ಬಾಗಲಕೋಟೆ-ಮುಧೋಳ : ಪುರಂದರ ದಾಸರ.ಕನಕದಾಸರ . ಹಾಗೂ ತತ್ವಪದಗಳನ್ನು ಭಾವಪೂರ್ಣವಾಗಿ ಭಕ್ತಿ ಶ್ರದ್ಧೆಯಿಂದ ಹಾಡಿ ಕೇಳುಗರನ್ನು ಹಾಡಿ ರಂಜಿಸುತ್ತಿದ್ದ ಮುಧೋಳ ತಾಲೂಕಿನ ಸೋರಗಾಂವ ಹಿರಿಯ ಜನಪದ ಶಿವಭಜನಾ ಕಲಾವಿದ ಶರಣಪ್ಪ ಹುದ್ದಾರ ಅವರು ತಮ್ಮ 75 ರ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕಳೆದ 50 ವಷ೯ಗಳಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಮಾಶಾಸನ ನೀಡಿ ಗೌರವಿಸಿತ್ತು.
ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಗಾನಯೋಗಿ ಶ್ರೀಗುರು ಪಂಚಾಕ್ಷರಿ ತಾಲೂಕು ಕಲಾವಿದರ ಸಂಘ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದವು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕನಾ೯ಟಕ ರಾಜ್ಯ ಸರ್ವ ಕಲಾವಿದರ ಸಂಘದ {ಒಕ್ಕೂಟ} ಅಧ್ಯಕ್ಷ ಶರಣಬಸವಶಾಸ್ತ್ರಿಗಳು, ಕಲಾವಿದರಾದ ಮುತ್ತಪ್ಪ ಬನಾಜಗೋಳ, ಮಹಾಂತಯ್ಯ ಹಿರೇಮಠ, ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ, ರುದ್ರಪ್ಪ ಅಡವಿ, ಯಲ್ಲಪ್ಪ ಬನಾಜಗೋಳ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು.
ಅಂತ್ಯಕ್ರಿಯೆಯಲ್ಲಿ ಗಣ್ಯರು.ಹಿರಿಯರು ಸೇರಿದಂತೆ ಅಪಾರ ಜನಸ್ತೋಮ ನೆರೆದಿತ್ತು.
- ಕರುನಾಡ ಕಂದ ಸುದ್ದಿ




















