ಅಂದ ಚಂದ ವರ್ಣದ ರಾಂಬುಟಾನ್
ಮಾರುಹೋಗಿ ಆಗಿರುವೆ ನಾನಿನ್ನ ಫ್ಯಾನ್
ಸೃಷ್ಟಿಕರ್ತ ನಿನಗಿದೊ ಒಂದು ಸಲಾಮ್
ನೊಂದವರ ನಯನಗಳಿಗಿದೊಂದು ಮುಲಾಮ್
ಹೊರಗವಚದಿ ನಲಿಯುತಿವೆ ಪುಟ್ಟ ಗರಿಗಳು
ಕತ್ತರಿಸಿ ನೋಡಲದುವೆ ಕಣ್ಣಿನಾ ರೆಪ್ಪೆಗಳು
ಜೊತೆಯಲಿ ಸೇರಿವೆ ಶ್ವೇತ ತುಂಬೆ ಹೂಗಳು
ಸುಲಲಿತ ಕಾವ್ಯ ಚಿತ್ತಾರಕಿಂದು ಇವರೇ ಅತಿಥಿಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















