ಕನಕಗಿರಿ : ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಶಾಲೆಯ ಎಲ್ ಕೆ ಜಿ ಇಂದ 7ನೇ ತರಗತಿ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಯೋಗ ಅಭ್ಯಾಸಗಳನ್ನು ಮಾಡಿಸುವುದರ ಮೂಲಕ ಯೋಗಾಸನದ ಪೂರ್ವ ಪೀಠಿಕೆ ಯೋಗಾಸನದ ಮಹತ್ವ ಮತ್ತು ಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ನಾಗೇಶ್ ಮಾಟೂರ್, ವೆಂಕಟೇಶ್ ರೆಡ್ಡಿ, ಶ್ರೀಮತಿ ಪ್ರಿಯಾಂಕ ರೆಡ್ಡಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ರೇಖಾ, ಶರಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















