ಹರಳೆ ಬೀಜಗಳ ತುಂಬಿಹ ಹಸಿರು ಗೋಲಿಗಳು
ನಡುವಲಿ ಗೋಲಿಗಳ ಬೇರ್ಪಡಿಸಿದ ಕಡ್ಡಿಗಳು
ಬಳ್ಳಿಯಲಿ ಅರಳಿದ್ದ ಆಕರ್ಷಣೀಯ ಶ್ವೇತ ಪುಷ್ಪಗಳು
ಜೋಡಿಸಿ ಅಲಂಕರಿಸಿರುವ ಗುಲಾಬಿ ದಳಗಳು
ಕ್ರಿಯಾಶೀಲತೆಯಲಿ ಅರಳಿತು ಸುಲಲಿತ ಚಿತ್ತಾರ
ಜೀವತುಂಬಿದೆ ಅಕ್ಷರಗಳಲಿ ಕಾವ್ಯದ ಸಾರ
ರವಾನಿಸುತಿರುವೆ ಹೇಳಲು ಸುಮನಗಳಿಗೆ ನಮಸ್ಕಾರ
ಮುದದಲಿ ಆಸ್ವಾದಿಸೆ ಅದುವೇ ನನಗೆ ಪುರಸ್ಕಾರ
- ಲಲಿತಾ ಕೆ ಆಚಾರ್, ಬೆಂಗಳೂರು




















