ಬೆಂಗಳೂರು: “ತಂದೆ, ತಾಯಿ, ಅತಿಥಿ ನಂತರದ ನಾಲ್ಕನೆಯ ಆಧಾರ ಸ್ಥಂಭವೇ ವೈದ್ಯರು. ವೈದ್ಯರಿಲ್ಲದ ಸಮಾಜವನ್ನು ಕಾಣುವುದು ದುರ್ಲಭ”
ಹೀಗೆಂದು ಹೇಳಿದವರು 92 ವರ್ಷದ ಜ್ಞಾನವೃದ್ದರೂ, ಬಿ ಹೆಚ್ ಎಸ್ ಶಾಲೆಯ ನಿವೃತ್ತ ಶಿಕ್ಷಕರೂ ಆದ ಬಿ ಎಸ್ ರಾಮನಾಥ್ ಅವರು.
ಬಿ ಹೆಚ್ ಎಸ್ ಹೈಕ್ಳು ಟ್ರಸ್ಟ್ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬಿ ಹೆಚ್ ಎಸ್ ಶಾಲೆಯಲ್ಲಿ ಓದಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ರಾ ಸು ವೆಂಕಟೇಶ, ಕಾರ್ಯದರ್ಶಿ ಜೆ ಹೆಚ್ ರುದ್ರೇಶ, ಖಜಾಂಚಿ ಎಂ. ಎನ್. ಶ್ರೀವತ್ಸ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















