ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕ ವ್ಯಾಪ್ತಿಯಲ್ಲಿ ಬರುವ ಮಲ್ಲಮ್ಮ ಬೆಳವಡಿ ಗ್ರಾಮದ V S S 30 ನಂ ಸೊಸೈಟಿಯಲ್ಲಿ ಲಿಂಗದಳ್ಳಿ ಗ್ರಾಮದ ಜನರು ಬೆಳಗಿನ ಜಾವ 6:00 ಗಂಟೆಗೆ ಲಿಂಗದಳ್ಳಿ ಗ್ರಾಮಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಮುಖ ತೊಳೆಯದೆ ಚಹಾ ಕುಡಿಯದೆ ಕೈಯಲ್ಲಿದ್ದ ಕೆಲಸವನ್ನು ಬಿಟ್ಟು ಮೂರು ಕಿಲೋಮೀಟರ್ ಓಡೋಡಿ ಬಂದು ಹೊಟ್ಟೆ ಹಸಿದರು ಊಟ ಮಾಡದ ಸ್ಥಿತಿಯಲ್ಲಿ ಒಂಟಿ ಕಾಲಿನಲ್ಲಿ ಸರದಿ ಪ್ರಕಾರ ಸಾಲಾಗಿ ಸಂಜೆವರೆಗೆ ನಿಂತುಕೊಂಡರೂ ಪಡಿತರ ಚೀಟಿದಾರರಿಗೆ ರೇಷನ್ ಭಾಗ್ಯ ಸಿಗದಂತಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕೀಯ ಗಣ್ಯರು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಆಗುವ ತೊಂದರೆಗಳನ್ನು ಸರಿಪಡಿಸಬೇಕೆಂದು ಜನರು ಮೇಲಾಧಿಕಾರಿಳಿಗೆ ವಿನಂತಿಸಿದರು ಯಾವುದೇ ರೀತಿ ಸಮಸ್ಯೆ ಬಗ್ಗೆ ಹರಿಯುತ್ತಿಲ್ಲ ಹಾಗಾದರೆ ಈ ಬಡಜನರ ನೋವು ಕೇಳೋರ್ಯಾರು ಕಾದು ನೋಡೋಣ.
ವರದಿ ಮಂಜು ಎಂ.ಚಿಕ್ಕಣ್ಣವರ




















