ತಂದೆ ತಾಯಿ ಪಾತ್ರವು ಮಕ್ಕಳ ಬೆಳವಣಿಗೆ, ವಿಕಾಸ ಹಾಗೂ ಕೀಳರಿಮೆ ಭಾವನೆಗಳಲ್ಲಿ ಪಾತ್ರ ಮಹತ್ವದ್ದು. ಕೀಳರಿಮೆ ಎನ್ನುವುದು ಎಷ್ಟೋ ವಿಷಯಗಳಲ್ಲಿ ನೋಡುತ್ತೇವೆ ಇತ್ತೀಚಿನ ದಿನಗಳಲ್ಲಿ ತಂದೆ ತಾಯಿ ಇತರರೊಂದಿಗೆ ಹೋಲಿಕೆ ಮಾಡುವುದರಿಂದ ಕೀಳು ಭಾವನೆ ಮಕ್ಕಳಲ್ಲಿ ಹೆಚ್ಚಾಗಿದೆ ಪ್ರಾರಂಭಿಕವಾಗಿ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಇದರಿಂದಾಗಿ ಮಕ್ಕಳು ತನ್ನ ಸಾಧನೆಯ ಮಾರ್ಗ ಮರೆಯಬಹುದು ಯಾಕೆ ಹೋಲಿಕೆ ? ನಿಮ್ಮ ಮಕ್ಕಳು ಬೇರೆ ಮಕ್ಕಳನ್ನು ಹೋಲಿಕೆ ಹೊಂದಬೇಕು ? ದಯಮಾಡಿ ನಿಮ್ಮ ಮಕ್ಕಳನ್ನು ಅವರು ಇದ್ದ ಹಾಗೆ ಒಪ್ಪಿಕೊಳ್ಳಿ ಅದನ್ನು ಸ್ವೀಕರಿಸಿ ತಪ್ಪಿಗೆ ಶಿಕ್ಷಿಸಿ ಆದರೆ ಸಾಯಿಸಬೇಡಿ ಮಕ್ಕಳನ್ನು ಆದಷ್ಟು ಧನಾತ್ಮಕ ಯೋಚನೆಗಳು ಸೃಷ್ಟಿಸಿ ಮಕ್ಕಳಿಗೆ ಆತ್ಮ ವಿಶ್ವಾಸಕ್ಕೆ ಯಾವಾಗಲೂ ಜೊತೆಗಿರಿ ಸ್ಪೂರ್ತಿ ಮಾತು ತುಂಬಿರಿ ಶಾಲೆಯಲ್ಲಿನ ಅವಮಾನಗಳನ್ನು ತಂದೆ ತಾಯಿ ಸನ್ಮಾನ ರೂಪದಲ್ಲಿ ಮಾರ್ಗದರ್ಶನ ಮಾಡಬೇಕು ಪರೀಕ್ಷೆಗಳ ಅನುತ್ತೀರ್ಣ ಹಾಗೂ ಕಡಿಮೆ ಅಂಕ ಎಂದಿಗೂ ಟೀಕಿಸದಿರಿ ದೈಹಿಕವಾಗಿ ದೇಹದ ಟೀಕೆಗಳಿಂದ ಮಕ್ಕಳ ಭಾವನೆ ಕುಗ್ಗುತ್ತದೆ ಅತಿ ಎತ್ತರ ಅತಿ ಕಡಿಮೆ ಎತ್ತರ ದಪ್ಪ ಸಣ್ಣ ಇವುಗಳನ್ನು ಇಟ್ಟುಕೊಂಡು ಅಹಿತಕರ ಎನಿಸುವಂತೆ ಮಾಡುವುದು ಬರವಣಿಗೆಯ ಕೀಳರಿಮೆ ಮಕ್ಕಳ ಬರವಣಿಗೆಯ ಬಗ್ಗೆ ಯಾವಾಗಲೂ ತಿರಸ್ಕರಿಸುವುದು ನಿಲ್ಲಿಸಿ ಅವರನ್ನು ಸ್ವೀಕರಿಸಿ ತಿರಸ್ಕರಿಸ ಬೇಡಿ ಅವರಿಗೆ ಶಿಕ್ಷಕಾರಗಿ ಆದರೆ ಯಾವಾಗಲೂ ಶಿಕ್ಷೆ ಕೊಡುವ ಅವರ ಪ್ರಕಾರ ನೀವು ಹಗೆಗಾರ ( ವಿರೋಧಿ ) ಆಗಬೇಡಿ.
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಒಬ್ಬ ಹುಡುಗನು ಆತನಿಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಆದರೆ ಈತನ ತಂದೆ ತಾಯಿಗೆ ಇವನು ಒಳ್ಳೆ ವೈದ್ಯೆನಾಗುವ ಆಸೆ ಮನೆಯಲ್ಲಿ ಯಾವಾಗಲೂ ಹೇಳುತ್ತಿದರು ಅಭ್ಯಾಸದಲ್ಲಿ ಮಾತ್ರ ಗಮನವಿರಲಿ ಎಂದು ಆತನಿಗೆ ಉಸಿರುಗಟ್ಟುವಂತೆ ಮಾಡಿದ್ದರು ಆತನಿಗೆ ಮನೆ ಶಾಲೆ ಅಷ್ಟೇ ಪ್ರಪಂಚ ಆಗಿತ್ತು ಅವರ ಆಸೆಯಂತೆ ಆತನು ಒಳ್ಳೆ ವೈದ್ಯನಾದನು ಆತನು ಒಮ್ಮೆ ಯಾವುದೋ ಸಮಾರಂಭದಲ್ಲಿ ವೇದಿಕೆಯಲ್ಲಿ ಆತನ ಭಾಷಣವಿತ್ತು ಆ ಸಮಯದಲ್ಲಿ ಹೇಳುತ್ತಿದ್ದನು ನಾನು ಈ ಕ್ಷೇತ್ರದಲ್ಲಿ ಇದ್ದೇನೆ ಆದರೂ ನನಗೆ ಯಾವ ಖುಷಿಯೂ ಇಲ್ಲ ಕಾರಣ ಇಷ್ಟೇ ಈ ಕನಸ್ಸು ನನ್ನ ಕನಸ್ಸು ಆಗಿರಲಿಲ್ಲ ನನ್ನ ತಂದೆ ತಾಯಿದು ಆಗಿತ್ತು ಎಂದು ಜುಗುಪ್ಸೆಯಿಂದ ಹೇಳಿದಳು ಎಲ್ಲ ವಿದ್ಯಾರ್ಥಿಗಳಲ್ಲಿ ಕೋರಿಕೆ ಸಲ್ಲಿಸಿದನು ಜೀವನದ ನಿಮ್ಮ ಗುರಿ ಆಸಕ್ತಿ ನಿಮ್ಮದಾಗಿರಲಿ.
ಈ ಕಥೆ ಮುಖಾಂತರ ನಾವು ಹೇಳುವುದು ಇಷ್ಟೇ ಮಕ್ಕಳಲ್ಲಿನ ಆಸಕ್ತಿಗೆ ತಂದೆ ತಾಯಿ ಗೌರವ ಕೊಡುವ ಜೊತೆಗೆ ಪ್ರೀತಿಗೆ ಪಾತ್ರರಾಗಿ…
- ರಮ್ಯ ಮಲ್ಲಿಕಾರ್ಜುನ ಕಳ್ಳಿಮನಿ ,ಮುದ್ದೇಬಿಹಾಳ




















