ಅಧಿಕ ಕ್ಯಾಲ್ಸಿಯಮ್ ತುಂಬಿರುವ ಫಲ
ಕಣ್ಣಿನ ಬೆಳಕನ್ನು ಅಧಿಕಗೊಳಿಸುವ ಫಲ
ಕ್ಯಾನ್ಸರ್ ಕಾಯಿಲೆಯ ಶಮನಕೆ ರಾಮಬಾಣ
ಇದುವೆ ಕೊಮೊಸಸ್ ಪೈನಾಪಲ್ ಅನಾನಸ್
ಸಿಪ್ಪೆಯಲಿ ಜೋಡಿಸಿಹ ನಕ್ಷತ್ರ ರಂಗೋಲಿ
ನೆತ್ತಿಯ ಜುಟ್ಟು ನಿಂತಿದೆ ಅದರ ನಡುವಲಿ
ನವ್ಯ ವಿನ್ಯಾಸವು ನನ್ನ ಸುಲಲಿತ ಚಿತ್ತಾರದಲಿ
ಕಾವ್ಯೋದಯವಾಗಿದೆ ಶುಭ ಮುಂಜಾವಿನಲಿ
- ಲಲಿತಾ ಕೆ ಆಚಾರ್ ಬೆಂಗಳೂರು




















