ಆಸ್ತಿ 3
ನಮ್ಮ ತಂದೆಯವರನ್ನು ಪೋಸ್ಟ್ ಮ್ಯಾನ್ ಎಂದು 1937 ರಲ್ಲಿ ಚಡಚಣದಲ್ಲಿ ನೇಮಿಸಲಾಯಿತು ( ಬಿಜಾಪುರ ಜಿಲ್ಲೆ). ಅವರ ಮಾತುಗಳಲ್ಲಿ ಹೇಳುವದಾದರೆ “ನಾನು 03.12.1937 ರಂದು ಚಡಚಣವನ್ನು ಬಿಟ್ಟು ಬಾರ್ಡೋಲ್ , ಜೇವೋರ್, ಝಳಕಿ, ಗೋಟ್ಯಾಳ, ಲೋಣಿ, ಮಾರ್ಗವಾಗಿ ಗೋಡಿಹಾಳ ತಲುಪಿದೆ. ಗೋಡಿಹಾಳದಲ್ಲಿ ಶ್ರೀ ಗುಮಾಸ್ತೆ ಎನ್ನುವ ಪೋಸ್ಟ್ ಮಾಸ್ಟರ್ ನನಗೆ ಅವರ ಮನೆಯಲ್ಲಿ ಆಶ್ರಯ ಕೊಟ್ಟರು.
ಜೀವನದಲ್ಲಿ ಮೊದಲ ಸಲ ಸುಮಾರು 10 ಮೈಲಿಗಳಷ್ಟು ನಡೆದಿದ್ದೆ . ಆಗ ಚಳಿಗಾಲ. ನನ್ನ ಹತ್ತಿರ ಯಾವುದೇ ಬೆಚ್ಚಗಿನ ಬಟ್ಟೆಗಳು ಅಥವಾ ಹೊದಿಕೆ, ಚಾದರ್ ಇರಲಿಲ್ಲ. ನಾನು ಧೂಳು ತುಂಬಿದ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದೆ . ಕಾಲಿನಲ್ಲಿ ರಕ್ತದ ಗುಳ್ಳೆಗಳು ಎದ್ದಿದ್ದವು. ಶ್ರೀ ಗುಮಾಸ್ತೆ ಯವರು ನನ್ನನ್ನು ಊಟ ಮಾಡಲು ಆಹ್ವಾನಿಸಿದರು. ಆದರೆ ನಾನು ಊಟ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಮೊದಲು ನಾನು ನನ್ನ ಕಾಲಿನ ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾಗಿತ್ತು. ನನ್ನ ವಿನಂತಿಯ ಮೇರೆಗೆ ಶ್ರೀ ಗುಮಾಸ್ತೆ ಯವರು ಕಾಲಿನ ಗುಳ್ಳೆಗಳಿಗೆ ಸವರಲು ಒಂದಿಷ್ಟು ಕೊಬ್ಬರಿ ಎಣ್ಣೆ ಹಾಗೂ ಬಿಸಿನೀರು ಕೊಟ್ಟರು. ಅವನ್ನು ಉಪಯೋಗಿಸಿದ ಮೇಲೆ ನನಗೆ ಸ್ವಲ್ಪ ಆರಾಮವೆನಿಸಿತು. ಪಾಪ, ಆ ಬಡ ಪೋಸ್ಟ್ ಮಾಸ್ತರರಿಗೆ ನನಗೆ ಇನ್ನೊಂದು ಚಾದರ್ ಕೊಡಬೇಕೆಂದಿದ್ದರೂ ಅವರ ಹತ್ತಿರ ಅದು ಇರಲಿಲ್ಲ. ಅವರ ಮನೆ ಒಂದು ರೂಮು ಹಾಗೂ ಅದಕ್ಕೆ ಹೊಂದಿಕೊಂಡಂತೆ ಒಂದು ವರಾಂಡಾ ಮಾತ್ರ ಇದ್ದಿತ್ತು. ನಾನು ಅವರು ಕೊಟ್ಟ ಹರಿದ ಚಾಪೆಯನ್ನು ವರಾಂಡಾದಲ್ಲಿ ಹಾಸಿಕೊಂಡು ಮಲಗಿದೆ, ಆದರೆ ನಿದ್ರೆ ಮಾತ್ರ ಬರದೇ ಇಡೀ ರಾತ್ರಿ ಕಳೆದೆ.’
16 ವರ್ಷದ ಎಳೆಯ ವಯಸ್ಸಿನಲ್ಲಿ ಅವರು ಇಷ್ಟೊಂದು ಕಷ್ಟಗಳನ್ನು ಅನುಭವಿಸಬೇಕಾಯಿತು. ಅವರು ಇನ್ನೂ ಹೆಚ್ಚಿನ ಕಷ್ಟಗಳನ್ನು ಅನುಭವಿಸುತ್ತಾ ಪೂರ್ತಿ 73 ವರ್ಷಗಳನ್ನು ಕಳೆದರು. ಅವರಿಂದ ಇಂತಹ ಗಟ್ಟಿತನ, ತಾಳ್ಮೆ, ಹಾಗೂ ಕಷ್ಟಗಳನ್ನು ಸಹಿಸುವ ಶಕ್ತಿಗಿಂತ ಹೆಚ್ಚಿನ ಆಸ್ತಿಗಳನ್ನು ಏನು ನಿರೀಕ್ಷಿಸಲಾದೀತು ?.
Asset 3
ಒಪ್ಪುವ ಮಾತು.
ಆದರೆ, ಪ್ರತಿಯೊಂದು ಪೀಳಿಗೆಯು ಅದರದೇ ಆದ ಕಷ್ಟ ಗಳು, ಸಂಕಷ್ಟ ಗಳನ್ನು ಅನುಭವಿಸಿದೆ. ನಮ್ಮ ಜೀವನವೂ ಮುಂದಿನವರಿಗೆ ಸ್ಪೂರ್ತಿ ಆಗಿದೆ. ಆದರೆ ಅವರು ಅದರಿಂದ ಕಲಿಯಬೇಕು ಅಷ್ಟೇ Harsha shroff
Mahendra kurdi ನಿಜಕ್ಕೂ ಇದೊಂದು ದೊಡ್ಡ ಆಸ್ತಿಯ ಬಳುವಳಿ ಆಗಿದೆ ಕಾರಣ ಅವರು ಅಂದು ಅನುಭವಿಸಿದ ಕಷ್ಟಗಳು ಎದುರಿಸಿದ ಸವಾಲುಗಳು ಜೀವನದಲ್ಲಿ ಗಟ್ಟಿತನವನ್ನು ತುಂಬುತ್ತದೆ ಮತ್ತು ಸವಾಲುಗಳು ಎದುರಾದಾಗ ಹೇಗೆ ಧೈರ್ಯದಿಂದ ಸಹನೆಯಿಂದ ಸಾಗಬೇಕು , ಪರಿಸ್ಥಿತಿಗೆ ನಾವು ಹೇಗೆ ಹೊಂದಿಕೊಂಡು ಹೋಗಬೇಕು ಎಂಬುದು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ಮಾರ್ಗ ಸರ್ವರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
- ಪ್ರಮೋದ್ ಕುಲಕರ್ಣಿ




















