ಬಾಡಿ ಉದುರಿದ್ದ ಗಿಡದ ತೆನೆಯ ಕುಸುಮಗಳ
ವಾಯುವಿನ ಆರ್ಭಟಕೆ ಉರುಳಿ ಬಿದ್ದ ಬಳ್ಳಿಗಳ
ಮೂಲೆ ಸೇರಿದ್ದ ಕಳಿತ ಬಾಳೆಹಣ್ಣಿನ ಗಾಲಿಗಳ
ಚದುರಿದ್ದ ಬಿಳಿಯ ಸೇವಂತಿ ಪುಷ್ಪ ದಳಗಳ
ಬಿಸುಟಿದ್ದ ಕೆಂದಾಸವಾಳದ ತುಣುಕುಗಳ ಸೇರಿಸಿ
ಕ್ರಿಯಾಶೀಲ ಕೈಚಳಕದಲಿ ಕಾವ್ಯ ಚಿತ್ತಾರವಾಗಿಸಿ
ನಲ್ಮುಂಜಾವಲಿ ಕಲಾಭಿಮಾನಿಗಳಲ್ಲಿಗೆ ರವಾನಿಸಿ
ಆಸ್ವಾದಿಸುತ ನಮನಗಳ ಅರ್ಪಿಸುವೆ ಸಂಭ್ರಮಿಸಿ
- ಲಲಿತಾ ಕೆ ಆಚಾರ್, ಬೆಂಗಳೂರು



















