ಬಾಗಲಕೋಟೆ-ಮುಧೋಳ : ಕನಾ೯ಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದಿಂದ ಸೋಮವಾರ ದಿ.8 ರಂದು ಮುಂಜಾನೆ ಸರಿಯಾಗಿ 10 ಗಂಟೆಗೆ ಕಲಾವಿದರ ಮೂಲಭೂತ ಸಮಸ್ಯೆಗಳನ್ನು ಚರ್ಚಿಸಲು ಬಾಗಲಕೋಟೆ ಜಿಲ್ಲೆಯ ಸವ೯ ಕಲಾವಿದರ ಸಭೆಯನ್ನು ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ ಅಧ್ಯಕ್ಷ ಶರಣಬಸವಶಾಸ್ತ್ರಿಗಳು ಹೇಳಿದ್ದಾರೆ.
ಅವರು ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಗಾಡ೯ನ ಆವರಣದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸಕಾ೯ರದ ಗಮನಕ್ಕೆ ತರಲಾಗುವುದು ಎಂದ ಶಾಸ್ತ್ರಿಗಳು ಜಿಲ್ಲೆಯ ಕಲಾವಿದರು ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಳಲು. ಅನಿಸಿಕೆ. ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕೋರಿದ್ದಾರೆ. ಪವಿತ್ರ ಜಕ್ಕಪ್ಪನವರ. ಚಿನ್ನಪಗೌಡ ಗಿಡ್ಢಪ್ಪಗೋಳ. ಶಂಕರೆಪ್ಪ ತಂಬಾಕದ. ಯಲ್ಲಪ್ಪ ಪೂಜಾರಿ ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















