ಹುಬ್ಬಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಬೆಳೆ ಸಾಲ ಮಂತ್ರಿ ಫಸಲ ಬಿಮಾ ಯೋಜನೆಯಡಿ ಪಡೆಯದ ರೈತರು ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ, ಸಾಲ ಪಡೆದಿರದ ಕುರಿತು ಕಡ್ಡಾಯವಾಗಿ ಸ್ವಯಂ ಘೋಷಣೆ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಬದಲಾಯಿಸಿ ಮೊದಲಿನ ಹಳೇ ಪದ್ಧತಿಯಂತೆ ಬೆಳೆವಿಮೆ ಜಾರಿ ಮಾಡಲು ರೈತರ ಪರವಾಗಿ ನವಲಗುಂದ ಶಾಸಕ ಎನ್. ಹೆಚ್. ಕೋನರಡ್ಡಿ ಒತ್ತಾಯಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆಯಡಿ ಬೆಳೆವಿಮೆ ತುಂಬಬೇಕಾದರೆ ಸಾಲ ಪಡೆದ ರೈತರು ಬ್ಯಾಂಕ್ಗಳಲ್ಲಿ ಔಠಿಣ-ಔಣಣ ಅರ್ಜಿಗಳನ್ನು ಸಲ್ಲಿಸಿ, ನಂತರ ಅದೇ ಬೆಳೆ/ಜಮೀನಿಗೆ ಅಡಿಯಲ್ಲಿ ಸಾಲ ಪಡೆಯದ ರೈತರಿಗಾಗಿ
ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಣಿ ಕೇಂದ್ರ ಮಾಡಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಈ ಕುರಿತಂತೆ ಕೇಂದ್ರ ಸರ್ಕಾರವು ನಿರ್ದೆಶನ ನೀಡಿ, ಮುಂಬರುವ ಎಲ್ಲಾ ಹಂಗಾಮುಗಳಿಗೆ ನೋಂದಣಿ ಯೋಜನೆಯಡಿ ಮಾಡಿಕೊಳ್ಳುವ ಎಲ್ಲಾ ಸಾಲ ಪಡೆಯದ ರೈತರು ಕಡ್ಡಾಯವಾಗಿ ಸ್ವಯಂ ಘೋಷಣೆಯನ್ನು ಸಲ್ಲಿಸಲು ಆದೇಶಿಸಿದೆ ಎಂದು ತಿಳಿಸಿದರು. ಆ ಪ್ರಯುಕ್ತ ಕಡ್ಡಾಯ ಘೋಷಣೆಯನ್ನು ಕೈಬಿಡಬೇಕೆಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿನಾಂಕ ಜು.9 ರಂದು ಬೆಳಗಾವಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ಬೆಳೆವಿಮೆ ಜಾರಿಗೆ ಜುಲೈ-15 ಕೊನೆಯ ದಿನಾಂಕವಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಕ್ಷಣ ನಿರ್ದೇಶನ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಕೋನರಡ್ಡಿ ತಿಳಿಸಿದರು.




















