
ಶಿವಮೊಗ್ಗ: ರಾಜ್ಯದಲ್ಲಿ ಎಲ್ಲಾ ಜಿಲ್ಲೆ ತಾಲೂಕುಗಳ ನಗರ ವ್ಯಾಪ್ತಿಗಳಲ್ಲಿ ಕೆಇಬಿಗೆ ಸಂಬಂಧಪಟ್ಟ ಹಳೆ ಕಂಬಗಳನ್ನು ರಸ್ತೆಗಳಿಂದ ತೆಗೆದಿರಲಿಲ್ಲ, ಅಂದರೆ ಅಂಡರ್ ಗ್ರೌಂಡ್ ವೈರಿಂಗ್ ಬಂದ ಮೇಲೆ ಈ ಕಂಬಗಳು ಕೆಲಸಕ್ಕೆ ಬಾರದೆ ರಸ್ತೆಯಲ್ಲಿ ಇದ್ದವು ಕಾರಣ ಎಂದರೆ ಮೆಸ್ಕಾಂ ಇಲಾಖೆಗೆ ಯಾವುದೇ ಆದೇಶವಿರ ಲಿಲ್ಲ. ಇತ್ತೀಚೆಗೆ ಹಳೆ ಕಂಬಗಳನ್ನು ತೆರೆವುಗೊಳಿಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ ನಂತರ ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ನಗರಗಳಲ್ಲಿ ಜೆಸಿಬಿ ಮುಖಾಂತರ ಕಂಬಗಳನ್ನು ತೆಗೆಯುತ್ತಿದ್ದಾರೆ. ಇನ್ನೊಂದು ವಿಷಯ ಏನೆಂದರೆ ಏರ್‌ಟೆಲ್, ಜಿಯೋ, ಬಿಎಸ್‌ಎನ್‌ಎಲ್ ಮತ್ತು ಸ್ಥಳೀಯ ಲೋಕಲ್ ಕೇಬಲ್ ನವರು ಈ ಕಂಬಗಳ ಮೇಲೆ ಕೇಬಲ್ ಮುಖಾಂತರ ಮನೆಗಳಿಗೆ ಆಫೀಸ್ ಗಳಿಗೆ ಕಮರ್ಷಿಯಲ್ ಬಿಲ್ಡಿಂಗ್ ಗಳಿಗೆ ಟಿವಿ ಅಥವಾ ಇಂಟರ್‌ನೆಟ್‌ಗೆ ಕನೆಕ್ಷನ್ ಕೊಟ್ಟಿರುತ್ತಾರೆ, ಇದೀಗ ಕಂಬಗಳನ್ನು ತೆಗೆಯುತ್ತಿರುವುದರಿಂದ ಕೇಬಲ್‌ಗಳನ್ನು ಕಟ್ ಮಾಡುತ್ತಾರೆ. ಆ ಕೇಬಲ್‌ಗಳು ರಸ್ತೆಯಲ್ಲೇ ಉಳಿದಿರುವುದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಂಚರಿಸುವ ವಾಹನಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಕಂಪನಿ ಯವರು ಕೇಬಲ್‌ಗಳನ್ನು ತೆರವುಗೊಳಿಸಿದರೆ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತೆ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ. ಅಕಸ್ಮಾತ್ ತೆಗೆಯದೆ ಇದ್ದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಅವರಿಗೆ ನೋಟಿಸ್ ಕೊಡಬೇಕೆಂದು ಸಮಾಜ ಸೇವಕ, ಕಾಯಕಯೋಗಿ ಚನ್ನಬಸಪ್ಪ ವಿನಂತಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















