ಮಧುಗಿರಿ ತಾಲೂಕಿನ ತಹಶೀಲ್ದಾರ್ ಎಚ್. ಶ್ರೀನಿವಾಸ್ ಅವರನ್ನು ದಿಢೀರನೆ ಸ್ಥಳ ನಿಯುಕ್ತಿಗೊಳಿಸಿ ವರ್ಗಾವಣೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
“ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ” ಹೊರಡಿಸಿರುವ ಆದೇಶದಲ್ಲಿ, “ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಹಶೀಲ್ದಾರ್ ವೃಂದದ ಅಧಿಕಾರಿ ಎಚ್. ಶ್ರೀನಿವಾಸ್ ಅವರನ್ನು ವರ್ಗಾಯಿಸಿ/ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ” ಎಂದು ತಿಳಿಸಲಾಗಿದೆ.
ಅವರಿಗೆ ಮುಂದಿನ ಆದೇಶದವರೆಗೆ
ತಹಶೀಲ್ದಾರ್ ಗ್ರೇಡ್ 1 ಕೋಲಾರ ತಾಲೂಕು ಕೋಲಾರ ಜಿಲ್ಲೆ ಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ ರಂಗರಾಜು ಎಂ.




















