
ರಣಬಿಸಿಲಿನಲ್ಲಿ ರೋಡಿಗಿಳಿದ ರೈತರು
ಆರ್.ಎಸ್.ಎಸ್.ಬಿಟ್ಟು, ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ
ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತರು
ಕಾಳಗಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಹಾಗೂ ಬೆಳೆ ನಷ್ಟ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ರಾಮನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ರೈತರು, ಈ ವರ್ಷ ಸಮರ್ಪಕ ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಕೂಡಲೇ ಅಧಿಕಾರಿಗಳ ಮೂಲಕ ಬೆಳೆ ಹಾನಿಯ ಸಮೀಕ್ಷೆ ನಡೆಸಿ, ಕಾಳಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಗ್ರೇಡ್-1ತಹಶೀಲ್ದಾರ ಪೃಥ್ವಿ ರಾಜ ಪಾಟೀಲ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರಿಗೆ ಮನವಿ ಪತ್ರ ನೀಡಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ರೈತರ ಕೃಷಿ ಸಾಲ ಮನ್ನಾ, ಬೆಳೆ ವಿಮೆ ಪರಿಹಾರವನ್ನು ಶೀಘ್ರ ಬಿಡುಗಡೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ಮಠಗಳ ಪೂಜ್ಯರು, ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ರೈತರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾಳಗಿ ತಾಲೂಕು ಅಧ್ಯಕ್ಷ ಮಾತನಾಡಿ, ಮಳೆಗಾಲವಿದ್ದರೂ ಸಹ ರಣಬಿಸಿಲಿನ ತಾಪಮಾನಕ್ಕೆ ಇಗಾಗಲೇ ಮುಂಗಾರು ಕೈಕೊಟ್ಟ ಕಾರಣ ಉದ್ದು-ಹೆಸರು, ತೋಗರಿ ಸಂಪೂರ್ಣ ನಷ್ಟವಾಗಿ ರೈತ ಸಂಕಷ್ಟಕ್ಕೆ ಬಿದ್ದಿರುವ ಪ್ರಯುಕ್ತ ಸರ್ಕಾರ ಬರಗಾಲ ಘೋಷಿಸಿ ರೈತರ ನೆರವಿಗೆ ಧಾವಿಸುವುದು ಅಗತ್ಯವಾಗಿದೆ ಎಂದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಬಾಬಾಸಾಹೇಬರ ವೃತ್ತದವರೆಗೆ ನೇಗಿಲು, ಗಳ್ಯಾದಿಂಡು, ಎತ್ತಿನ ಬಂಡಿ, ಟ್ರಾಕ್ಟರ್ ಗಳು ಸೇರಿ ವಿವಿಧ ಕೃಷಿ ಪರಿಕರಗಳನ್ನು ತೆಗೆದುಕೊಂಡು, ಬಾರುಕೋಲುಗಳನ್ನು ಬೀಸುತ್ತಾ ಮೇರವಣಿಗೆಯ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನಾಲ್ಕು ತಾಸು ರಸ್ತೆ ಬಂದ್:
ಅಂಬೇಡ್ಕರ್ ವೃತ್ತದಲ್ಲಿ 77ಹಳ್ಳಿಗಳಿಂದ ಬಂದಿರುವ ರೈತರು, ರೋಡಿನ ಮೇಲೆ ಧರಣಿ ಕುಳಿತರು.
ಚಿಂಚೋಳಿ-ಕಲಬುರಗಿ ಸಂಚಾರ ಸ್ಥಗಿತ:
ಪ್ರತಿಭಟನೆಯಿಂದ ಚಿಂಚೋಳಿ-ಕಲಬುರಗಿ ಸಂಚಾರ ಸ್ಥಗಿತಗೊಂಡ ಕಾರಣ ಸಾರ್ವಜನಿಕರು ಪರದಾಡುವಂತಾಯಿತು.
ಅಂಬುಲೆನ್ಸ್ ಗಳು ಸುಗಮ ಸಂಚಾರಕ್ಕಾಗಿ ತೊಂದರೆ ಅನುಭವಿಸುತ್ತಿರುವುದನ್ನು ಕಂಡ ರೈತರು, ಅಂಬುಲೆನ್ಸ್ ನಲ್ಲಿರುವ ರೋಗಿಯ ಸ್ಥಿತಿ ಮತ್ತು ಪ್ರತಿಭಟನೆಗಿಳಿದ ಇಂದಿನ ರೈತರ ಸ್ಥಿತಿ ವಂದೇ ಆಗಿದೆ ಎಂದ ರೈತರು, ವಾಹನ ಕ್ಕೆ ಸುಗಮ ಸಂಚಾರ ವದಗಿಸಿಕೊಟ್ಟು ಮಾನವಿಯತೆ ಮೆರೆದರು.
ಸಜ್ಜೆ ರೊಟ್ಟಿ ಫುಂಡಿ ಪಲ್ಯಾ ಸವಿದು ಪ್ರತಿಭಟನೆಗಿಳಿದ ರೈತರು:
ಸುದೀರ್ಘ ನಾಲ್ಕು ತಾಸು ರಸ್ತೆ ತಡೆ ನಡೆಸಿರುವ ರೈತರು, ಹಸಿವೆಯಿಂದ ಬಳಲಿ ತಾವೇ ಕಟ್ಟಿಕೊಂಡು ಬಂದ ಸಜ್ಜೆ ರೊಟ್ಟಿ ಪುಂಡಿ ಪಲ್ಯ ಸವಿದ ರೈತರು, ಮತ್ತೆ ಪ್ರತಿಭಟನೆಗಿಳಿದರು.
ಸರ್ಕಾರಿ ಅಧಿಕಾರಿಗಳಿಗೆ ಸುಡುಬಿಸಿಲಿನ ರುಚಿ:
ರೈತರ ಸಮಸ್ಯೆ ಆಲಿಸಲು ಬಂದ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಗೆ ಸುಡು ಬಿಸಿಲಿನ ರುಚಿ ತೋರಿಸಿ, ರೈತರ ಸಂಕಷ್ಟಗಳ ಬಗ್ಗೆ ಪ್ರತಿಭಟನಾಕಾರರು ಬಿಡಿ-ಬಿಡಿಯಾಗಿ ತಿಳಿಸಿದರು.
ಆರ್.ಎಸ್.ಎಸ್ ಬಿಟ್ಟು ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ :
ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸುತ್ತಾ ವಿನಃ ಕಾರಣ ಆರ್.ಎಸ್.ಎಸ್ ನ್ನೇ ಬಹು ದೊಡ್ಡ ಸಮಸ್ಯೆ ಎಂಬುದು ಸೃಷ್ಟಿಸಿಕೊಂಡ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲಿ.
- ರೈತ ಮಲ್ಲೀಕಾರ್ಜುನ ರುದನೂರ
ರೈತ ಹೋರಾಟಕ್ಕೆ ಪಂಚ ಪೂಜ್ಯರ ಸಾಥ್ :
ಭರತನೂರಿನ ಚಿಕ್ಕಗುರುನಂಜೇಶ್ವರ ಶ್ರೀಗಳು, ಕೋಡ್ಲಿ, ಮಂಗಲಗಿ, ರಟಕಲ್ ಸೇರಿ ಪಂಚ ಮಠಾಧೀಶರು, ರಣಬೀಸಿಲು ಲೆಕ್ಕಿಸದೇ ರೈತರೊಂದಿಗೆ ಸೇರಿ ಮೈಮೇಲೆ ಬೇವರು ಸುರಿತ್ತಿದ್ದರು ಕೊನೆವರೆಗೂ ಜೊತೆಗಿದ್ದರು.
ರೈತ ನಾಯಕ ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ ಗೊಣಗಿ, ಪ್ರಶಾಂತ ರಾಜಾಪೂರ, ಚಂದಶೇಖರ ಹರಸೂರ, ಅವಿನಾಶ ಗುತ್ತೇದಾರ, ಮಾರುತಿ ಗಂಜಗಿರಿ, ಮೋಹನ ಚಿನ್ನಾ ಕೊಡದೂರ, ಸುಂದರ ಡಿ.ಸಾಗರ, ಭರತ ಬುಳ್ಳಾ, ಮಲ್ಲಿಕಾರ್ಜುನ ಪೋಲಿಸ್ ಪಾಟೀಲ, ಪೃಥ್ವಿ ನಾಮದಾರ, ಕರಣ ರಾಜಾಪೂರ, ಭೀಮರಾಯ ಮಲಘಾಣ, ಸಾಬಣ್ಣ ಪೂಜಾರಿ, ಶರಣು ಬೇಲೂರ, ಕಾಳಪ್ಪ ಕರೆಮನೋರ, ರಾಜು ಸಿಳ್ಳಿನ, ಮಲ್ಲಿಕಾರ್ಜುನ ಪಾಟೀಲ ಹುಳಗೇರಿ, ಮಶಾಖ ಪಟೇಲ,ರಮೇಶ ಹೆಬ್ಬಾಳ, ಮಲ್ಲು ಹೂಗಾರ, ದಯಾನಂದ ಪಾಟೀಲ, ರಾಜು ಹೊಸ್ಸಳ್ಳಿ, ಹಣಮಂತರಾವ ಪಾಟೀಲ, ಸಿದ್ದಪ್ಪ ಪಾಟೀಲ, ಶೇಖರ ಮಾನಶೆಟ್ಟಿ, ಶಿವು ಸಾಲಿಮಠ, ಚಂದ್ರಕಾಂತ ಚೌವ್ಹಾಣ, ಮಲ್ಲೀಕಾರ್ಜುನ ಪಾಟೀಲ ಹಲಚೇರಿ, ದತ್ತು ಗುತ್ತೇದಾರ, ಶ್ರೀಮಂತ ಹಡಪಾದ, ಧನಸಿಂಗ ಚೌವ್ಹಾಣ, ಸಿದ್ರಾಮಪ್ಪ ಕಮಲಾಪೂರ, ವೀರಭದ್ರಪ್ಪ ಸಲಗೂರ ಸೇರಿತೆ ಅನೇಕ ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- ಕರುನಾಡ ಕಂದ ಸುದ್ದಿ




















