ಬಳ್ಳಾರಿ / ಕಂಪ್ಲಿ: ಗ್ಯಾಲಕ್ಸಿ ಎಜು ಇನ್ನೋವೇಷನ್ ಸಂಸ್ಥೆ ಚಿತ್ರದುರ್ಗದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಸಿದ ಎಂಟನೇ ಅಬಾಕಸ್ ಮತ್ತು ಮಾನಸಿಕ ಗಣಿತ ಸ್ಪರ್ಧೆಯಲ್ಲಿ ಸ್ಥಳೀಯ ಎ-1 ಅಬಾಕಸ್ ಸೆಂಟರ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಸೆಂಟರ್ ನಿಂದ ಒಟ್ಟು 56 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಲಿಖಿದ್ ಕಲ್ಯಾಣ್, ಜಿ.ನಿಹಾಲ್, ಎಂ.ತಸ್ಮಿಯಾ, ಎಂ.ಸಮೀರ್ ಹಾಗೂ ಬಿ.ಸಾತ್ವಿಕ್ ಇವರು ಚಾಂಪಿಯನ್ ಆಗಿದ್ದಾರೆ.
ಉಳಿದವರಲ್ಲಿ ಏಳು ವಿದ್ಯಾರ್ಥಿಗಳು ಮೊದಲ ರನ್ನರ್ ಅಪ್, ಏಳು ವಿದ್ಯಾರ್ಥಿಗಳು ಎರಡನೇ ರನ್ನರ್ ಅಪ್, ಏಳು ವಿದ್ಯಾರ್ಥಿಗಳು ಮೂರನೇ ರನ್ನರ್ ಅಪ್, ನಾಲ್ಕು ವಿದ್ಯಾರ್ಥಿಗಳು ನಾಲ್ಕನೇ ರನ್ನರ್ ಅಪ್ , ಐದು ವಿದ್ಯಾರ್ಥಿಗಳು ಐದನೇ ರನ್ನರ್ ಅಪ್ ಆಗಿ, ಮೂರು ವಿದ್ಯಾರ್ಥಿಗಳು ಆರನೇ ರನ್ನರ್ ಅಪ್ ಆಗಿ, ಆರು ವಿದ್ಯಾರ್ಥಿಗಳು ಏಳನೇ ರನ್ನರ್ ಅಪ್ ಆಗಿ ಹಾಗೂ 12 ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದು ಸೆಂಟರ್ ನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಎ – 1 ಅಬಾಕಸ್ ಸಂಸ್ಥೆಯ ಮುಖ್ಯಸ್ಥ ಬೆಲ್ಲದ್ ಗಿರೀಶ್ ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಸ್ಥ ಬೆಲ್ಲದ ಗಿರೀಶ್, ಸಹಾಯಕಿಯರಾದ ಭಾರತಿ, ಶಿಲ್ಪಾ, ಉಷಾ, ಜ್ಯೋತಿ, ವೈಷ್ಣವಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















