ಷಷ್ಟಿ ಸುಗಂಧ ಪುಷ್ಪಗಳ ಜೋಡಣೆಯು
ಅಡಿಯಿಂದ ಮುಡಿವರೆಗೆ ಆಕರ್ಷಣೆಯು
ಸಿಪ್ಪೆತೆಗೆದ ಬಾದಾಮಿ ಬೀಜಗಳ
ಎಸಳುಗಳಲಿ
ಅರಳಿದೆ ರಂಗೋಲಿ ಕೆಂಬಣ್ಣ ಗುಲಾಬಿ ದಳಗಳಲಿ
ಮನಸೆಳೆದಿದೆ ಲಘು ಹಸಿರೆಲೆಗಳ ಗರಿಗಳಲಿ
ಸುರಕ್ಷಿತವು ಚತುರ್ಥ ಹೂಗಳ ಆಸರೆಯಲಿ
ಸುಲಲಿತ ಕಾವ್ಯ ಚಿತ್ತಾರವಾಗಿದೆ ನಲ್ಮುಂಜಾವಲಿ
ಹೊಮ್ಮಿಸಲು ಸ್ಪೂರ್ತಿ ಸುಮನಗಳ ಹೃನ್ಮನದಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















