ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ನನ್ನ ದೊಡ್ಡಪ್ಪ ( ನನ್ನ ತಂದೆಯವರ ಹಿರಿಯ ಅಣ್ಣ) ಚಡಚಣಕ್ಕೆ ಭೇಟಿ ಕೊಟ್ಟಾಗ ನನ್ನ ತಂದೆಯವರು ದೂರ ದೂರದ ಹಳ್ಳಿಗಳಿಗೆ ನಡೆಯುತ್ತ ಓಡಾಡುವ ಕಷ್ಟವನ್ನು ಕಂಡು, ಬೆಳಗಾವಿಯಿಂದ ಒಂದು ಸೈಕಲ್ಲನ್ನು ಕಂತಿನಿಂದ ಖರೀದಿಸುವಲ್ಲಿ ಯಶಸ್ವಿಯಾದರು.( ವರ್ಷ 1938). ‘ ಟ್ರೋಜನ್ ’ ಹೆಸರಿನ ಆ ಸೈಕಲ್ ಬ್ರಿಟಿಷ್ ಉತ್ಪಾದನೆಯಾಗಿದ್ದು ಅದರ ಬೆಲೆ ರೂಪಾಯಿ 46/-. ನನ್ನ ದೊಡ್ಡಪ್ಪ ಚಡಚಣಕ್ಕೆ ಅದೇ ಸೈಕಲ್ ಮೇಲೆ ಹೋಗಿ ನನ್ನ ತಂದೆಯವರಿಗೆ ಅದನ್ನು ಕೊಟ್ಟನು. ಮಳೆಗಾಲದ ದಿನಗಳಲ್ಲಿ ರಸ್ತೆಯೆಲ್ಲ ಕೆಸರಾಗಿರುತ್ತಿದ್ದರಿಂದ ಸೈಕಲ್ಲು ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೂ ನನ್ನ ತಂದೆಯವರು ಸೈಕಲ್ಲಿನ ಪೂರ್ತಿ ಉಪಯೋಗವನ್ನು ಪಡೆದರು ಹಾಗೂ ರಾತ್ರಿ ಹೊತ್ತು ಹಳ್ಳಿಗಳಲ್ಲಿ ತಂಗುವದನ್ನು ನಿಲ್ಲಿಸಿದರು. ಪ್ರತಿದಿನ ಅವರು ಮರಳಿ ಚಡಚಣಕ್ಕೆ ಬರುತ್ತಿದ್ದರು.
ಟ್ರೋಜನ್ ಲ್ಯಾಂಬ್ರಟಾ ಸಂಸ್ಥೆಯು 1959 ರಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು ಅದನ್ನು ಲ್ಯಾಂಡ್ ಟ್ರೋಜನ್ ಕನ್ಸೆಷನರಿ ಲಿಮಿಟೆಡ್ ಸಂಸ್ಥೆಯು ತನ್ನದಾಗಿಸಿಕೊಂಡಿತ್ತು. ಟ್ರೋಜನ್ ಕನ್ಸೆಷನರಿ ಲಿಮಿಟೆಡ್ ಸಂಸ್ಥೆಯು ಬ್ರಿಟಿಷ್ ಮೋಟರ್ ಇಂಡಸ್ಟ್ರಿಯಲ್ಲಿ ಒಂದು ಅತ್ಯಂತ ಹಳೆಯದಾದ ಸಂಸ್ಥೆಯಾಗಿತ್ತು.( ಮೂಲ-ಅಂತರ್ಜಾಲ).
ಮುಂದೆ ನನ್ನ ತಂದೆಯವರು ಈ ಟ್ರೋಜನ್ ಸೈಕಲನ್ನು ಮಾರಿ, ಹೊಸ ” ಈಸ್ಟರ್ನ್ ಸ್ಟಾರ್-24” ಎಂಬ ಸೈಕಲ್ಲನ್ನು ಬಿಜಾಪುರದಲ್ಲಿ ( ವಿಜಯಪುರ) ರೂಪಾಯಿ 130/- ಕೊಟ್ಟು ಖರೀದಿಸಿದರು ಹಾಗೂ ಈ ಸೈಕಲ್ ( ಆಸ್ತಿ) ನಮ್ಮ ತಂದೆಯವರು ಗತಿಸಿದ ಬಹಳ ದಿನಗಳ ನಂತರವೂ ನಮ್ಮ ಮನೆಯಲ್ಲಿ ಇತ್ತು.
1938 ರಲ್ಲಿ ‘ಜಾನಕಿ ದಾಸ್ ಅಂಡ್ ಕಂಪನಿ’ ಎಂಬ ಸಂಸ್ಥೆಯು “ ಈಸ್ಟರ್ನ್ ಸ್ಟಾರ್” ಎಂಬ ಟ್ರೇಡ್ ಮಾರ್ಕ್ ಉಳ್ಳ ಸೈಕಲ್ ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಈ ಸಂಸ್ಥೆಯು ಸಮಕಾಲೀನ ‘ ಅಟ್ಲಾಸ್ ಸೈಕಲ್ಸ್’ ( ಹರಿಯಾಣ) ಸಂಸ್ಥೆಯ ಮಾತ್ರ ಸಂಸ್ಥೆಯಾಗಿತ್ತು. ಇದರ ಫ್ಯಾಕ್ಟರಿಯು ಈಗಲೂ ಕೂಡ ಸೋನೆಪತ್, ದಿಲ್ಲಿಯ ಹತ್ತಿರವಿದೆ.( ಮೂಲ- ಅಂತರ್ಜಾಲ).
ಉತ್ತಮ ಮಾಹಿತಿ ವಂದನೆಗಳು ಸರ್
– V s Ramamurthy, KalyanNagar Bangalore
Nice good memories, PSK! My father had a Hercules bike to go to his school, and it was quite a celebration when he bought it in 1968.
- Sanganna Asuti, ಊಶಾ
Asset 18, You have a flow, a natural way of writing and conveying your thoughts. Thanks for sharing. It’s a Gift from God.
- Dr. Fazal USA.
Asset 18
Nice asset. In loving memory of father. Had not heard of these two brands earlier. My father had also left behind a “Hercules” brand cycle of 22″ inches in height. He used it extensively. It was his favourite one. After his passing away. I started using it. I had maintained it with a lot of care. And I was very proud.
- V V Shivnaikar.
- ಪ್ರಮೋದ್ ಕುಲಕರ್ಣಿ




















