ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡಿಗರು ಜಾಗೃತರಾಗದಿದ್ದರೆಕನ್ನಡ ನಾಡು ನುಡಿಗೆ ಅಪಾಯ -ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ

ಕನ್ನಡ ನಾಡು,ನುಡಿ ,ನೆಲ,ಜಲಗಳ ಬಗ್ಗೆ ಕನ್ನಡಿಗರು ಜಾಗೃತರಾಗದಿದ್ದಾರೆ ಭವಿಷ್ಯದಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಅಪಾಯ ಉಂಟಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ
ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ‌.ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.

ಅವರು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ನವಕರ್ನಾಟಕ ರಾಜ್ಯಸರ್ಕಾರಿ ನೌಕರರ ಕಲೆ,ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಹಾಗೂ ಧಾರವಾಡದ ಚೇತನ ಫೌಂಡೇಶನ್ ಸಂಸ್ಥೆಗಳು ಸಂಘಟಿಸಿದ್ದ ಕನ್ನಡ ನುಡಿ ಸಮ್ಮೇಳನದ ಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕನ್ನಡ ಭಾಷೆ ಸಾವಿರಾರು ವರ್ಷಗಳ ಬಯ ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯಕ್ಕೆಎಂಟು ಜ್ಞಾನಪೀಠ ಪ್ರಶಸ್ತಿ, ಮೂರು ರಾಷ್ಟ್ರಕವಿ ಗೌರವಗಳು ದೊರಕಿವೆ. ಆದರೆ ಕನ್ನಡಿಗರಲ್ಲಿ ಹೆಚ್ಚಾಗುತ್ತಿರುವ ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ನಾಡು ನುಡಿ ಸೊರಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಪ್ರತಿ ದಿನವೂ ಕಡಿಮೆಯಾಗುತ್ತಿದೆ. ಬಹು ರಾಷ್ಟ್ರೀಯ ಸಂಸ್ಥೆಗಳ ಫಲವಾಗಿ ಬೆಂಗಳೂರಿನಲ್ಲಿ ಹೊರರಾಜ್ಯದವರ ಸಂಖ್ಯೆ ಹೆಚ್ಚಾಗುತ್ತಿದೆ.ಕರ್ನಾಟಕದ ರಾಜಧಾನಿ ಬೆಂಗಳೂರು ಕನ್ನಡ ಮಯ ಆಗುವುದರ ಬದಲು ಇಲ್ಲಿ ಕನ್ನಡ ಭಾಷೆಯೇ ಮಾಯ ಆಗುತ್ತಿದೆ. ಇದು ಅತ್ಯಂತ ಆತಂಕದ ಬೆಳವಣಿಗೆ ಎಂದವರು ನುಡಿದರು.

ರಾಜ್ಯದ ಪ್ರಮುಖ ನಗರಗಳಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡದ ಬಗ್ಗೆನಿರ್ಲಕ್ಷ್ಯತೋರಿಸುತ್ತಿವೆ. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಗ್ಗೆ ತಾತ್ಸಾರ ತೋರಿಸಲಾಗುತ್ತಿದೆ. ದೊಡ್ಡ ದೊಡ್ಡ ಮಾರುಕಟ್ಟೆಗಳಲ್ಲಿ ಅವರು ಮಾರಾಟ ಮಾಡುವ ವಸ್ತುಗಳ ಹೆಸರೂ ಆಂಗ್ಲ ಭಾಷೆಯಲ್ಲಿ ಇರುತ್ತದೆ. ಈ ಕನ್ನಡಿಗರು ದ್ವನಿ ಎತ್ತಬೇಕಿದೆ.ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಹುತೇಕ ಸಿಬ್ಬಂದಿಗಳು ಹೊರ ರಾಜ್ಯದವರು. ಅವರಿಗೆ ಕನ್ನಡ ಬರುವುದಿಲ್ಲ. ಇದರಿಂದಾಗಿ ಗ್ರಾಮೀಣ ಮಹಿಳೆಯರು,ರೈತರು ಬ್ಯಾಂಕ್ಗಳಲ್ಲಿ ವ್ಯವಹಾರ ಮಾಡುವುದು ಬಹಳ ಕಷ್ಟಕರವಾಗಿದೆ. ಇದರಿಂದಾಗಿ ಕನ್ನಡ ಭಾಷೆಗೆ ಅಪಮಾನ ಉಂಟಾಗುತ್ತಿದೆ. ಈ ಬಗ್ಗೆ ಕನ್ನಡಿಗರು ಧ್ವನಿ ಎತ್ತಬೇಕಾಗಿದೆಎಂದು ಭೇರ್ಯರಾಮಕುಮಾರ್ ಕರೆ ನೀಡಿದರು.

ರಾಜ್ಯದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ಮರಾಠ ಭಾಷೆಯ ಪ್ರಾಬಲ್ಯ ಕೋಲಾರ, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು, ವಿಜಯನಗರ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ತೆಲುಗಿನ ಪ್ರಭಾವ ತೀವ್ರವಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ತಮಿಳು ಹಾಗೂ ಮಲಯಾಳಂ ಪ್ರಭಾವ,ಕೊಡಗು ಜಿಲ್ಲೆಯಲ್ಲಿ ಮಲಯಾಳಂ ಭಾಷೆಯ ಪ್ರಾಬಲ್ಯ ತೀವ್ರ ಗೊಳ್ಳುತ್ತಿದೆ.ಈ 0ರದೇಶಗಲ್ಲಿ ಕನ್ನಡ ಅಸ್ಮಿತೆ ಉಳಿಸಲು ಕರ್ನಾಟಕ ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು.ಇಲ್ಲದಿದ್ದರೆ ಗಡಿ ಪ್ರದೇಶಗಳಲ್ಲಿ ಕನ್ನಡ ಅಸ್ತಿತ್ವಕ್ಕೆ ಅಪಾಯ ಉಂಟಾಗಲಿದೆ ಎಂದವರು ಆತಂಕ ವ್ಯಕ್ತ ಪಡಿಸಿದರು.

ಆಂಗ್ಲ ಭಾಷಾ ವ್ಯಾಮೋಹ ಇದೀಗ ಗ್ರಾಮಾಂತರ ಪ್ರದೇಶಗಳನ್ನು ತಲುಪಿದ್ದು ಜನರು ತಮ್ಮ ಮಕ್ಕಳಿಗೆ ಆಂಗ್ಲ ಮಾದ್ಯಮ ಶಾಲೆಗಳಿವೆ ಸೇರಿಸುವ ಹಪಾಹಪಿಗೆ ಸಿಲುಕಿದ್ದಾರೆ. ಇದರಿಂದ ಸರ್ಕಾರವು ಕನ್ನಡ ಮಾದ್ಯಮ ಶಾಲೆಗಳಿವೆ ಎಲ್ಲ ಸೌಲಭ್ಯಗಳನ್ನು ಒದಗಿಸಿದರೂ ಮಕ್ಕಳಿಲ್ಲದೆ ಮುಚ್ಚುವ ಆತಂಕದ ಪರಿಸ್ಥಿತಿ ಉಂಟಾಗಿದೆ. ರಾಜ್ಯಸರ್ಕಾರ ಈ ಸಮಸ್ಯೆ ಬಗ್ಗೆ ಗಮನ ಹರಿಸದಿದ್ದರೆ ಭವಿಷ್ಯದಲ್ಲಿ ಕನ್ನಡ ಭಾಷೆ ಅಪಾಯಕ್ಕೆ ಸಿಲುಕಲಿದೆ ಎಂದು ನುಡಿದ ರಾಮಕುಮಾರ್ ಅವರು ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಯುವ ಜನತೆಗೆ ರಾಜ್ಯ ಸರಕಾರ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಗ್ರಾಮೀಣ ಪ್ರದೇಶಗಳಲ್ಲೂ ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಇದಕ್ಕೆ ಮೊದಲು ಕನ್ನಡ ನುಡಿ ಸಮ್ಮೇಳನಾಧ್ಯಕ್ಷ ಭೇರ್ಯ ರಾಮಕುಮಾರ್ ಅವರನ್ನು ಮೆರವಣಿಗೆಯಲ್ಲಿ ಸಮ್ಮೇಳನದ ಸಭಾಂಗಣಕ್ಕೆ ಕರೆದೊಯ್ಯಲಾಯಿತು.

ನೆಲಮಂಗಲ ಯೋಜನ ಪ್ರಾಧಿಕಾರದ ಅಧ್ಯಕ್ಷರಾದ ಎಂ. ಕೆ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಸುರೇಂದ್ರ ಧಾರವಾಡದ ಚೇತನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ..ಚಂದ್ರಶೇಖರ ಮಾಡಲಗೇರಿ ,ನವಕರ್ನಾಟಕ ರಾಜ್ಯ ಸರಕಾರಿ ನೌಕರರ ಕಲೆ,ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಆರ್.ಮಲ್ಲಿಕಾರ್ಜುನಯ್ಯ, ಚಾಮರಾಜನಗರದ ಪತ್ರಕರ್ತ ಡಾ.ರಾಜೇಶ್ ನಾಯಕ್ ,ಸಾಹಿತಿಗಳಾದ ಸುಮಾ ಬೆಳಗೆರೆ, ಮನ್ನೇ ಮೋಹನ್, ಲತಾ ಎಂ.ಬಿರಾದರ್ ಸಮ್ಮೇಳನದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಸುಮಾ ಬೆಳಗೆರೆ,ಮನ್ನೆ ಮೋಹನ್,ಸುರೇಂದ್ರ ಜಿ ನಾಡ ,ಡಾ.ಬಿ.ಪುಷ್ಪ,ಸಮಾಜ ಸೇವಕರಾದ ಕೃಷ್ಣಯ್ಯ. ಕೆ, ಕೊಡಗು ಸಾಹಿತಿ ಡಾ.ಎಂ. ಡಿ.ಅಯ್ಯಪ್ಪ,ಹಾಸನದ ಸಮಾಜಸೇವಕ ಡಾ. ಎಂ. ಸಿ.ರಾಜು ಸೇರಿದಂತೆ ಹಲವಾರು ಸಾಧಕರಿಗೆ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!