ಹರಿದ್ರ ಸೇವಂತಿಗಳೆರಡು ನಗುತಿವೆ ನಡುವಿನಲ್ಲಿ
ಅದರೆಲೆ ಕಡ್ಡಿಗಳು ಮನಸೆಳೆದಿವೆ ಜೊತೆಯಲ್ಲಿ
ಶ್ವೇತ ತುಂಬೆ ಪುಷ್ಪಗಳು ಗರಿಗೆದರಿಹುದಿಲ್ಲಿ
ಕೆಂಗುಲಾಬಿ ದಳಗಳ ಜೋಡಣೆ ಸುತ್ತಲಿನಲ್ಲಿ
ಮೆರುಗು ನೀಡುತಿದೆ ಇಂದಿನ ಚಿತ್ತಾರದಲ್ಲಿ
ಮುದುಡಿದ ಚಿತ್ತ ಅರಳಿಸುತಿದೆ ನೋಡುಗರಲ್ಲಿ
ಶುಭ ಅಭಯವ ಸಾರುತಿದೆ ಲಘು ಕಾವ್ಯದಲ್ಲಿ
ಹರುಷವ ಚಿಮ್ಮಿಸುತಿದೆ ಕಲಾಭಿಮಾನಿಗಳಲ್ಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















