅವರ ಆಧ್ಯಾತ್ಮಿಕ ಮಾರ್ಗದರ್ಶನವೂ ಎಲ್ಲರಿಗೂ ದಾರಿ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿಎನ್ ಕೃಷ್ಣಮೂರ್ತಿ ರವರು, ರಂಗಣ್ಣ ವಜ್ಜನಕುರಿಕೆ, ಹಾಗೂ ಮಾನ್ಯ ಉಪಮುಖ್ಯಮಂತ್ರಿ ಪರಮೇಶ್ವರ್ ಆಪ್ತರಾದ ಸಲಹೆಗಾರ ನಾಗಣ್ಣನವರು ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷರಾದ ವೆಂಕಟೇಶ್ ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವರಾಮಯ್ಯ ಕರ್ನಾಟಕ ರಕ್ಷಣಾ ವೇದಿಕೆ ಕೊರಟಗೆರೆ ತಾಲೂಕು ಅಧ್ಯಕ್ಷರಾದ ನರಸಿಂಹರಾಜು ಎಲ್. ಕಾಂತರಾಜು, ಪ್ರಸನ್ನ ಕುಮಾರ್ ಎಸ್, ಶ್ರೀನಿವಾಸ, ತೇಜಸ್ಸು, ರಮೇಶ್, ಪುಟ್ಟರಾಜು ಇನ್ನು ಅನೇಕ ಕನ್ನಡ ಪರ ಸಂಘಟನೆಯ ಸದಸ್ಯರು, ಉಪಸ್ಥಿತರಿದ್ದರು.

ವರದಿ. ಪ್ರಸನ್ನ ಕುಮಾರ ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!