
ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸುವುದು ವಿದ್ಯಾರ್ಥಿ ಸಮುದಾಯಕ್ಕೆ ವಿಫುಲ ಅವಕಾಶಗಳ ಮತ್ತು ಆಯ್ಕೆಗಳನ್ನು ಮಾಡುವ ಬಾಗಿಲು ತೆರೆದುಕೊಳ್ಳುವುದು.
ಎಸ್ ಎಸ್ ಎಲ್ ಸಿ ಪಾಸಾದವರು, ಸಿಬಿಎಸ್ಇ 10ನೇತರಗತಿ ಪಾಸಾದವರು ಮುಂದೇನು? ಎನ್ನುವ ಪ್ರಶ್ನೆ ಇದ್ದಲ್ಲಿ, ನಾನು ಜಾಬ್ ಓರಿಯೆಂಟೆಡ್ ಕೋರ್ಸ್ ಮಾಡಬೇಕು. ಟೆಕ್ನಿಕಲ್ ಫೀಲ್ಡಿನ ಕೋರ್ಸ್ಗಳಿಗೆ ಪ್ರವೇಶ ಪಡೆಯಬೇಕು ಎಂದುಕೊಂಡವರು ಕೋರ್ಸ್ಗಳಿಗೆ ಸೇರಬಹುದು. ಡಿಪ್ಲೋಮಾ ಕೋರ್ಸ್ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವುದಲ್ಲದೆ ಮುಂದೆ ಉನ್ನತ ಶಿಕ್ಷಣದ ಅವಕಾಶಗಳನ್ನು ತೆರೆದಿಡುತ್ತದೆ.
ಡಿಪ್ಲೋಮಾ ಸೇರಿಕೊಳ್ಳಲು ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಡಿಪ್ಲೋಮಾ ಕೊರ್ಸ್ ಅವಧಿ ಕನಿಷ್ಠ 3 ವರ್ಷಗಳು, ಪ್ರಾಯೋಗಿಕ ಮತ್ತು ಕೇಂದ್ರೀಕರಿಸಿದ ಕಾರ್ಯಕ್ರಮವೆಂದರೆ ಡಿಪ್ಲೋಮಾ ಇಂಜಿನಿಯರಿಂಗ್ ಅಥವಾ ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೋಮಾ, ಪಿಯುಸಿ ಮತ್ತು ಐ.ಟಿ.ಐ ಮುಗಿಸಿದ ವಿದ್ಯಾರ್ಥಿಗಳು : ಡಿಪ್ಲೋಮಾ ಸೇರಿಕೊಂಡರೆ ಎರಡು ವರ್ಷಗಳಲ್ಲಿ ಸೋಯ ಎರಡು ವರ್ಷಗಳಲ್ಲಿ ಡಿಪ್ಲೋಮಾ ಮುಗಿಸಿದ ನಂತರ ಬೇಗನೆ ಉದ್ಯೋಗ ಹಿಡಿಯಲು ಉತ್ತಮ ಮಾರ್ಗವಾಗಿದೆ. ಡಿಪ್ಲೋಮಾ: ಶೀಘ್ರ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಸುಲಭ. ಎಸ್.ಎಸ್.ಎಲ್.ಸಿ ಓದಿ ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿ ಬೇಗನೆ ಉದ್ಯೋಗಕ್ಕೆ ಸೇರಬೇಕು ಎಂಬ ಇಚ್ಛೆಯುಳ್ಳವರು ಮುಗಿಸಿ ಮಾಡಿಕೊಳ್ಳಬಹುದು, ಪಿಯುಸಿ, ಇಂಜಿನಿಯರಿಂಗ್ ಪದವಿಯನ್ನು ಯಾವ ವಿಷಯದಲ್ಲಿ ಪಡೆಯಬಹುದೋ ಅದೇ ವಿಷಯದಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಪಡೆಯಬಹುದು. ಓದಿದವರು ಅದೇ ಬ್ರಾಂಚ್ ನಲ್ಲಿ ಡಿಸಿಇಟಿ (ಬಿ. ಇ ಸೀಟು ಪಡೆಯಲು ಅರ್ಹತಾ ಪರೀಕ್ಷೆ) ಬರೆದು ಬಿ.ಇ ಶಿಕ್ಷಣಕ್ಕೆ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆಯಬಹುದು. ಡಿಪ್ಲೋಮಾ ಇಂಜಿನಿಯರಿಂಗ್ ಮುಗಿಸಿ ನೇರವಾಗಿ ಇಂಜಿನಿಯರಿಂಗ್ ಪದವಿಗೆ
ಸೇರಿದಲ್ಲಿ ಒಂದು ವರ್ಷ ವಿನಾಯಿತಿ ಪಡೆದು ನಾಲ್ಕು ವರ್ಷಗಳ ಪದವಿ ಮೂರು ವರ್ಷಗಳಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಬಹುದು ಅಥವಾ ಉದ್ಯೋಗ ಸೇರಿ ಕೆಲವು ವರ್ಷಗಳ ನಂತರ ಕೂಡ ಇಂಜಿನಿಯರಿಂಗ ಪದವಿಗೆ ಸೇರಿಕೊಳ್ಳಬಹುದು. ಡಿಪ್ಲೋಮಾ ನಂತರ ಇಂಜಿನಿಯರಿಂಗ ಪದವಿ ಸೇರಲು ಡಿಪ್ಲೋಮದಾರರಿಗೆ ಮೀಸಲು ಸೀಟುಗಳು ಇರುತ್ತವೆ . ಇದಲ್ಲದೆ ಡಿಪ್ಲೋಮಾ ಮುಗಿಸಿ ಕೆಲವು ವರ್ಷಗಳಷ್ಟು ಉದ್ಯೋಗದ ಕೆಲವು ವರ್ಷಗಳನ್ನು ಉದ್ಯೋಗದಲ್ಲಿ ಮುಂದುವರೆಯುತ್ತಾ ಆಯ್ದ ಕೆಲವು ಸಂಜೆ ಇಂಜಿನಿಯರಿಂಗ್ ಕಾಲೇಜುಗಳಿಂದ ಇಂಜಿನಿಯರಿಂಗ್ ಪದವಿ ಪಡೆಯಲು ಅವಕಾಶವಿದೆ. ಆಫ್ ಭಾರತೀಯ ಅಭಿಯಂತರ (ಇನ್ಸಿಟ್ಯೂಷನ್ ಆಫ್ ಇಂಜಿನಿಯರ್ಸ್) ಸಂಸ್ಥೆ ವತಿಯಿಂದ ಇಂಜಿನಿಯರಿಂಗ್ ನಲ್ಲಿ ಬಿ.ಇ/ಬಿ.ಟೆಕ್ ಮಟ್ಟದ ಪದವಿ ಪಡೆಯಲು ಅವಕಾಶ: ಡಿಪ್ಲೋಮಾ ಪೂರ್ಣಗೊಳಿಸಿ ಉದ್ಯೋಗ ಕೋರ್ಸ್, ಎಂಜಿನಿಯರಿಂಗ್ನಲ್ಲಿ ಮುಂದುವರೆಯುತ್ತಾ ಎ.ಎಂ.ಐ.ಇ ಬಿ.ಇ / ಬಿ.ಟೆಕ್ ಮಟ್ಟದ ಪದವಿ ಪಡೆಯಲು ಅವಕಾಶವಿದೆ . ಇದನ್ನು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ, ಎ.ಐ.ಸಿ.ಟಿ.ಇ, ಯು.ಪಿ.ಎಸ್.ಸಿ ಇತ್ಯಾದಿಗಳು ಬಿ.ಇ / ಬಿ.ಟೆಕ್ಗೆ ಸಮಾನವೆಂದು ಗುರುತಿಸಿವೆ. ಅಂದರೆ, ಎ.ಎಂ.ಐ.ಇ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಸಮಾನ ಸಂಸ್ಥೆಯಾದ ಅವಕಾಶಗಳು ಸಿಗುತ್ತವೆ. ದೇಶದ ಅತಿ ದೊಡ್ಡ ಇಂಜಿನಿಯರ್ಗಳ ಸಂಸ್ಥೆಯಾದ ಆಫ್ ಎಂಜಿನಿಯರ್ಸ್ (ಭಾರತ) ಪಠ್ಯಕ್ರಮವನ್ನು ಸಿದ್ಧಪಡಿಸುವ, ಪರೀಕ್ಷೆಯನ್ನು ನಡೆಸುವ ಮತ್ತು ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಹೊಂದಿದೆ.
ಪಾಲಿಟೆಕ್ನಿಕ್ ಆಯ್ಕೆ:
ಈ ಕೋರ್ಸ್ಗೆ ಪ್ರವೇಶ ಪಡೆಯಲು ರಾಜ್ಯದ ವಿದ್ಯಾರ್ಥಿಗಳು ಸರ್ಕಾರಿ ಪಾಲಿಟೆಕ್ನಿಕ್/ಅನುದಾನಿತ/ಖಾಸಗಿ ಕಾಲೇಜುಗಳಲ್ಲಿ ಅರ್ಜಿ ಪಡೆದು ಮೊದಲಿಗೆ ಅರ್ಜಿ ಸಲ್ಲಿಸಬೇಕು. ನಂತರ ಎಸ್.ಎಸ್.ಎಲ್.ಸಿ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳು ಬಯಸುವ ಹಲವು ಬ್ರಾಂಚ್ ಗಳಿಗೆ ಮೆರಿಟ್ ಆಧಾರದ ಮೇಲೆ ಖಾಸಗಿ ನಿರ್ವಹಣಾ ಪಾಲಿಟೆಕ್ನಿಕ್ ಗಳನ್ನು ಆಯ್ಕೆ ಮಾಡಬಹುದು.
ರಾಯಚೂರು ಜಿಲ್ಲೆಯಲ್ಲಿ ಇರುವ ಕೆಲವು ಪ್ರಮುಖ ಖಾಸಗಿ / ಸರಕಾರಿ ಪಾಲಿಟೆಕ್ನಿಕಗಳು:
ಶ್ರೀ ಸಂಜೀವ್ ಪಾಲಿಟೆಕ್ನಿಕ್, ಲಿಂಗಸುಗೂರು, ಸರ್ಕಾರಿ ಪಾಲಿಟೆಕ್ನಿಕ್ ಲಿಂಗಸುಗೂರು, ಸರ್ಕಾರಿ ಪಾಲಿಟೆಕ್ನಿಕ್, ರಾಯಚೂರು ಶ್ರೀ ಸಂಜೀವ್ ಪಾಲಿಟೆಕ್ನಿಕ್ ಕಾಲೇಜ್, ಲಿಂಗಸುಗೂರು, ಕಳೆದ 17 ವರ್ಷಗಳಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ. ಶ್ರೀ ಸಂಜೀವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ 17 ವರ್ಷಗಳಿಂದ ಯಶಸ್ವಿಯಾಗಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಎಲ್ಲಾ ವಿದ್ಯಾರ್ಥಿಗಳು ಇಂದು ಸರ್ಕಾರಿ ಮತ್ತು ಹಲವಾರು ಖಾಸಗಿ ವಲಯಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದಕ್ಕೆ ತುಂಬಾ ಹೆಮ್ಮೆ ಅನಿಸುತ್ತದೆ.
ಡಿಪ್ಲೋಮಾದಲ್ಲಿರುವ ಕೆಲವು ಪ್ರಮುಖ ಕೋರ್ಸಗಳು – ಉದ್ಯೋಗವೂ ಇದೆ,
ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಮೈನಿಂಗ್ ಮತ್ತು ಮೈನ್ ಸರ್ವೆ ಇಂಜಿನಿಯರಿಂಗ್ ಇತ್ಯಾದಿ. ಅಲ್ಲದೇ ಇನ್ನೂ, ಅನೇಕ ವಿಷಯಗಳಲ್ಲಿ ಡಿಪ್ಲೊಮ ಕೋರ್ಸ್ಗಳಿವೆ. ಇದರಲ್ಲಿ ಮೈನ್ ಮತ್ತು ಮೈನ್ ಸರ್ವೇ ಇಂಜಿನಿಯರಿಂಗ್ ಉತ್ತರ ಕರ್ನಾಟಕ ಏಕೈಕ ಮೈನಿಂಗ್ ಡಿಪ್ಲೋಮೋ ಕಾಲೇಜ್ ” ಶ್ರೀ ಸಂಜೀವ್ ಪಾಲಿಟೆಕ್ನಿಕ್, ಲಿಂಗಸುಗೂರು ” ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ . ಡಿಪ್ಲೊಮಾ ಶಿಕ್ಷಣ ಪಡೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರ್ಕಾರದ ಆದೇಶದಂತೆ ಪ್ರವೇಶ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ. ವಿದ್ಯಾರ್ಥಿ ವೇತನ, ವಸತಿನಿಲಯ, ಮಹಿಳಾ ವಸತಿ ನಿಲಯ, ಕ್ಯಾಂಪಸ್ ಮೂಲಕ ಉದ್ಯೋಗಾವಕಾಶಗಳು, ಸರಕಾರಿ ಕೆಲಸವಲ್ಲದೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ, ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶಗಳು ಮತ್ತು ಸ್ವಯಂ ಉದ್ಯೋಗಿಯಾಗ ಬಯಸುವವರಿಗೆ ಸುವರ್ಣಾವಕಾಶಗಳಿವೆ.
ತಾಂತ್ರಿಕ ಕೋರ್ಸ್ ಪ್ರಯೋಜನಗಳು:
ಪಾಲಿಟೆಕ್ನಿಕ್ ಆಗಿರುವುದರಿಂದ, ಇದು ಹೆಚ್ಚು ಆಸಕ್ತಿದಾಯಕ ಮತ್ತು ಹೆಚ್ಚು ಸವಾಲಿನದು . ವಿದ್ಯಾರ್ಥಿಗಳು ತಂತ್ರಜ್ಞಾನ, ಕೌಶಲ್ಯ ಮತ್ತು ಸಿದ್ಧಾಂತವನ್ನು ಕಲಿಯಲು ಎಂಜನಿಯರಿಂಗ್ ಕಲಿಯಲು ಉತ್ತಮ ಅಡಿಪಾಯ, ಯಶಸ್ವಿ ಡಿಪ್ಲೊಮಾ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ತುಂಬಾ ಪ್ರಕಾಶಮಾನವಾಗಿವೆ.
ಉದ್ಯೋಗಾವಕಾಶಗಳು:
ವಿನೂತನ ಸಿ-25 ಪಠ್ಯಕ್ರಮದಲ್ಲಿರುವಂತೆ ವಿದ್ಯಾರ್ಥಿಗಳಿಗೆ ವರ್ಷದಲ್ಲೇ ಇಂಟರ್ನ್ಶಿಪ್ ಎಂದರೆ ಔದ್ಯೋಗಿಕ ತರಬೇತಿಯನ್ನು ನೀಡಿ ಕೌಶಲ್ಯವನ್ನು ಹಾಗೂ ಔದ್ಯೋಗಿಕ ಅನುಭವವನ್ನು/ತರಬೇತಿ ನೀಡಿ ಇಂಟರ್ನ್ ಆಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅದೇ ಕಂಪನಿಯಲ್ಲಿ ಮುಂದುವರಿಸುವ ಹೆಚ್ಚಿನ ಅವಕಾಶಗಳು ಇದ್ದು ಅಂತಿಮ ಡಿಪ್ಲೋಮಾ ವರ್ಷದಲ್ಲಿ ಕಲಿಕೆ ಜೊತೆ ಗಳಿಕೆ ಕೂಡ ಪ್ರಾರಂಭವಾಗುವ ಸುವರ್ಣ ಅವಕಾಶ. ಇಂಜಿನಿಯರಿಂಗ್ ಡಿಪ್ಲೋಮಾವನ್ನು ಯಶಸ್ವಿಯಾಗಿ ಪೂರೈಸಿದ ನಂತರ, ವಿದ್ಯಾರ್ಥಿಗಳು ಪದವಿ ಪೂರ್ವ ಮಟ್ಟದಲ್ಲಿ ಹೆಚ್ಚಿನ ಎಂಜಿನಿಯರಿಂಗ್ ಅಧ್ಯಯನವನ್ನು ಮುಂದುವರಿಸಬಹುದು ಅಥವಾ ಕಿರಿಯ ಎಂಜಿನಿಯರ್ಗಳು, ಉಪ-ಇಂಜಿನಿಯರ್ ಗಳು, ಸಹಾಯಕ- ಇಂಜಿನಿಯರ್ ಗಳು , ತಂತ್ರಜ್ಞರ-ಮೇಲ್ವಿಚಾರಕರು, ಅಧೀಕ್ಷಕರು, ಫೋರ್ಮನ್, ಯಂತ್ರ ಶಾಸ್ತ್ರಜ್ಞರು, ಕಾರ್ಯಾಚರಣೆ ತಂತ್ರಜ್ಞರು, ಡ್ರಾಫ್ಟ್ಮ್ಯಾನ್, ತಂತ್ರಜ್ಞರು, ಏರೋನಾಟಿಕಲ್ ವಾಹನ ನಿರ್ವಹಣೆ ತಂತ್ರಜ್ಞರು, ಸಲಕರಣೆಗಳ ತಂತ್ರಜ್ಞರು ನಿರ್ವಹಣೆ ಮತ್ತು ಯಂತ್ರಶಾಸ್ತ್ರಜ್ಞರು ಮತ್ತು ತಂತ್ರಜ್ಞರು, ಪ್ರೋಗ್ರಾಮರ್, ಕಿರಿಯ ಬೋಧಕರು, ವಿನ್ಯಾಸಕರು, ಎಲೆಕ್ಟ್ರಿಷಿಯನ್ ಇತ್ಯಾದಿ ಉದ್ಯೋಗಾವಕಾಶಗಳಿಗೆ ವಿವಿಧ ಖಾಸಗಿ ವಲಯಗಳಲ್ಲಿ ಡಿಪ್ಲೋಮಾ ಮಟ್ಟದಲ್ಲಿ ನೇಮಿಸಿಕೊಳ್ಳಬಹುದಾಗಿದೆ. ಡಿಪ್ಲೋಮಾ ಕೋರ್ಸ್ ಮಾಡಿದವರಿಗೆ ತಳಮಟ್ಟದಲ್ಲಿ ನುರಿತ ಕೆಲಸ ಮಾಡುವುದು ಹೇಗೆ ಎಂಬುದು ಗೊತ್ತಾಗುತ್ತದೆ.
ಇವರಿಗೆ ಉದ್ಯೋಗಾವಕಾಶಗಳು ಜಾಸ್ತಿ
ಕೆಲಸದ ಅನುಭವ ಹೆಚ್ಚಾದಂತೆಲ್ಲಾ ಅವರೂ ಕೂಡ ಉನ್ನತ ಹುದ್ದೆಗಳಿಗೆ ಮುಂಬಡ್ತಿ ಪಡೆಯುತ್ತಾರೆ . ಡಿಪ್ಲೋಮಾ ಕೋರ್ಸ್ ಕನಿಷ್ಠ ಅವಧಿಯಲ್ಲಿ ಮತ್ತು ಕನಿಷ್ಠ ಶುಲ್ಕದಲ್ಲಿ ಯಶಸ್ವಿ ಡಿಪ್ಲೋಮಾ ಅಭ್ಯರ್ಥಿಗಳಿಗೆ ಹೆಚ್ಚಿನ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಾ ಜೀವನ ನಡೆಸಲು ಸಹಕಾರಿ. ಶೀಘ್ರ ಹಾಗೂ ಸ್ವಯಂ ಉದ್ಯೋಗಿಯಾಗ ಬಯಸುವವರು ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಮಾಡುವುದು ಸೂಕ್ತ.
- ಶ್ರೀ ವೆಂಕಟೇಶ ನವಲಕಲ್




















