ಮಲ್ಲಿಕಾ ರಸಪುರಿ ತೋತಾಪುರಿ ನೀಲಮ್ ಜೀರಿಗೆ
ಮೊದಲಾದ ಹೆಸರಿನ ಹಣ್ಣುಗಳ ರಾಜ ಮಾವಿಗೆ
ಭೂಮಾತೆ ಮಡಿಲ ಸೇರಿದ್ದ ಕೆಂಪು ಮೊಗ್ಗುಗಳು
ಶಿವ ಬೆಕನ ಪ್ರಿಯರ ಬಿಳಿ ತುಂಬೆಯಾ ಹೂಗಳು
ಸವಿದುಳಿದ ಓಟೆಗಳ ಹಸನು ಮಾಡಿ ಜೋಡಿಸಲು
ತ್ರಿವಳಿ ವರ್ಣದ ನಿಸರ್ಗ ಪಕಳೆಗಳಲಿ ಸಿಂಗರಿಸಲು
ಒಡಮೂಡಿತು ಲಘು ಸುಲಲಿತ ಕಾವ್ಯ ಚಿತ್ತಾರವಾಗಿ
ಶುಭ ಗಳಿಗೆಯಲಿ ರವಾನಿಸುತಿರುವೆ ಸುಮನಗಳಿಗಾಗಿ
- ಲಲಿತಾ ಕೆ ಆಚಾರ್, ಬೆಂಗಳೂರು




















