ಸಿರುಗುಪ್ಪ-ಬಳ್ಳಾರಿ ನಗರದ ಕೌಲ್ ಬಜಾರ್ ನ ಹಿರಿಯ ನಾಗರಿಕರು ಹಾಗೂ ಶುದ್ಧ ಹೃದಯ ಮತ್ತು ಚಿನ್ನದ ಮನುಷ್ಯ ಎಂದು ಗುರುತಿಸಿಕೊಂಡಿದ್ದ ಹಜರತ್ ಮುರ್ತುಜಾ ಖಾನ್ ಸಾಬ್ ಅವರು ನಿಧನ ಹೊಂದಿರುವುದು ಸಮುದಾಯದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.
ಸರಳ ವ್ಯಕ್ತಿತ್ವ, ಶುದ್ಧ ಹೃದಯ ಮತ್ತು ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದ ಅವರ ಅಗಲಿಕೆಯಿಂದ ಕುಟುಂಬದ ಸದಸ್ಯರು, ಬಂಧು-ಬಳಗ, ಸ್ನೇಹಿತರು ಹಾಗೂ ಅಪಾರ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಾಹನು ಅವರಿಗೆ ಜನ್ನತ್ – ಉಲ್ – ಫಿರ್ದೌಸ್ ಅನ್ನು ದಯಪಾಲಿಸಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಿರುಗುಪ್ಪ ನಗರದ ಸೌದಾಗರ್ ಸುನ್ನೀ ಮಸೀದಿಯ ಗೌರವ ಅಧ್ಯಕ್ಷರು ಹಂಡಿ ಹುಸೇನ್ ಬಾಷು, ಖತೀಬ್ ಜಹೀರುದ್ದೀನ್ ಬಾಬು, ಸಮಾಜ ಸೇವಕರು ಡಾ.ಮೊಹಮ್ಮದ್ ಅಲಿ, ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ನೌಷಾದ್ ಅಲಿ, ಬಳಿಗೆರ್ ಪೀರಸಾಬ್ ಅವರು ಪ್ರಾರ್ಥಿಸಿದ್ದಾರೆ.
ವರದಿ : ಮಸೀದಿ ,ಅಬ್ದುಲ್ ಗೌಸ್, ಸಿರುಗುಪ್ಪ




















