ಅರಮನೆ ನಗರಿ ಮೈಸೂರಿನ ರೋಟರಿ ಕ್ಲಬ್ ಹಾಲ್ ನಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಇವರ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹುಣಸೂರಿನ ಡಾಕ್ಟರ್ ಅಬ್ದುಲ್ ಶುಕುರ್ ಗುರೂಜಿ ರವರು ಮಾತನಾಡಿ ಸಮಾಜದಲ್ಲಿ
ಬುದ್ಧಿವಂತರಿದ್ದರೂ ಒಳ್ಳೆಯ ಗುಣ ಹೊಂದಿದ ಮಕ್ಕಳು ಸಿಗುವುದು ಕಷ್ಟ. ಅಂಕ ಎಷ್ಟೇ ಪಡೆದರೂ ಸಂಸ್ಕಾರ ಇಲ್ಲದಿದ್ದರೆ ಅಡ್ಡದಾರಿ ಹಿಡಿಯುವ ಸಾಧ್ಯತೆಯಿದೆ. ವಿದ್ಯಾರ್ಥಿ ದಿಸೆಯಲ್ಲಿ ಓದುವುದೇ ಮುಖ್ಯ ಗುರಿಯಾಗಬೇಕು. ಇದರ ಜತೆಗೆ ಸಮಾಜಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳುವುದೇ ಸಂಸ್ಕಾರ. ಶಾರೀರಿಕ ಬಲದಿಂದ ಇನ್ನೊಬ್ಬರಿಗೆ ತೊಂದರೆ ಮಾಡಬಹುದು ಎಂದು ಹೇಳಿದರು. ನಂತರ ಇನ್ನೊಬ್ಬ ಅತಿಥಿಯಾದ ರಾಮಚಂದ್ರ ಅವರು ಮಾತನಾಡಿ ಪ್ರತಿಭೆಯನ್ನು ಮೊದಲು ಗುರುತಿಸುವ ಕೆಲಸ ಮನೆಯಿಂದ ಆಗಬೇಕು. ನಂತರ ನೆರೆಹೊರೆಯವರು ಮತ್ತು ಮುಖ್ಯವಾಗಿ ಶಾಲೆಯಲ್ಲಿ ಶಿಕ್ಷಕರಿಂದ ಆಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಪ್ಪ ನಾಯಕ್ ಯಾವ ಮಕ್ಕಳೂ ಖಾಲಿ ಪುಸ್ತಕವಲ್ಲ. ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತಾವರಣ ಕಲ್ಪಿಸಿಕೊಟ್ಟರೆ ಪತಿಬೆ ವಿಕಸನಗೊಳ್ಳುತ್ತದೆ ಎಂದು ಹೇಳಿದರು. ನಂತರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ನೆನಪಿನ ಕಾಣಿಕೆ ಬಹುಮಾನ ನೀಡಿ ಗೌರವಿಸಲಾಯಿತು. ಇದೇ ವೇದಿಕೆಯಲ್ಲಿ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಎಚ್ ಸಿ ಬಸವರಾಜ್ ಉದನೂರು, ಕೆ ಮಹದೇವನಾಯಕ, ಮಾಜಿ ಮಯೂರ್ ಪುರುಷೋತ್ತಮ್ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.
- ಕರುನಾಡ ಕಂದ ಸುದ್ದಿ




















