ಸಂಕೇನಹಳ್ಳಿ ಗ್ರಾಮದ ಶ್ರೀ ಕುಬೇರ ಗಣಪತಿಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಸೇವಕರಾದ ಪಿ. ಎನ್. ಕೃಷ್ಣಮೂರ್ತಿ ಅವರಿಂದ ಸಹಾಯ ಹಸ್ತ.
ತುಮಕೂರು :ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಸಂಕೇನಹಳ್ಳಿ ಗ್ರಾಮದಲ್ಲಿ ಶ್ರೀ ಕುಬೇರ ಗಣಪತಿಯ ದೇವಸ್ಥಾನದ ಸಮುದಾಯ ಭವನದ ಕಟ್ಟಡ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿದ್ದು ಅದರ ಪೂರ್ಣ ವೆಚ್ಚವನ್ನು ಪಿ.ಎನ್. ಕೃಷ್ಣಮೂರ್ತಿಯವರು ಕುಟುಂಬ ಸಮೇತ ಗ್ರಾಮಸ್ಥರ ಸಮ್ಮುಖದಲ್ಲಿ ರೂ.5 ಲಕ್ಷಗಳ ನಗದನ್ನು ದೇವಾಲಯದ ನಿರ್ದೇಶಕರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿ ಅವರು ದೇವಾಲಯಗಳ ನಿರ್ಮಾಣದಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಹಾಗೂ ದೇವಾಲಯಗಳಲ್ಲಿ ಯಾವುದೇ ಜಾತಿ ವರ್ಣಗಳನ್ನು ಲೆಕ್ಕಿಸದೆ ನಾವೆಲ್ಲರೂ ಸಮಾನರು ಒಂದಾಗಿ ಬಾಳೋಣ ಎಂಬ ಬಸವಣ್ಣನವರ ಮಾತನ್ನು ನೆನೆಯುತ್ತಾ ಕೊರಟಗೆರೆ ತಾಲೂಕಿನ 6 ಹೋಬಳಿಗಳಲ್ಲಿ ಒಂದೊಂದು ಸಮುದಾಯ ಭವನಗಳನ್ನು ನಿರ್ಮಿಸಿ ಉಚಿತವಾಗಿ ಬಡವರಿಗೆ ನೀಡುವುದು ನಮ್ಮ ತಂದೆ ತಾಯಿಯ ಕನಸಾಗಿತ್ತು. ಇಂದು ಅವರ ಆಶೀರ್ವಾದದಿಂದ ನಾನು ಮಾವತ್ತೂರಿನಲ್ಲಿ ಅರಸೇೇಶ್ವರಿ ಸಮುದಾಯ ಭವನವನ್ನು ನಿರ್ಮಿಸಿ ಅದನ್ನು ಬಡವರ ಉಪಯೋಗಕ್ಕಾಗಿ ನೀಡಿರುವುದು ನಮ್ಮ ತಾಯಿಯ ಆಸೆ. ತಾಲೂಕಿನ ವ್ಯಾಪ್ತಿಯಲ್ಲಿರುವಂತಹ ಎರಡು ಮಠದ ಸ್ವಾಮೀಜಿಗಳು ಕೊರಟಗೆರೆ ಕ್ಷೇತ್ರದ ಎರಡು ಕಣ್ಣುಗಳು ಇದ್ದ ಹಾಗೆ ಎಂದರು. ನಾವು ಕ್ಷೇತ್ರದಲ್ಲಿನ ದೇವಾಲಯಗಳ ಜೀರ್ಣೋದ್ಧಾರ ಅಭಿವೃದ್ಧಿ ಮಾಡಿಸುವ ಕೆಲಸ ಅಲ್ಲಿಗೆ ಬೇಕಾಗುವ ಮೂಲಸೌಕರ್ಯಗಳನ್ನು ಕಲ್ಪಿಸುವುದು ನನ್ನ ಇಚ್ಛೆ. ನಮ್ಮ ಕ್ಷೇತ್ರದ ಜನತೆಗೆ ಉಪಯೋಗವಾಗಬೇಕು ಎಂದರು.
ಕೊರಟಗೆರೆ ಕ್ಷೇತ್ರದಿಂದ ಮೂರು ಬಾರಿ ಗೆದ್ದು, ಎರಡು ಬಾರಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿ ಈಗಿನ ಉಪಮುಖ್ಯಮಂತ್ರಿ ಆಗಿರುವಂತಹ ಡಾ. ಜಿ. ಪರಮೇಶ್ವರ್ ರವರು ಕ್ಷೇತ್ರದಲ್ಲಿ ಅವರಿಗೆ ತೋಚಿದಂತಹ ಕೆಲಸಗಳನ್ನು ಮಾಡಿದ್ದಾರೆ ಅವರ ಬಗ್ಗೆ ಅಪಾರ ಗೌರವ ಇದೆ ನಾಳೆ ಕೊರಟಗೆರೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಇರುವುದರಿಂದ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಿಮ್ಮ ಸೇವಾ ಮನೋಭಾವವು ಸಾಮಾಜಿಕ ಸೇವಾ ಕಾರ್ಯಗಳು, ಸಹಾಯ ಮಾಡುವ ಕೈ ಮುಂದೆ ನಮ್ಮ ಕ್ಷೇತ್ರದ ಜನತೆ ಎಲ್ಲರೂ ಪಡೆಯಲಿ ನೀವು ಈ ಕ್ಷೇತ್ರದ ಶಾಸಕರಾಗಿ ಇನ್ನು ಹೆಚ್ಚು ಸೇವೆ ಮಾಡುವ ಭಾಗ್ಯ ನಿಮಗೆ ದೊರೆಯಬೇಕು ಎಂದು ದೇವಸ್ಥಾನದ ನಿರ್ದೇಶಕರು, ಗ್ರಾಮಸ್ಥರು ಮಹಿಳೆಯರು ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ನರಸಿಂಹರಾಜು , ರಂಗರಾಜು, ಲಂಬೂ ರಾಜಣ್ಣ, ಆರಾಧ್ಯ, ಆರ್. ಎಸ್. ರಾಜಣ್ಣ, ಸಿದ್ದಪ್ಪ, ಕರಿಬಸವಯ್ಯ, ನರಸಯ್ಯ, ಸದಾಶಿವಯ್ಯ, ಮೆಡಿಕಲ್ ಕುಮಾರ್ ಹಾಗೂ ಊರಿನ ಮಹಿಳೆಯರು ಸಂಕೇನಹಳ್ಳಿ ಗ್ರಾಮಸ್ಥರು ಮತ್ತು ಪಿ ಎನ್ ಕೆ ಅಭಿಮಾನಿ ಬಳಗ ಕೊರಟಗೆರೆ ಇವರು ಸಹ ಭಾಗವಹಿಸಿದ್ದರು.
ವರದಿ.ಪ್ರಸನ್ನ ಕುಮಾರ್ ಎಸ್.ಕೊರಟಗೆರೆ




















