ತುಮಕೂರು ಜಿಲ್ಲೆಯ
ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೆೇೂಟೆ ಹೋಬಳಿಯ ಬೆಸ್ಕಾಂ ಅಧಿಕಾರಿಗಳ
ಬೇಜವಾಬ್ದಾರಿತನದಿಂದ ಬಡವರು ಮನೆ ಕಟ್ಟಿಕೊಳ್ಳುವ ಕನಸು ಕನಸಾಗಿಯೇ ಉಳಿದಿದೆ.
ಮೇಗಾಲಪಾಳ್ಯ ಗ್ರಾಮದ ದಲಿತ ಕುಟುಂಬದ ಕದೀರಮ್ಮರವರು ಮನೆ ಕಟ್ಟಿಕೊಳ್ಳಲು 5 ವರ್ಷಗಳ ಹಿಂದೆ ಅಡಿಪಾಯ ಹಾಕಿ ಸರ್ಕಾರದಿಂದ ಬರುವ ಹಣದಲ್ಲಿ ಮನೆ ಕಟ್ಟಲು ಕಷ್ಟವಾಗುತ್ತದೆ ಎಂದು ಕದೀರಮ್ಮ ತನ್ನ ಇಬ್ಬರು ಗಂಡು ಮಕ್ಕಳನ್ನು ಮತ್ತು ಒಬ್ಬ ಹೆಣ್ಣು ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಹೋದ ಸಮಯದಲ್ಲಿ ಇದೇ ಗ್ರಾಮಕ್ಕೆ ಸೇರಿದ ಸವರ್ಣೀಯರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ದಲಿತರ ಮನೆಯ ಮೇಲೆಯೇ ಲೈನ್ ಎಳೆದು ಸವರ್ಣೀಯರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ವೈ ಎನ್ ಹೊಸಕೋಟೆಯ ಬೆಸ್ಕಾಂ ಅಧಿಕಾರಿಗಳು ರಾಜಕೀಯ ನಾಯಕರ ಕೈ ಗೊಂಬೆಯಂತೆ ವರ್ತಿಸಿದ್ದಾರೆ. ಈ ಕುರಿತು ಎಷ್ಟೋ ಬಾರಿ ಮನೆಯ ಮೇಲೆ ಹಾದು ಹೋದ ಲೈನ್ ತೆರವುಗೊಳಿಸಲು ಮನವಿ ಮಾಡಿದರೂ ಸಹ ಅಧಿಕಾರಿಗಳು ಉಡಾಫೆ ಉತ್ತರ ನೀಡಿ ಕಳುಹಿಸುತ್ತಿದ್ದಾರೆ ಎಂದು ನೊಂದ ದಲಿತ ಮಹಿಳೆ ತಮ್ಮ ಅಳಲನ್ನು BPS ಸಂಘದ ಜಿಲ್ಲಾ ಅಧ್ಯಕ್ಷರಾದ ಕೆಂಚರಾಯ ಅವರಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು.
BPS ಸಂಘದ ತುಮಕೂರು ಜಿಲ್ಲೆಯ ಅಧ್ಯಕ್ಷರಾದ ಕೆಂಚರಾಯ ರವರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ನಾಮಕಾವಸ್ಥೆಗೆ ಬೆಸ್ಕಾಂ ನ ಲೈನ್ ಮ್ಯಾನ್ ಗಳನ್ನು ಕಳುಹಿಸಿ ಸಮಸ್ಯೆಗೆ ತೇಪೆ ಹಚ್ಚುವ ಕೆಲಸ ಮಾಡುತ್ತಾ ಬೆಸ್ಕಾಂ ನ ಜೆ. ಇ. ರಾಜಕೀಯ ನಾಯಕರ ಕೈ ಗೊಂಬೆಯಂತೆ ವರ್ತಿಸುತ್ತಾ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದು ನೊಂದ ಮಹಿಳೆ ಹಾಗೂ ಸ್ಥಳೀಯರ ಆಕ್ರೋಶ.




















