ಬಳ್ಳಾರಿ / ಕಂಪ್ಲಿ : ತಾಲೂಕಿನ ಹೊಸ ನೆಲ್ಲೂಡಿ ಗ್ರಾಮದ ಹಿರಿಯ ಮುಖಂಡ ಹೆಚ್. ಪಕ್ಕೀರಪ್ಪ ತಂದೆ ದೊಡ್ಡ ಸೋಮಪ್ಪ (48 ವಯಸ್ಸು) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಮೃತರಿಗೆ ಹೆಂಡತಿ ಇಬ್ಬರು ಮಕ್ಕಳು ಹಾಗೂ ಒಬ್ಬ ಮಗಳು ಇದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಶನಿವಾರ ಹೊಸ ನೆಲ್ಲೂಡಿ ಗ್ರಾಮದ ಸಾರ್ವಜನಿಕ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















