ಶಿಗ್ಗಾವ್: ಹೊಸೂರ: ಇಂದು ಸಂಜೆ 6 ಗಂಟೆಗೆ ಎತ್ತನಹಳ್ಳಿ ಚಿನ್ನ ಕಟ್ಟಿ ಕ್ರಾಸ್ ಹತ್ತಿರ ಅಪಘಾತ ಜರುಗಿತು.
ಹೊಸೂರ ಎತ್ತನಹಳ್ಳಿ ತಾಂಡಾದ ಹತ್ತಿರ ಚಿನಂಕಟ್ಟಿ ರಿಂಗ್ ರೋಡ್ ನಲ್ಲಿ ಭೀಕರ ಅಪಘಾತ ನಡೆದಿದ್ದು, ಮಣ್ಣು ತುಂಬಿದ ಲಾರಿ ಒಂದಕ್ಕೆ ಬೈಕ್ ಸವಾರರು ಇಬ್ಬರು ವೇಗವಾಗಿ ಬಂದು ಮರಳು ತುಂಬಿದ ಟಿಪ್ಪರ್ ಗುದ್ದಿದ್ದಾರೆ ಗುದ್ದಿದ ರಭಸಕ್ಕೆ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗ ಸ್ಥಳದಲ್ಲಿದ್ದ ಊರಿನ ಯುವಕರು ಎಲ್ಲರೂ ಸೇರಿ ಹತ್ತಿರದ ಆಸ್ಪತ್ರೆಗೆ ಸೇರಿಸಿ, ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯವಾಗಿರುವುದರಿಂದ ಇವರನ್ನು ಈಗ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ವರದಿ ಬಸವರಾಜ ಎಸ್. ಎನ್




















