ಕರೆದರೂ ಕೇಳದೇ (ಸನಾದಿ ಅಪ್ಪಣ್ಣ ಚಿತ್ರದ್ದು)
ನೀ ಮೀಟಿದಾ ನೆನಪೆಲ್ಲವು (ನೀ ಬರೆದ ಕಾದಂಬರಿ ಚಿತ್ರದ್ದು)
ಬಿಸಿಲಾದರೇನು ಮಳೆಯಾದರೇನು (ಬಯಲು ದಾರಿ ಚಿತ್ರದ್ದು)
ಹೀಗೆ ಒಂದೇ ಎರಡೇ ಆರು ದಶಕಗಳ ಕಾಲ 48,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ದಕ್ಷಿಣ ಭಾರತದ ಪ್ರಖ್ಯಾತ ಗಾಯಕಿ ಎಸ್ ಜಾನಕಿ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು, ಒಡಿಯಾ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ ಸೇರಿದಂತೆ ಭಾರತದ 17 ಭಾಷೆಗಳಲ್ಲಿಯೂ ಗಾನಸುಧೆ ಹರಿಸಿದ ಗಾಯಕಿ ಎಸ್ ಜಾನಕಿ. ಚಿತ್ರಗೀತೆ ಭಕ್ತಿ ಗೀತೆ ಭಾವಗೀತೆ ಅದು ಪ್ರಣಯ ಗೀತೆಯಾದರೂ ಸರಿಯೇ ಮಕ್ಕಳ ಗೀತೆಯಾದರೂ ಸರಿಯೇ ಎಲ್ಲ ಪ್ರಕಾರದ ಹಾಡುಗಳನ್ನು ಮಾಧುರ್ಯ ತುಂಬಿ ಹಾಡಿಗೆ ಜೀವ ತುಂಬಿದ ಕೀರ್ತಿ ಎಸ್ ಜಾನಕಿ ಅವರಿಗೆ ಸಲ್ಲುತ್ತದೆ. ಬಹುತೇಕ ಕನ್ನಡದ ಎಲ್ಲಾ ಸುಪ್ರಸಿದ್ಧ ಹಾಡುಗಳು ಜಾನಕಿ ಅವರ ಮಧುರ ಕಂಠದಲ್ಲಿಯೇ ಮೂಡಿಬಂದಂತವುಗಳು ಖ್ಯಾತ ಗಾಯಕರಾದ ಪಿ ಬಿ ಶ್ರೀನಿವಾಸ್ ಎಸ್ ಪಿ ಬಾಲಸುಬ್ರಮಣ್ಯಂ ಯೇಸುದಾಸ ಡಾಕ್ಟರ್ ರಾಜಕುಮಾರ್ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಖ್ಯಾತ ಗಾಯಕರೊಂದಿಗೆ ಹಾಡಿದ ಏಕೈಕ ಹಾಡುಗಾರ್ತಿ ಎಸ್ ಜಾನಕಿ. ಅಷ್ಟೇ ಅಲ್ಲದೆ ಸಿಮ್ಮಳ ಚಪಾಣಿ ಲ್ಯಾಟಿನ್ ಅರೇಬಿಕ್ ಒಳಗೊಂಡಂತೆ ಆಂಗ್ಲ ಭಾಷೆಯ ಹಾಡುಗಳನ್ನು ಕೂಡ ಹಾಡಿದ್ದಾರೆ. ಕನ್ನಡದ ಕೃಷ್ಣ ಗಾರುಡಿ ಎಂಬ ಮೊದಲ ಚಿತ್ರಕ್ಕೆ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನಗುವ ನಯನ (ಪಲ್ಲವಿ ಅನುಪಲ್ಲವಿ ಚಿತ್ರ)
ಸ್ವಾತಿ ಮುತ್ತಿನ ಮಳೆ ಹನಿಯೆ (ಬಣ್ಣದ ಗೆಜ್ಜೆ ಚಿತ್ರ)
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ (ನಾ ನಿನ್ನ ಮರೆಯಲಾರೆ ಚಿತ್ರ)
ಚಿನ್ನದ ಮಲ್ಲಿಗೆ ಹೂವೆ (ಹುಲಿಯ ಹಾಲಿನ ಮೇವು ಚಿತ್ರ)
ಒಮ್ಮೆ ನಿನ್ನನ್ನು ಕಣ್ತುಂಬ (ಗಾಳಿ ಮಾತು ಚಿತ್ರ)
ಅಲಾರೆ ಅಲಾರೆ (ಕೃಷ್ಣ ನೀ ಬೇಗನೆ ಬಾರೋ ಚಿತ್ರ)
ಜೊತೆಯಲಿ ಜೊತೆ ಜೊತೆಯಲಿ (ಗೀತಾ ಚಿತ್ರ)
ಈ ರೀತಿಯಾಗಿ ಜಾನಕಮ್ಮನವರು ಹಾಡಿದ ಹಾಡುಗಳ ಪಟ್ಟಿ ಇಂತಿದೆ
ಕಂಗಳು ತುಂಬಿರಲು, ಕರೆ ಕೋಗಿಲೆ ಮಾದವನ, ಸುಖದ ಸ್ವಪ್ನ ಗಾನ, ನಾ ಮೆಚ್ಚಿದ ಹುಡುಗನಿಗೆ, ಗಗನವು ಎಲ್ಲೋ ಭೂಮಿಯು ಎಲ್ಲೋ ,ಬಂದ ಮೇಘರಾಜ, ಹೂ ಒಂದು ಬೇಕು ಬಳ್ಳಿಗೆ, ಒಲವಿನ ಗೆಳೆಯನೇ ನಿನಗೆ, ಅರಳಿದ ಮುದುಡಿದ ತಾವರೆ ಅರಳಿದೆ, ಕೇಳಿದ್ದು ಸುಳ್ಳಾಗಬಹುದು, ಯಾವ ಜಾತಿಯಮ್ಮ ಕೇಳುತ್ತಿದೆ, ತಾಯಿಯ ತಂದೆಯ ಮಮತೆ, ಬಾನಲ್ಲು ನೀನೆ, ಹೊಸ ಬಾಳು ನಿನ್ನಿಂದ, ನನ್ನ ಆಸೆ ಹಣ್ಣಾಗಿ, ದೋಣಿಸಾಗಲಿ ಮುಂದೆ ಹೋಗಲಿ, ಒಲಿದ ಜೀವ ಜೊತೆಯಲ್ಲಿ ಇರಲು, ಸುವಿ ಸುವ್ವಿ ಸುವ್ವಾಲಿ, ಜೀವ ವೀಣೆ, ಯುಗ ಯುಗಾದಿ ಕಳೆದರು ,ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು, ಮೂಡಲ ಮನೆಯ ಮುತ್ತಿನ ನೀರಿನ, ಭಾರತ ಭೂಷಿರ, ಹೋಗದಿರಲು ರಂಗ ಪಂಚಮ ವೇದ, ಪೂಜಿಸಲೆಂದು ಹೂಗಳ ತಂದೆ, ಇಂದು ನನಗೆ ಗೋವಿಂದ, ದೇವರ ಆಟ ಬಲ್ಲವರಾರು, ಹೂ ಒಂದು ಬೇಕು ಬಳ್ಳಿಗೆ, ರಾಘವೇಂದ್ರ ನೀ ಮೌನವಾದರೆ ನನ್ನ ಗತಿ ಏನು, ಬರೆದೆ ನೀನು ನಿನ್ನ ಹೆಸರ, ನನ್ನ ತೆರೆದಿದೆ ಮನೆ ಓ ಬಾ ಅತಿಥಿ
ಭಕ್ತಿ ಗೀತೆಗಳು
ಗಜಮುಖನೆ ಗಣಪತಿಯೆ,
ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ,
ಇವಳೇ ವೀಣಾ ಪಾಣಿ
ಹೀಗೆ 48000 ಗೀತೆಗಳನ್ನು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಒಂದಕ್ಕೊಂದು ಪ್ರಸಿದ್ಧ ಗೀತೆಗಳನ್ನು ಹಾಡಿದ ಎಸ್ ಜಾನಕಿ ಅವರು ಹುಟ್ಟಿದ್ದು ಆಂಧ್ರಪ್ರದೇಶದ ಗುಂಟೂರ್ ಜಿಲ್ಲೆಯ ರೇಪಲ್ಲಿ ಎಂಬಲ್ಲಿ 1938ರ ಏಪ್ರಿಲ್ 23 ರಂದು. ತಮ್ಮ ಮೂರನೆಯ ವಯಸ್ಸಿನಲ್ಲಿಯೇ ಸಂಗೀತದಲ್ಲಿ ಅಪಾರ ಆಸಕ್ತಿಯನ್ನು ಹೊಂದಿ ಪಂಡಿತ ಪೈಡಿಸ್ವಾಮಿಯವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಪ್ರಾರಂಭಿಸಿದರು ಬಾಲ್ಯದಲ್ಲಿಯೇ ಹಾಡುಗಳನ್ನು ಹಾಡುವ ಹವ್ಯಾಸವನ್ನು ಬೆಳೆಸಿಕೊಂಡು 1956 ರಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ ಕೀರ್ತಿ ಜಾನಕಿ ಅವರಿಗೆ ಸಲ್ಲುತ್ತದೆ.
ಕೇವಲ 19ನೇ ವಯಸ್ಸಿನಲ್ಲಿಯೇ 1957ರಲ್ಲಿ ತೆರೆಕಂಡ ತಮಿಳಿನ ವಿದಿಯಿನ್ ವಿಳಯಾಟ್ಟು ಚಿತ್ರದ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. 1958 ರಲ್ಲಿ ತಮಿಳುನಾ ಡು ಸಿಂಗಾರ ವೇಲನೆ ದೇವ ಎಂಬ ಮಹಾನ್ ನಾದಸ್ವರ ವಿದ್ವಾಂ ಅರುಣಾಚಲಂ ಅವರ ನಾದಸ್ವರದೊಂದಿಗೆ ಬೆಳಸಿ ಹಾಡಿದ ಗೀತೆ ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ಭಾರತ ದೇಶಕ್ಕೆ ಗುರುತಿಸುವಂತೆ ಮಾಡಿತು. ಕನ್ನಡದ ಚಿತ್ರ ಹೇಮಾವತಿಯಲ್ಲಿ ಅವರು ಹಾಡಿರುವ ಶಿವ ಎನ್ನದ ನಾಲಿಗೆ ಏಕೆ ಎಂಬ ಅನನ್ಯ ಗೀತೆಗಳು ಅತ್ಯಂತ ತೊಂದರೆದಾಯಕ ಗೀತೆ ಅನಿಸಿದೆ ಜಾನಕಿಯವರು ಈ ಹಾಡು ನನ್ನ ಸಂಗೀತ ಜೀವನದಲ್ಲಿ ಭಯಪಟ್ಟು ಹಾಡಿದ ಹಾಡು ಮತ್ತೆ ಹಾಡಲು ಆಗದ ಹಾಡು ಎಂದು ಹೇಳುತ್ತಿದ್ದರು ಒಂದು ಸಂದರ್ಶನದಲ್ಲಿ ಜಾನಕಿ ಅವರೊಂದಿಗೆ ಬಹು ವರ್ಷಗಳವರೆಗೆ ಹಾಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಮ್ಮ ಜಾನಕಮ್ಮ ಇದ್ದರಲ್ಲ ಅವರು ಯಾವುದೇ ಗೀತೆಯನ್ನಾಗಿ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾಣಲೆಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ ಇದೆಯಲ್ಲ ಅದು ಒಂದು ಅಸಮಾನ್ಯವಾದ ಸಂಗತಿ ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು ಬಿಮುಗಳ ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡ ಅವರು ಎಲ್ಲಿಯೂ ಉಂಟು ಮಾಡುವುದಿಲ್ಲ ಎಂಬ ಪ್ರತಿತಿಯಿದೆ ಎಂದು ಹೇಳಿದಾಗ ಜಾನಕಮ್ಮನವರು ನಾನು ಯಾವುದೇ ವಿಶೇಷ ತಯಾರಿಯನ್ನಾಗಲಿ ಹಾರೈಕೆಯನ್ನಾಗಿ ಮಾಡಿಕೊಳ್ಳುವುದಿಲ್ಲ ಅವರು ಹೇಳುವ ಮತ್ತೊಂದು ಮಾತು ಅವರ ಎಲ್ಲಾ ಸಾಧನೆಗಳ ಗುಟ್ಟು ಪರಮಾತ್ಮ ಶ್ರೀ ಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಭಕ್ತರಾದ ಆಕೆ ನಾನು ಹೇಗೆ ಆಡುತ್ತೇನೆ ಗೊತ್ತೇ ಸತ್ಯ ಹೇಳಬೇಕೆಂದರೆ ನಾನು ಹಾಡುವುದೇ ಇಲ್ಲ ಶ್ರೀ ಕೃಷ್ಣ ಆ ನನ್ನ ಅಂತರಂಗದ ದೈವನಾದ ಆತನ ಕಾಯಕವದು ಎಂದು ಸರಳತೆ ಮೆರೆಯುತ್ತಾರೆ ಜಾನಕಮ್ಮ.
ಇಂತಹ ಜಾನಕಿ ಅವರ ಪೂರ್ಣ ಹೆಸರು ಶಿಸ್ಟಲಾ ಶ್ರೀರಾಮ ಮೂರ್ತಿ ಜಾನಕಿ.
ಹುಟ್ಟಿದ್ದು ಆಂಧ್ರಪ್ರದೇಶವಾದರೂ ಬಹುತೇಕ ಅವರ ಜೀವನದ ಸಮಯವನ್ನು ಕರ್ನಾಟಕದಲ್ಲಿಯೇ ಕಳೆದರು ಅದು ಸಾಂಸ್ಕೃತಿಕ ನಗರ ಮೈಸೂರಿನಲ್ಲಿಯೇ ಅವರು ಇರಲು ಇಷ್ಟಪಡುತ್ತಿದ್ದರು ಎಂಬುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರ. ಏಕೆಂದರೆ ಅವರು ಹಾಡಿರುವ ಬಹುತೇಕ ಹಾಡುಗಳು ಅದರಲ್ಲೂ ಎಲ್ಲಾ ಭಾಷೆಗಳಿಗಿಂತಲೂ ಹೆಚ್ಚು ಕನ್ನಡ ಭಾಷೆಯಲ್ಲಿಯೇ ಹಾಡಿದ್ದಾರೆ. ಅವರು ಶ್ರೀರಾಮು ಮೂರ್ತಿಯವರನ್ನು ಮದುವೆಯಾಗಿದ್ದರು. ಆದರೆ ಮಗ ಮುರುಳಿ ಕೃಷ್ಣ ಹೈದರಾಬಾದಿನಲ್ಲಿದ್ದರು. ಮಗನೊಂದಿಗೆ ಕೆಲವು ವರ್ಷಗಳ ಕಾಲ ಜಾನಕಿಯವರು ಹೈದರಾಬಾದಿನಲ್ಲಿ ಇದ್ದರು ದುರಾದೃಷ್ಟವಶಾತ ಅನಾರೋಗ್ಯದ ಹಿನ್ನೆಲೆಯಲ್ಲಿ ಮಗ ಮುರಳಿ ಕೃಷ್ಣರವರು ನಿಧನರಾದರು ಕೂಡ ಅವರು ಮೈಸೂರಿನಲ್ಲಿಯೇ ಇರುತ್ತಿದ್ದರು ಮೊಮ್ಮಗಳು ಅಪ್ಸರ ಕೂಡ ತನ್ನ ಅಜ್ಜಿಯೊಂದಿಗೆ ಇರುತ್ತಿದ್ದಳು. ಸುಧೀರ್ಘ ಸಂಗೀತ ಪಯಣದಲ್ಲಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು 33 ರಾಜ್ಯ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ. 2013ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದಾಗ ವಿನಯದಿಂದಲೇ ಅದನ್ನು ತಿರಸ್ಕರಿಸಿದರು ಜಾನಕಮ್ಮ.
ಜಾನಕಮ್ಮನ ವ್ಯಕ್ತಿತ್ವ
ಆರು ದಶಕಗಳ ಕಾಲ ದಕ್ಷಿಣ ಭಾರತದ ಕೋಗಿಲೆಯಾಗಿ ಒಂದಕ್ಕೊಂದು ಸುಪ್ರಸಿದ್ಧವಾದ ಹಾಡುಗಳನ್ನು ಎಲ್ಲಾ ಭಾಷೆಗಳಲ್ಲಿ ಹಾಡಿದರು ಕೂಡ ಕಿಂಚಿತ್ತು ಅಮ್ಮು ಬಿಮು ಇಲ್ಲದ ಸರಳ ಜೀವಿ ಜಾನಕಮ್ಮ ಸದಾ ಹಸನ್ಮುಖಿ ಎಲ್ಲರನ್ನೂ ಬಾ ಕಂದ, ಬಾ ಅಮ್ಮ ಎಂದು ಕರೆದು ಸಹೃದಯಿ ಮಾತೃ ಹೃದಯ ಜಾನಕಮ್ಮ ಎಲ್ಲರೊಂದಿಗೂ ನಗುತ್ತಲೇ ಮಾತನಾಡುವ ಜಾನಕಮ್ಮ ವೈಯಕ್ತಿಕ ಬದುಕಿನಲ್ಲಿ ಪತಿಯನ್ನು ಕಳೆದುಕೊಂಡರು ತಮ್ಮ ಮುಂದೆಯೇ ಮಗನನ್ನು ಕಳೆದುಕೊಂಡರು ಕೂಡ ಅದನ್ನು ನಗುತ್ತಲೇ ನಯ ವಿನಯದಿಂದಲೇ ಹೇಳಿಕೊಂಡಂತಹ ಅಪರೂಪದ ವ್ಯಕ್ತಿತ್ವ ಜಾನಕಮ್ಮನವರದು ಕಾಲಿಗೆ ಪೆಟ್ಟು ಬಿದ್ದಾಗ ಅದನ್ನು ಕೂಡ ನಗುತ್ತಲೇ ಹೇಳಿದ ಜಾನಕಮ್ಮ ತನ್ನ ಎಲ್ಲಾ ನೋವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಮಾಜದ ಎಲ್ಲ ಜನರಿಗೂ ನಗುವನ್ನೇ ತೋರಿದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಜಾನಕಮ್ಮನವರದು.
ಇಂತಹ ಸಂಗೀತ ಸಾಮ್ರಾಜ್ಞಿ ದಕ್ಷಿಣ ಭಾರತದ ಕೋಗಿಲೆ 2026 ಜುಲೈ 11ರಂದು ತಮ್ಮ 88ನೆಯ ವಯಸ್ಸಿನಲ್ಲಿ ತಮ್ಮ ಧ್ವನಿಯನ್ನು ಇಲ್ಲಿಯೇ ಬಿಟ್ಟು ದೇಹದೊಂದಿಗೆ ಮಾತ್ರ ಇಹಲೋಕ ತ್ಯಜಿಸಿದ್ದಾರೆ ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ ಕನ್ನಡ ಚಿತ್ರರಂಗದ ಸಂಗೀತದ ಸುವರ್ಣ ಯುಗ ಅಂತ್ಯವಾಗಿದೆ ಅಮ್ಮ ಮತ್ತೆ ಹೋಗಿ ಕರ್ನಾಟಕದಲ್ಲಿಯೇ ಹುಟ್ಟಿ ಬನ್ನಿ ನೀವು ಬರುವರೆಗೂ ನಿಮ್ಮ ಕಂಠಸಿರಿಯನ್ನು ನಾವು ಕೇಳುತ್ತಲೇ ಇರುತ್ತೇವೆ.
- ಅಂದಾನಯ್ಯ ವಸ್ತ್ರದ ಬಾಗಲಕೋಟೆ




















