ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೈ ಕೊಟ್ಟ ಮುಂಗಾರು ಮಳೆ ಕೊರಟಗೆರೆ ತಾಲ್ಲೂಕಿನ ಅನ್ನದಾತರು ಕಂಗಾಲು.

ಕೊರಟಗೆರೆ ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಬರಗಾಲದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಹಲವು ಭಾಗಗಳಲ್ಲಿ ಮಳೆಯು ವಿಳಂಬವಾಗಿದ್ದು. ಕೆರೆ ಕಟ್ಟೆಗಳು ಬತ್ತಿ ಹೋಗಿ ದನ ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಮಳೆರಾಯನ ಕೃಪೆಯು ಇಲ್ಲ ಎತ್ತಿನಹೊಳೆಯ ಆಗಮನವೂ ಆಗಿಲ್ಲ. ಅನ್ನದಾತರು ಹೊಲಗಳನ್ನು ಉಳುಮೆ ಮಾಡಿ ಬಿತ್ತನೆ ಮಾಡುವ ಸಮಯದಲ್ಲಿ ಮಳೆಯು ಮುಗಿಲು ಸೇರಿದೆ. ಮುಗಿಲು ನೋಡುತ್ತಾ ರೈತನು ಕಂಗಲಾಗಿದ್ದಾನೆ.
ಆರಂಭದಲ್ಲಿ ಬಿದ್ದ ಮಳೆಗೆ ಬಿತ್ತನೆ ಕಾರ್ಯ ಮಾಡಲು ರೈತರು ಹದಾ ಮಾಡಿದ ಭೂಮಿಯು ಒಣಗಿ ನಿಂತಿವೆ. ತೇವಾಂಶದ ಕೊರತೆಯಿಂದ ತಮ್ಮ ಕಣ್ಣೆದುರೇ ಮೊಳಕೆಗಳು ಒಣಗುತ್ತಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಬಿದ್ದ ಮಳೆಯನ್ನು ನಂಬಿಕೊಂಡು ರೈತರು ಕಡಲೆಬೀಜ, ಮುಸುಕಿನ ಜೋಳ,ರಾಗಿ ಮತ್ತು ತೊಗರಿಗಳನ್ನು ಬಿತ್ತಿದ್ದರು. ಆದರೆ ಈಗ ಮಳೆಯ ಸುಳಿವೇ ಇಲ್ಲದ ಕಾರಣ ಬೆಳೆ ಭೂಮಿ ಒಣಗಿ ನಿಂತವೇ. ಹಲವು ಹಳ್ಳಿಗಳಲ್ಲಿ ಬಿತ್ತನೆ ಮಾಡಲು ಬೀಜಗಳನ್ನು ತಂದು ಇಟ್ಟಿದ್ದಾರೆ. ಇನ್ನು ಕೆಲವರು ಭೂಮಿಗೆ ಬಿತ್ತಿರುವುದರಿಂದ ಮೊಳಕೆಯು ಹೊಡೆದಿಲ್ಲ ಇನ್ನು ಸ್ವಲ್ಪ ಕಡೆ ಅಲ್ಪಸ್ವಲ್ಪ ಗಿಡಗಳು ಬಾಡುವ ಪರಿಸ್ಥಿತಿ ಉಂಟಾಗಿದೆ. ಈ ತಿಂಗಳಿನಲ್ಲಿ ಮಳೆಯಾಗದಿದ್ದರೆ ಬರಗಾಲದ ಪರಿಸ್ಥಿತಿ ಆವರಿಸುತ್ತದೆ. ರೈತರು ಸಾವಿರಾರು ರೂಪಾಯಿ ಸಾಲ ಮಾಡಿ ಉಳುಮೆ ಬಿತ್ತನೆ ಮಾಡಲು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಬಿತ್ತನೆ ಮಟ್ಟವು 22% ಅಷ್ಟು ಮಾತ್ರವಾಗಿದೆ. ಬಿತ್ತನಿಗಾಗಿ ತಂದಿದ್ದ ಬೀಜ ಮತ್ತು ರಸಗೊಬ್ಬರಗಳು ರೈತರ ಮನೆಯಲ್ಲಿ ಉಳಿದುಕೊಂಡಿವೆ. ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ರೈತರ ಪರಿಸ್ಥಿತಿ ಮತ್ತಷ್ಟು ಅದಕ್ಕೆ ಮಳೆ ಆಶ್ರಿತ ರೈತರಿಗೆ ತುಂಬಲಾರದ ನಷ್ಟವಾಗುತ್ತದೆ. ಅವರು ಮಾತ್ರವಲ್ಲದೆ ನೀರಾವರಿ ವ್ಯವಸ್ಥೆ ಹೊಂದಿರುವ ಸಣ್ಣಮಟ್ಟದ ರೈತರಿಗೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ.
ಈ ಕಠಿಣ ಪರಿಸ್ಥಿತಿಯನ್ನು ಹರಿತ ಸರ್ಕಾರವು ಸಂಕಷ್ಟದಲ್ಲಿರುವ ಅನ್ನದಾತರಿಗೆ ಸೂಕ್ತ ಪರಿಹಾರ ಮತ್ತು ನೆರವು ನೀಡಲು “ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ” ಯೋಜನೆಯನ್ನು ತಂದಿದೆ.

“ಸಣ್ಣ ಪ್ರೀಮಿಯಂ ದೊಡ್ಡ ನಿರೀಕ್ಷೆ.”
ಬರ ಶುಷ್ಕ ಪರಿಸ್ಥಿತಿ ಆಲಿಕಲ್ಲು ಮಳೆ,ಮಳೆ ಇಲ್ಲದಂತಾಗಿ ಬೆಳೆಗಳು ನಷ್ಟವಾದರೆ ರೈತರು ಸಾಲದ ಸುಳಿಯಲ್ಲಿ ಸಿಲುಕದಂತೆ ವಿಮಾ ಕಂಪನಿಯು ಫಸಲ್ ಭೀಮಾ ಎಂಬ ಯೋಜನೆಯು ಎಲ್ಲಾ ತಾಲ್ಲೂಕುಗಳಲ್ಲೂ ರೈತರಿಗೆ ಅನುಕೂಲವಾಗಲಿದೆ. ಭೀಮಾ ಯೋಜನೆ ಅಡಿ ಬೆಳೆ ವಿಮೆ ಪರಿಹಾರ ಪಡೆಯಲು ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಲಿಂಕ್ ಮಾಡಿಸುವುದು ಅವಶ್ಯಕ ಎಂದು ಕೊರಟಗೆರೆಯ ಸಹಾಯಕ ಕೃಷಿ ನಿರ್ದೇಶಕರಾದ ಕಲ್ಲೇಶ್ ರವರು ತಿಳಿಸಿದರು. ಹೊಲದ ಆಧಾರದ ಮೇಲೆ ನಷ್ಟ ಪರಿಹಾರವನ್ನು ನಿಮಗೆ ಒಳಪಟ್ಟ ರೈತರಿಗೆ ಅವರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತವು ಜಮೆಯಾಗುತ್ತದೆ. ವಿಮೆ ಮಾಡಿಸಿಕೊಳ್ಳಲು ಗ್ರಾಮವನ್ ಸೆಂಟರ್, ಸಿಎಸ್ ಸಿ ಸೆಂಟರ್, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಸಣ್ಣ ಪ್ರೀಮಿಯಂನೊಂದಿಗೆ ದೊಡ್ಡ ಸುರಕ್ಷತೆ ಪಡೆಯಿರಿ ಎಂದು ಅನ್ನದಾತರಿಗೆ ಮಾಹಿತಿಯನ್ನು ನೀಡಿದರು.

ಕೋಳಾಲ ಹೋಬಳಿಯ ಹುಲು ವಂಗಲ ಗ್ರಾಮದ ರೈತರು.ಮಳೆ ಇಲ್ಲದೆ ಬಿತ್ತನೆ ಮಾಡಲು ಹದ ಮಾಡಿದ ಭೂಮಿಯು ಒಣಗಿ ನಿಂತಿದೆ. ರೈತರು ಸಾಲಗಳ ಸುಳಿಯಲ್ಲಿ ಸಿಲುಕಿದ್ದಾರೆ ಬಿತ್ತನೆ ಬೀಜ ರಸಗೊಬ್ಬರ ಉಳುಮೆಗಾಗಿ ಸಾಲ ಮಾಡಿ ತಂದು ಮಳೆ ಇಲ್ಲದೆ ಬೆಳೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಲಸ ಮಾಡಲು ನಗರಗಳಿಗೆ ಒಲಸೆ ಹೋಗುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ವೃದ್ದರು ವಯಸ್ಸಾದವರು ಇರುತ್ತಿದ್ದಾರೆ. ಸಿಕ್ಕಸಿಕ್ಕ ಕೆಲಸಗಳನ್ನು ಮಾಡುತ್ತಾ ಬರಗಾಲದ ಜೀವನ ಬಂಡಿಯನ್ನು ಸಾಗಿಸುತ್ತಿದ್ದಾರೆ ರೈತರು ಸೇರಿದಂತೆ ಜನಸಾಮಾನ್ಯರಿಗೂ ಈ ಸಂಕಷ್ಟ ಅವರ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು. ಮುಂಚೆ ನರೇಗಾ ಯೋಜನೆ ಅಡಿ ಕೂಲಿ ಕೆಲಸ ಕೊಡಬೇಕಾದ ರಾಜ್ಯ ಸರ್ಕಾರವು ಯೋಜನೆ ಹೆಸರು ವಿಬಿ ಜಿ ರಾಮ್ ಬಿ ಎಂದು ಬದಲಾಯಿಸಿದ್ದು ಅದರ ಸವಾಲು ಸಹ ಜನರನ್ನು ಹೆಚ್ಚು ಭಾದಿಸುತ್ತಿದೆ. ಇನ್ನು ಮುಂಗಾರು ನೆಚ್ಚಿಕೊಂಡು ಬಿತ್ತನೆಗಾಗಿ ಸಾವಿರಾರು ರೂಪಾಯಿಗಳು ಖರ್ಚು ಮಾಡಲಾಗಿದ್ದು ಇವಾಗ ಮಳೆಯೂ ಇಲ್ಲ ಬೆಳೆಯು ಇಲ್ಲ ನಷ್ಟ ಅನುಭವಿಸುತ್ತಿದ್ದೇವೆ ಎಂದು ರೈತ ಹನುಮನರಸಯ್ಯ ತಿಳಿಸಿದರು.

ವರದಿ.ಪ್ರಸನ್ನ ಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!