ಹಿರಿಯ ಸಾಹಿತಿ ,ಪರಿಸರ ಚಿಂತಕ ,ದೇಹ ದಾನಿ ಭೇರ್ಯ ರಾಮಕುಮಾರ್ ಅವರ ಸಾಹಿತ್ಯ ಹಾಗೂ ಸಮಾಜ ಸೇವೆಯನ್ನು ಗುರ್ತಿಸಿ ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ನಡೆದ ಕನ್ನಡ ನುಡಿ ಸಮಾವೇಶದಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಧಾರವಾಡದ ಚೇತನ ಫೌಂಡೇಶನ್ ಅಧ್ಯಕ್ಷರಾದ ಡಾ.ಚಂದ್ರಶೇಖರ ಮಾಡಲಗೇರಿ ,ಚಾಮರಾಜನಗರದ ಹಿರಿಯ ಪತ್ರಕರ್ತರಾದ ಡಾ.ರಾಜೇಶ್ ನಾಯಕ್ ,ಸಾಹಿತಿ ಸುಮಾ ಬೆಳಗೆರೆ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.
- ಕರುನಾಡ ಕಂದ ಸುದ್ದಿ




















