
ಯಾದಗಿರಿ /ಶಹಾಪುರ :
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಪ್ರೌಢಶಾಲೆ ರಸ್ತಾಪುರದಲ್ಲಿ ಶೆಲ್ ಎನ್ಎಕ್ಸ್ಪ್ಲೋರರ್ಸ್ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಸಹಭಾಗಿತ್ವ ದಿಂದ ಆಟದ ಮೈದಾನದಲ್ಲಿ 40 ಕ್ಕಿಂತ ಹೆಚ್ಚು ಗಿಡಗಳನ್ನು ನೆಡುವುದರ ಮುಖಾಂತರ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಇಂದಿರಾ ಬಡಿಗೇರ್ ಡಯಟ್ ನೋಡಲ್ ಆಫೀಸರ್ ಯಾದಗಿರಿ ಸಣ್ಣ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರ ದಿನವನ್ನು ಪ್ರಾರಂಭಿಸಿದರು. ಹಾಗೂ ಈ ಶಾಲೆಯ ಮುಖ್ಯೋಪಾದ್ಯರು ಶ್ರೀಮತಿ ವಾಣಿಶ್ರೀ ದರ್ಬಾರ್ ಅವರು ಕೂಡ ಗಿಡಗಳನ್ನು ನೆಟ್ಟರು.
ಈ ಕಾರ್ಯಕ್ರಮದಲ್ಲಿ ಶಾಲೆ ಎಲ್ಲಾ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಕೂಡ ಸಸ್ಯಗಳನ್ನು ಶಾಲೆಯ ಮೈದಾನದಲ್ಲಿ ಸಸ್ಯಗಳನ್ನು ನೆಟ್ಟರು ಹಾಗೂ ರಸ್ತಾಪುರ್ ಊರಿನ ಒಳಗಡೆ ಹೋಗಿ ಜಾತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಇದರ ಮುಖಾಂತರ ಹೋಗಿ ಪರಿಸರ ದಿನಾಚರಣೆಯ ಬಗ್ಗೆ ಊರಿನಲ್ಲಿ ಜಾಗೃತಿಯನ್ನು ಮೂಡಿಸಿದರು.
- ಕರುನಾಡ ಕಂದ ಸುದ್ದಿ




















