ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಿಂದುಳಿದ ಕ್ಷೇತ್ರದಲ್ಲಿ ಪಾಂಡುರಂಗ ವಿಠಲನ ಕೃಪೆಯಿಂದ ಅಭಿವೃದ್ಧಿ ನಿಚ್ಚಳ : ಗಂಗಾಣಿ.

ಚಿಂಚೋಳಿ : ಸಾಲೆಬೀರನಳ್ಳಿ
ವಿಶಾಲವಾದ ಪರ್ವತದಲ್ಲಿ ನೆಲೆಸಿದ ಪಾಂಡುರಂಗ ವಿಠಲ ಮಂದಿರವು ಕ್ಷೇತ್ರದ ಪುಣ್ಯ ಕ್ಷೇತ್ರವಾಗಿ ಅಭಿವೃದ್ಧಿಯ ಪಥದತ್ತ ಸಾಗಲು ಭಕ್ತರು ತನು, ಮನ, ಧನದಿಂದ ಶ್ರಮಿಸಬೇಕು ಎಂದು ರೈತ ಮುಖಂಡ ವೀರಣ್ಣ ಗಂಗಾಣಿ ಹೇಳಿದರು.

ತಾಲೂಕಿನ ಸಾಲೇಬೀರನಳ್ಳಿ ಗ್ರಾಮದ ಹೊರ ವಲಯದ ಪರ್ವತದಲ್ಲಿ ನೆಲೆಸಿರುವ ಪಾಂಡುರಂಗ ವಿಠಲ ಮಂದಿರದ ಸಭಾಂಗಣದಲ್ಲಿ ಬುಧವಾರದಂದು ಏಕದಶಿ ನಿಮಿತ್ತ ಶ್ರೀ ಮಾರುತಿ ನಾಟ್ಯಸಂಘ ಹಾಗೂ ಪಾಂಡುರಂಗ ವಿಠಲ ಮಂದಿರದ ಭಕ್ತರಿಂದ ಹಮ್ಮಿಕೊಂಡ ವಿವಿಧ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿ ಏಕದಶಿಯಂದು ಈ ಭಾಗದ ವಿವಿಧ ಸಾಧಕರಿಗೆ ಗುರುತಿ ಸತ್ಕರಿಸುತ್ತಿರುವ ಕಾರ್ಯ ಮಹತ್ತರವಾಗಿದೆ ಎಂದರು.

ಅತಿ ಹಿಂದುಳಿದ ಕ್ಷೇತ್ರದಲ್ಲಿ ಪಾಂಡುರಂಗ ವಿಠಲ ನೆಲೆಸಿರುವುದು ನಮ್ಮ ಸೌಭಾಗ್ಯ. ಪ್ರತಿಯೊಬ್ಬರು ಭಕ್ತಿ, ಭಾವದಿಂದ ಸೇವೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ದಿಯಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಕೈಲಾದಷ್ಟು ಭಕ್ತಿಯಿಂದ ಅಳಿಲು ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಮತ್ತು ನಮ್ಮ ಚಿಂಚೋಳಿ ಅತೀ ಹಿಂದುಳಿದ ಪ್ರದೇಶವಾಗಿದ್ದು ಈ ಭಾಗದಲ್ಲಿ ದಿವಂಗತ ವೀರೇಂದ್ರ ಪಾಟೀಲರು ಈ ಭಾಗದ ರೈತರಿಗೆ ಅನುಕೂಲವಾಗಲೆಂದು ಹಲವಾರು ಕೆರೆಕಟ್ಟೆಗಳನ್ನು ಕಟ್ಟಿದ್ದಾರೆ ಅವುಗಳ ಉಪಯೋಗ ಪಡುಕೊಳ್ಳಬೇಕು. ಮತ್ತು ಈ ಭಾಗದ ರೈತರಿಗೆ ನಾನು ಬೆನ್ನೆಲುಬಾಗೆ ನಿಲ್ಲುತ್ತೇನೆ ಎಂದರು. ಹಿರಿಯ ಕಲಾವಿದರಾದ ಸಂಗಣ್ಣ ಅಲ್ದಿ ಮಲಕೂಡ ಮಾತನಾಡಿದರು. ಮತ್ತು ಶಂಕರ ಡಾಕ್ಟರ ಮಾಡಗಿ, ಸನ್ಮಾನಿತರು.
ಈ ಸಂದರ್ಭದಲ್ಲಿ ಆಯೋಜಕರಾದ ಚಂದ್ರಶೇಖರ್ ಲಕಶಟ್ಟಿ,
ಶ್ರೀ ಪ್ರಭುಲಿಂಗ ಲೇವಡಿ,ಮಾಣಿಕರಾವ ಗೋಣಿ, ಚಂದ್ರಶೇಖರ್ ಪಾಟೀಲ, ಗೋಪಾಲ್ ರೆಡ್ಡಿ, ಬಾಲರೆಡ್ಡಿ, ರಾಜಶೇಖರ್ ಲಕ್ಶೆಶೆಟ್ಟಿ,ಬಸವರಾಜ್ ಗಾರಂಪಳ್ಳಿ,ಸಂತೋಷ್ ಗಾರಂಪಳ್ಳಿ,ಶಂಕರ್ ಶಿವಪುರಿ, ಜಗನಾಥ ರೆಡ್ಡಿ ಚಟ್ನಳ್ಳಿ, ಚನ್ನಶೆಟ್ಟಿ ಪಾಟೀಲ್, ರಾಜಶೇಖರ್ ಚಿಮ್ಮ,ತುಕಾರಾಂಮ ನೀಲಕಂಠಪ್ಪ, ನೂರಸಿಂಗ ಅಡೆಪ್ಪ ಲೇವಡಿ, ನಿರ್ಮಲ ಲೇವಡಿ , ಸುನಿತಾ ಎಸ್ ರೆಡ್ಡಿ, ಜೈಶ್ರೀ ತುಕಾರಾಂ, ಸುನಿತಾ ಜೆ ಲೇವಡಿ, ದೇವಸ್ಥಾನದ ಪೂಜಾರಿ ಶಾಂತಲಿಂಗಯ್ಯ ಸ್ವಾಮಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!