ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ ವಾರ್ಡುಗಳ ವ್ಯಾಪ್ತಿ, ಸದಸ್ಯರ ಸ್ಥಾನಗಳ ಸಂಖ್ಯೆ, ಮೀಸಲಾತಿ ನಿಗದಿಪಡಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.
ತಾಲ್ಲೂಕಿನ 10 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 212 ಸ್ಥಾನಗಳಿದ್ದು, ಪರಿಶಿಷ್ಟ ಜಾತಿ 25, ಪರಿಶಿಷ್ಟ ಮಹಿಳೆ 32, ಪರಿಶಿಷ್ಟ ಪಂಗಡ 10, ಪರಿಶಿಷ್ಟ ಪಂಗಡ ಮಹಿಳೆ 16, ಹಿಂದುಳಿದ ವರ್ಗ 5, ಹಿಂದುಳಿದ ವರ್ಗ ಮಹಿಳೆ 12, ಹಿಂದುಳಿದ ವರ್ಗ ಬಿ 4, ಹಿಂದುಳಿದ ವರ್ಗ ಬಿ ಮಹಿಳೆ 1, ಸಾಮಾನ್ಯ 60, ಸಾಮಾನ್ಯ ಮಹಿಳೆಯರಿಗೆ 47 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಇದರಲ್ಲಿಎಮ್ಮಿಗನೂರು ಗ್ರಾ.ಪಂ.ನ 35 ಸ್ಥಾನಗಳ ಪೈಕಿ ಎಸ್ಸಿ 4, ಎಸ್ಸಿ ಮಹಿಳೆ 4, ಎಸ್ ಟಿ ಮಹಿಳೆ 1, ಬಿಸಿಎ 3, ಬಿಸಿಎ ಮಹಿಳೆ 3, ಬಿಸಿಬಿ 1, ಬಿಸಿಬಿ ಮಹಿಳೆ 1, ಸಾಮಾನ್ಯ 9, ಸಾಮಾನ್ಯ ಮಹಿಳೆಗೆ 9 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ನೆಲ್ಲುಡಿ ಗ್ರಾ.ಪಂ. 20 ಸ್ಥಾನಗಳ ಪೈಕಿ ಎಸ್ಸಿ 3, ಎಸ್ ಸಿ ಮಹಿಳೆ 4, ಎಸ್ ಟಿ 1 ಎಸ್ಟಿ ಮಹಿಳೆ 1, ಬಿಸಿಎ ಮಹಿಳೆ 1,ಸಾಮಾನ್ಯ 6, ಸಾಮಾನ್ಯ ಮಹಿಳೆ 4 ಸ್ಥಾನನಿಗದಿಪಡಿಸಲಾಗಿದೆ.
ಸಣಾಪುರ ಗ್ರಾ.ಪಂನ 22 ಸ್ಥಾನಗಳ ಪೈಕಿ ಎಸ್ ಸಿ 3, ಎಸ್ ಸಿ ಮಹಿಳೆ 4,,ಎಸ್ ಟಿ 1, ಎಸ್ ಟಿ ಮಹಿಳೆ 1,ಬಿಸಿಎ 1, ಬಿಸಿಎ ಮಹಿಳೆ 1, ಸಾಮಾನ್ಯ 6, ಸಾಮಾನ್ಯ ಮಹಿಳೆ 5 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ನಂ.10 ಮುದ್ದಾಪುರ ಗ್ರಾ.ಪಂ.ನ 24 ಸ್ಥಾನಗಳ ಪೈಕಿ ಎಸ್ಸಿ 3 , ಎಸ್ಸಿ ಮಹಿಳೆ 3, ಎಸ್ಟಿ 1, ಎಸ್ಟಿ ಮಹಿಳೆ 2,ಬಿಸಿಎ 1, ಬಿಸಿಎ ಮಹಿಳೆ 2, ಬಿಸಿಬಿ 1, ಸಾಮಾನ್ಯ 7, ಸಮಾನ್ಯ ಮಹಿಳೆ 5 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ರಾಮಸಾಗರ ಗ್ರಾ.ಪಂ.ನ 17 ಸ್ಥಾನಗಳ ಪೈಕಿ ಎಸ್ಸಿ 2, ಎಸ್ಸಿ ಮಹಿಳೆ 3, ಎಸ್ಟಿ ಮಹಿಳೆ 1, ಬಿಸಿಎ 1, ಬಿಸಿಎ ಮಹಿಳೆ 1, ಸಾಮಾನ್ಯ 5, ಸಾಮಾನ್ಯ ಮಹಿಳಿಯರಿಗೆ 4 ಸ್ಥಾನಗಳನ್ನು ನಿಗಸಿಪಡಿಸಲಾಗಿದೆ. ದೇವಸಮುದ್ರ ಗ್ರಾ.ಪಂ.ನ 19 ಸ್ಥಾನಗಳ ಪೈಕಿ ಎಸ್ಸಿ 1, ಎಸ್ಸಿ ಮಹಿಳೆ 2, ಎಸ್ಟಿ 1, ಎಸ್ಟಿ ಮಹಿಳೆ 2, ಬಿಸಿಎ ಮಹಿಳೆ 2, ಬಿಸಿಬಿ 1, ಸಾಮಾನ್ಯ 6, ಸಾಮಾನ್ಯ ಮಹಿಳೆಯರಿಗೆ 4 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಮೆಟ್ರಿ ಗ್ರಾ.ಪಂ.ನ 20 ಸ್ಥಾನಗಳ ಪೈಕಿ ಎಸ್ಸಿ 3, ಎಸ್ಸಿ ಮಹಿಳೆ 3, ಎಸ್ಟಿ 2, ಎಸ್ಟಿ ಮಹಿಳೆ 2, ಸಾಮಾನ್ಯ 5, ಸಾಮಾನ್ಯ ಮಹಿಳೆ 5 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ದೇವಲಾಪುರ ಗ್ರಾ.ಪಂ.ನ 16 ಸ್ಥಾನಗಳ ಪೈಕಿ ಎಸ್ಸಿ 1, ಎಸ್ಸಿ ಮಹಿಳೆ 2, ಎಸ್ಟಿ 1, ಎಸ್ಟಿ ಮಹಿಳೆ 1, ಬಿಸಿಎ ಮಹಿಳೆ 2, ಬಿಸಿಬಿ 1, ಸಾಮಾನ್ಯ 5, ಸಾಮನ್ಯ ಮಹಿಳೆಯರಿಗೆ 3 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಹಂಪಾದೇವನಹಳ್ಳಿ ಗ್ರಾ.ಪಂ.ನ 20 ಸ್ಥಾನಗಳ ಪೈಕಿ ಎಸ್ಸಿ 3, ಎಸ್ಸಿ ಮಹಿಳೆ 4, ಎಸ್ ಟಿ 1, ಎಸ್ ಟಿ ಮಹಿಳೆ 2, ಸಾಮಾನ್ಯ 6, ಸಾಮಾನ್ಯ ಮಹಿಳೆಯರಿಗೆ 4 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಸುಗ್ಗೇನಹಳ್ಳಿ ಗ್ರಾ.ಪಂ. 19 ಸ್ಥಾನಗಳ ಪೈಕಿಎಸ್ಸಿ 2, ಎಸ್ಸಿಮಹಿಳೆ 3, ಎಸ್ಟಿ 2, ಎಸ್ಸಿಮಹಿಳೆ 3, ಸಾಮಾನ್ಯ 5, ಸಾಮಾನ್ಯ ಮಹಿಳೆಯರಿಗೆ 4 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಕಂಪ್ಲಿ ತಾಲ್ಲೂಕಿನ 10 ಗ್ರಾಮ ಪಂಚಾಯತಿಗಳ ಕ್ಷೇತ್ರ ವ್ಯಾಪ್ತಿ, ಸ್ಥಾನಗಳು, ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಮಾಹಿತಿಯನ್ನುಆಯಾ ಗ್ರಾಮ ಪಂಚಾಯತಿಗಳ ಸೂಚನಾಫಲಕದಲ್ಲಿ ಪ್ರಕಟಿಸಲಾಗುವುದು.
- ಆರ್.ಕೆ.ಶ್ರೀಕುಮಾರ್. ತಾ.ಪಂ.ಇಒ.ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್




















