ಕಲಬುರ್ಗಿ : ಜಿಲ್ಲೆಯ ಕಾಳಗಿ ತಾಲೂಕಿನ ಅಂಬೇಡ್ಕರ್ ಸರ್ಕಲ್ ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಪ್ರಸ್ತುತ 2026 27 ನೇ ಸಾಲಿನ ಮುಂಗಾರು ಹಂಗಾಮ ಮಳೆ ಅಭಾವದಿಂದ ಬಿತ್ತನೆ ಮಾಡಿಲ್ಲ ಅಲ್ಲದೆ ಮಳೆ ಅಭಾವದಿಂದ ಬೆಳೆಗಳು ಬಿಸಿಲಿನ ತಾಪದಿಂದ ಹಾಳಾಗಿ ಹೋಗಿವೆ. ಸರಕಾರ ಹಿಂದುಳಿದ ರೈತರ ನೆರವಿಗಾಗಿ ಕಾಳಗಿ ತಾಲೂಕನ್ನು ಬರಗಾಲ ಪಿಡಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು ಹಾಗೂ ರಾಷ್ಟ್ರಕಿತ ಬ್ಯಾಂಕುಗಳಿಂದ 1 ಲಕ್ಷದವರಿಗೆ ಸಾಲ ಮನ್ನಾ ಮಾಡಬೇಕೆಂದು ಶರಣಬಸಪ್ಪ ಮಮ್ ಶೆಟ್ಟಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷರು ಮಾನ್ಯ ತಹಶೀಲ್ದಾರ್ ಮುಖಾಂತರವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆಯಲ್ಲಿ ತಾಲೂಕಿನ ಬಹುತೇಕ ಗ್ರಾಮದಲ್ಲಿ ಜೂನ್ ತಿಂಗಳಿನಲ್ಲಿ ಉಂಟಾದ ಮಳೆ ಬಾರದದ್ದರಿಂದ ಬಿತ್ತನೆ ಮಾಡಿರುವುದಿಲ್ಲ. ಬಿತ್ತನೆ ಮಾಡಿದ ಹೊಲದಲ್ಲಿ ಮೊಳಕೆ ಒಡ್ಡಿದ್ದು ಬಿಸಿಲು ತಾಪಮಾನಕ್ಕೆ ಒಣಗಿ ಹೋಗಿವೆ. ಇದರಿಂದ ರೈತರು ಸಾಕಷ್ಟು ಸಂಕಟಕ್ಕೆ ಒಳಗಾಗಿದ್ದಾರೆ. ಕೃಷಿ ಸಾಲ, ಬೆಳೆ ಸಾಲ, ಬೀಜ ರಸಗೊಬ್ಬರ, ಸಾಕಷ್ಟು ಸಾಲವನ್ನು ಮಾಡಿಕೊಂಡು ಸಂಕಟಕ್ಕೆ ಒಳಗಾಗಿದ್ದಾರೆ. ಆದರಿಂದ ಸರ್ಕಾರವು 25,000 ದಿಂದ 30,000 ರೂ ವರೆಗೆ ಬೆಳೆ ಪರಿಹಾರ ಕೊಡಬೇಕು. ಬೆಳೆ ಸಾಲ ಮನ್ನಾ ಮಾಡಬೇಕು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು.
ತೊಗರಿ ಉದ್ದು ಹೆಸರು ಸೋಯಾಬಿನ್ ಆರ್ಥಿಕ ಬೆಳೆಯಾಗಿದ್ದರಿಂದ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಳಗಿ ತಾಲೂಕಿನ ರೈತರು ಆತಂಕವನ್ನು ವ್ಯಕ್ತಪಡಿಸಿದರು.
ದನ ಕರಗಳಿಗೆ ಮೇವು ಕಣಕಿ ಕೊರತೆ ಆಗುತ್ತಿದ್ದು ಗೋಶಾಲೆ ತೆಗೆಯಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು,
ವಯೋ ವೃದ್ರರ ವಯಸ್ಕರ ಮಾಶಾಸನ ಹಣ ಬಂದಾಗಿ 4 ತಿಂಗಳಾಗಿದೆ, ವಿಧವಾ ವೇತನ, ಅಂಗವಿಕಲ ಚೇತನ ವಯಸ್ಕರ ಅರ್ಧಕ್ಕೆ ಮಾಶಾಸನ ಹಣ ಬಿಡುಗಡೆ ಮಾಡಬೇಕು ಮತ್ತು ಹಳೆ ಆದೇಶದ ಕಾಪಿ ಪ್ರಕಾರ ಮುಂದುವರೆಸಬೇಕು ಮೋಡ ಬಿತ್ತನೆ ಮಾಡಬೇಕು, ಬೆಳೆ ವಿಮಾ ಕಟಾವು ಪರಿಹಾರ ಹಣ 300 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಬೇಕು ಇಷ್ಟು ಬೇಡಿಕೆಗಳನ್ನು ಕೂಡಲೆ ಸರ್ಕಾರವು ರೈತರ ನೆರವಿಗೆ ಸ್ಪಂದಿಸಿ ಪರಿಹಾರವನ್ನು ಕೊಡಬೇಕೆಂದು ಕಾಳಗಿ ತಾಲೂಕಿನ ಪ್ರತಿಭಟನಾಕಾರರು ಮನವಿ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಕೋಡ್ಲಿ, ರಟಕಲ್ ವಿವಿಧ ಮಠಾಧೀಶರು, ಶರಣಪ್ಪ ಮಮಶೆಟ್ಟಿ, ಪರಮೇಶ್ವರ್ ಕಾಂತ, ದಿಲೀಪ್ ನಗೂರೆ, ತುಳಜಪ್ಪ ಮೋಘಾ, ಸಿದ್ದಪ್ಪ ಖಸೇಟಿ, ಶಬ್ಬೀರ್ ಮಿಯಾ, ದೇವೇಂದ್ರಪ್ಪ ಪಾಟೀಲ್ ಮುಂತಾದವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್




















