ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗ್ಲನೀಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ : ಆಫ್ರಿಕಾ ಮಹಿಳೆಗೆ ಮರುಜೀವ

ಹುಬ್ಬಳ್ಳಿ : ಹಲವು ಶಸ್ತ್ರಚಿಕಿತ್ಸೆಗಳು ವಿಫಲಗೊಂಡು
ಆಫ್ರಿಕಾ ಮೂಲದ 35 ವರ್ಷದ ಮಹಿಳೆಗೆ ಇಲ್ಲಿನ ಗ್ರೆನೀಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘3ಡಿ ಪ್ರಿಂಟೆಡ್ ಟೈಟಾನಿಯಂ ಹಿಪ್ ಇಂಪ್ಲಾಂಟ್’ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮರುಜೀವ ನೀಡಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ಬಸವರಾಜ್ . ಎಂ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಡೆಯುವ ಸಾಮರ್ಥವನ್ನೇ ಕಳೆದುಕೊಂಡಿದ್ದ ಸಂಕೀರ್ಣ ಹಿಪ್ ಗಾಯದಿಂದಾಗಿ ಮಹಿಳೆಯ ಹಿಪ್ ಸಾಕೆಟ್‌ನಲ್ಲಿ ಭಾರಿ ಪ್ರಮಾಣದ ಮೂಳೆ ನಷ್ಟ ಉಂಟಾಗಿತ್ತು. ಅಲ್ಲದೆ ಒಂದು ಕಾಲು ಸುಮಾರು 4 ಇಂಚುಗಳಷ್ಟು (10 ಸೆಂ.ಮೀ.) ಚಿಕ್ಕದಾಗಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ಅಸ್ಥಿ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಬಸವರಾಜ್ ಸಿ. ಎಂ. ಅವರ ನೇತೃತ್ವದ ತಜ್ಞರ ತಂಡವು ಸಾಮಾನ್ಯ

ಹಿಪ್ ರಿಪ್ಲೇಸ್‌ಮೆಂಟ್ ಈಕೆಗೆ ಸೂಕ್ತವಲ್ಲ ಎಂದು ನಿರ್ಧರಿಸಿ, ಈ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಮುಂದಾಯಿತು ಎಂದು ಮಾಹಿತಿ ನೀಡಿದರು.

5 ಈ ತಂತ್ರಜ್ಞಾನದಲ್ಲಿ ರೋಗಿಯ ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ 3ಡಿ ಯೋಜನೆಯ ಆಧಾರದ ಮೇಲೆ ಅವರಿಗಾಗಿಯೇ ವಿಶೇಷವಾಗಿ ಇಂಪ್ಲಾಂಟ್ ವಿನ್ಯಾಸಗೊಳಿಸಲಾಗುತ್ತದೆ. ಗಿಯ ದೇಹರಚನೆಗೆ ನಿಖರವಾಗಿ ಹೊಂದುವಂತೆ ಇದರಿಂದ ರೋ-ಇಂಪ್ಲಾಂಟ್ ಅಳವಡಿಸಿ, ಕಾಲಿನ ಉದ್ದವನ್ನು ಸಮನಾಗಿಸಲು ಸಾಧ್ಯವಾಗಿದೆ ಎಂದರು.

ನಂತರ ರೋಗಿ ಈಗ ಸಂಪೂರ್ಣ ಶಸ್ತ್ರಚಿಕಿತ್ಸೆಯ ಗುಣಮುಖರಾಗಿದ್ದು, ನೋವಿನಿಂದ ಮುಕ್ತಿ ಪಡೆದು ಸ್ವತಂತ್ರವಾಗಿ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಭಾರತದಲ್ಲೇ ತಯಾರಿಸಲಾದ ಈ 3ಡಿ ಪ್ರಿಂಟಿಂಗ್ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರದೀಪ ಬುಲಬುಲೆ, ಮುತ್ತಣ್ಣ ಹಂಚಿನಾಳ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!