ಬಳ್ಳಾರಿ / ಕುರುಗೋಡು : ತಾಲ್ಲೂಕಿನ ಗ್ರಾಮವೊಂದರ ನಿವಾಸಿ ರಾಜಶೇಖರ ಎನ್ನುವ ಯುವಕನ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ, ಪೋಕ್ಸೊ ಮತ್ತು ಅತ್ಯಾಚಾರ ಸೇರಿ ಮೂರು ಪ್ರಕರಣ ದಾಖಲಾಗಿವೆ.
ತಾಲ್ಲೂಕಿನ ಗ್ರಾಮವೊಂದರ ಬಾಲಕಿಯನ್ನು 11 ನವೆಂಬರ್ 2025 ರಂದು ವಿವಾಹವಾಗಿದ್ದ ನಂತರ ಗರ್ಭವತಿಯಾದ ಬಾಲಕಿಯನ್ನು ಹೆರಿಗೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 15 ರಂದು ಬೆಳಿಗ್ಗೆ ಗಂಡು ಮಗುವಿಗೆ ಜನ್ಮನೀಡಿದ ಬಾಲಕಿ ಹೆಚ್ಚು ರಕ್ತಸ್ರಾವವಾಗಿ ಅಂದೇ ರಾತ್ರಿ ಮೃತಪಟ್ಟಿದ್ದಾರೆ.
ಮೃತ ಬಾಲಕಿಯ ಮಾವ ನೀಡಿದ ದೂರಿನ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಶೇಖರನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















