ನಿಸರ್ಗ ಕೊಡುಗೆಯು ತಿರಂಗದ ವರ್ಣಗಳಲಿ
ಒಡಮೂಡಿದೆ ಸುಲಲಿತ ಚಿತ್ತಾರ ಸೃಜನಶೀಲತೆಯಲಿ
ಉದಯಿಸಿದೆ ಲಘು ಕಾವ್ಯವು ಪದಪುಂಜಗಳಲಿ
ಬರುತಲಿದೆ ನಲ್ಮುಂಜಾವಿನ ಭಾವನಾಂತರಂಗದಲಿ
ಸ್ವಾಗತಿಸುತಲಿ ಆಸ್ವಾದಿಸೋಣ ಕಣ್ಮನಗಳಲಿ
ಪ್ರಕೃತಿ ಮಾತೆಗೆ ಶರಣೆನ್ನೋಣ ಗೌರವದಲಿ
ಪರಸ್ಪರ ರವಾನಿಸೋಣ ಖುಷಿ ಖುಷಿಯಲಿ
ಮುಂದೆ ಸಾಗೋಣ ಶುಭವ ಹಾರೈಸುತಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















